Take a fresh look at your lifestyle.

ರೀಡ್ ಅಂಡ್ ಟೇಲರ್ ಕಾರ್ಮಿಕರ ಪ್ರತಿಭಟನೆ 

22 ವರ್ಷಗಳು ಕೆಲಸ ಮಾಡಿದ ಕಾರ್ಮಿಕ ರಿಗೆ ಕೆಲಸ ಹಾಗೂ ಸೂಕ್ತ ಪರಿಹಾರ ಎರಡೂ ಇಲ್ಲದಂತಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ

0
post ad

ಮೈಸೂರು :  ರೀಡ್ ಅಂಡ್ ಟೇಲರ್ (ಕ್ರಿಹಾನ್ ಟೆಕ್ಸ್ ಕೆಮ್) ಕಾರ್ಖಾನೆ ಕಳೆದ ವರ್ಷ ವಜಾ ಮಾಡಿದ್ದ

ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

 250 ಖಾಯಂ ಕಾರ್ಮಿಕರಿಗೆ ಈ ಸಂಸ್ಥೆ ಕೆಲಸ ನಿರಾಕರಿಸಿ ಬೀದಿ ಪಾಲು ಮಾಡಿದೆ ಎಂದು ಆರೋಪಿಸಿ

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ರೀಡ್ ಅಂಡ್ ಟೇಲರ್ ಎಂಪ್ಲಾಯಿಸ್ ಯೂನಿಯನ್‍ ಸದಸ್ಯರು ಹೋರಾಟ ಹಮ್ಮಿಕೊಂಡಿದ್ದರು.
ಎರಡು ದಶಕಗಳಿಂದ ಕಾರ್ಖಾನೆಯಲ್ಲಿ

ಸುಮಾರು 820 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಆಡಳಿತ ವರ್ಗ 2020ರ ಮಾ.17ರಂದು ಕೋವಿಡ್ ನೆಪದಲ್ಲಿ ವೇತನ ಸಹಿತ ರಜೆ ಘೋಷಣೆ ಮಾಡಿತ್ತು. ಬಳಿಕ ಎನ್‍ಸಿಎಲ್‍ಟಿ ನ್ಯಾಯಾಲಯ ನೇಮಕ ಮಾಡಿದ್ದ ಲಿಕ್ವಿಡೇಟರ್ ಅವರ ಮೂಲಕ ಎಲ್ಲಾ ಕಾರ್ಮಿಕರನ್ನು 2020ರ ಮೇ 15ರಂದು ಕಾನೂನುಬಾಹಿರವಾಗಿ ವಿಸರ್ಜನೆ ಮಾಡಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಾಲೀಕರೇ ಹೊಸ ಹೆಸರಿನಲ್ಲಿ ಕಾರ್ಖಾನೆ ಖರೀದಿಸಿ ಕೆಲವು ಕಾರ್ಮಿಕರೊಂದಿಗೆ ಕಾನೂನು ಬಾಹಿರವಾಗಿ ಒಳ ಒಪ್ಪಂದ ಮಾಡಿಕೊಂಡು 565 ಕಾರ್ಮಿಕರನ್ನು ಮಾತ್ರ ಮತ್ತೆ ನೇಮಕ ಮಾಡಿಕೊಂಡು ಕಾರ್ಖಾನೆ ನಡೆಸುತ್ತಿದ್ದಾರೆ. ಆದರೆ ಉಳಿದ 250 ಕಾರ್ಮಿಕರಿಗೆ ಕಾನೂನುಬಾಹಿರ ವಾಗಿ ಕೆಲಸ ನಿರಾಕರಣೆ ಮಾಡಿ, ಬೀದಿಪಾಲು ಮಾಡಲಾಗಿದೆ ಎಂದು ಆರೋಪಿಸಿದರು.

ಮತ್ತೆ ಕೆಲಸಕ್ಕೆ ನೇಮಕಗೊಂಡವರ ವೇತನದಲ್ಲಿ ಕಡಿತ ಮಾಡಿ, ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಪರಿಹಾರ ಕೊಡುವುದಾಗಿ ಹೇಳುತ್ತಿದ್ದಾರೆ. ಇದರಿಂದ 22 ವರ್ಷಗಳು ಕೆಲಸ ಮಾಡಿದ ಕಾರ್ಮಿಕ ರಿಗೆ ಕೆಲಸ ಹಾಗೂ ಸೂಕ್ತ ಪರಿಹಾರ ಎರಡೂ ಇಲ್ಲದಂತಾಗಿದೆ. ಖಾಯಂ ಕಾರ್ಮಿಕರಾದ ನಮಗೆ ಕೆಲಸ ನೀಡದೇ ಹೊರ ರಾಜ್ಯದಿಂದ ಗುತ್ತಿಗೆಯಡಿ ಕಾರ್ಮಿಕರನ್ನು ಕರೆತಂದು ಕೆಲಸ ಕೊಟ್ಟಿದ್ದಾರೆ ಎಂದು ದೂರಿದರು. ಕಾರ್ಮಿಕ ಮುಖಂಡರಾದ ಮಹದೇವ, ಗೋವಿಂದಸ್ವಾಮಿ, ಗಾಡಿ ರವಿ, ಸುನಿತಾಬಾಯಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.