Take a fresh look at your lifestyle.

ಶೀಘ್ರದಲ್ಲಿ ನಿರುದ್ಯೋಗ ಭತ್ಯೆ ಮಾನದಂಡಗಳ ಸಡಿಲಿಕೆ

ಆಗಸ್ಟ್ 20ರಂದು ನಡೆಯುವ ಸಭೆಯಲ್ಲಿ ಮಂಡಿಸಲಿರುವ ಈ ಪ್ರಸ್ತಾವನೆಯು 32 ದಶಲಕ್ಷ ಇಎಸ್ ಐಸಿ ಚಂದಾದಾರರಿಗೆ ಉಪಯುಕ್ತವಾಗಲಿದೆ.

0
post ad

ನವದೆಹಲಿ : ರಾಜ್ಯ ಕಾರ್ಮಿಕರ ವಿಮಾ ನಿಗಮ ಯೋಜನೆಯಡಿ ನಿರುದ್ಯೋಗ ಪ್ರಯೋಜನಗಳನ್ನು ಪಡೆಯಲು ಅರ್ಹತೆಯ ಮಾನದಂಡವನ್ನು ಗಣನೀಯವಾಗಿ ಸಡಿಲಿಸುವ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ವು ಶೀಘ್ರದಲ್ಲೇ ಮಂಡಿಸಲಿದೆ. ಕಡೆಯ ಬಾರಿ ಪಡೆದ ವೇತನದಲ್ಲಿ ಶೇ.50ರಷ್ಟು ಮತ್ತು ಬೆಂಬಲ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾಪವನ್ನು ಸಭೆಯ ಮುಂದಿಡಲಿದೆ.
ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಈ ಪ್ರಯೋಜನವನ್ನು ಪಡೆಯಬೇಕೆಂಬ ಷರತ್ತನ್ನು ತೆಗೆದುಹಾಕಲು ಮತ್ತು ಪ್ರಯೋಜನದ ಅವಧಿಯನ್ನು ಹೆಚ್ಚಿಸಲು ಇದು ಉದ್ದೇಶಿಸಿದೆ.
ಆಗಸ್ಟ್ 20ರಂದು ನಿಗಮದ ಸಭೆಯಲ್ಲಿ ಮಂಡಿಸಲಾಗುವ ಈ ಪ್ರಸ್ತಾವನೆಯು 32 ದಶಲಕ್ಷ ಇಎಸ್ ಐಸಿ ಚಂದಾದಾರರಿಗೆ ಪ್ರಯೋಜನವಾಗಲಿದೆ.
ಈ ಪ್ರಸ್ತಾವಣೆಗೆ ಪ್ರಧಾನ ಮಂತ್ರಿ ಕಚೇರಿಯ ಬೆಂಬಲ ವಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ವಿದೇಶಗಳಲ್ಲಿ ಜಾರಿಯಲ್ಲಿರುವ ನಿರುದ್ಯೋಗ ಭತ್ಯೆಯ ಮಾದರಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗ ನಷ್ಟ ಉಂಟಾದರೆ, ಹೆಚ್ಚಿನ ಸಂಖ್ಯೆಯ ಜನರಿಗೆ ಪ್ರಯೋಜನವನ್ನುಂಟುಮಾಡಲು ಈಗಿರುವ ನಿಬಂಧನೆಗಳಲ್ಲಿ ಕೆಲವು ಬದಲಾವಣೆಗಳನ್ನು ತರಬೇಕೆಂದು ಸರ್ಕಾರ ಚಿಂತಿಸುತ್ತಿದೆ.

ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪಿ ಬಂದ್ ಮಾಡಿದ್ದರಿಂದ ಎಂಎಸ್ ಎಂಇ ವಲಯದ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ ಯನ್ನು ಎದುರಿಸುತ್ತಿದ್ದಾರೆ.
ಕಳೆದ ಬಾರಿ ಪಡೆದ ಸಂಬಳದ ಶೇ.50ರಷ್ಟು ವಿಮಾ ಮೊತ್ತವನ್ನು ದ್ವಿಗುಣಗೊಳಿಸಿ, ಮೂರು ತಿಂಗಳಿನಿಂದ ಆರು ತಿಂಗಳಿಗೆ ಪ್ರಯೋಜನದ ಅವಧಿಯನ್ನು ವಿಸ್ತರಿಸುವುದು, ಎರಡು ವರ್ಷಗಳ ಕನಿಷ್ಠ ಕೆಲಸದ ಅಗತ್ಯವನ್ನು 78 ದಿನಗಳಿಗೆ ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ.
ಇಎಸ್ ಐಸಿಯ ಅಟಲ್ ಬಿಮಾ ಕಲ್ಯಾಣ ಯೋಜನೆಯಡಿ ಸರಕಾರ ಮಾಸಿಕ ವೇತನದ ಶೇ 25ರಷ್ಟು ಭಾಗವನ್ನು ಮೂರು ತಿಂಗಳ ನಿರುದ್ಯೋಗ ಭತ್ಯೆ ನೀಡುತ್ತಿದೆ‌. ಆದರೆ, ಕನಿಷ್ಠ ಎರಡು ವರ್ಷಗಳ ಕಾಲ ಇಎಸ್ ಐಸಿ ಚಂದಾದಾರರಾಗಿರುವ ಮಾತ್ರ ಇದರಿಂದ ಲಾಭವಾಗಲಿದೆ.
ಇದು ಎಲ್ಲ ಕಾರ್ಖಾನೆಗಳಿಗೆ ಮತ್ತು ಕನಿಷ್ಠ 10 ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಇಎಸ್ ಐಸಿ ಪ್ರಸ್ತುತ 31.9 ದಶಲಕ್ಷ ಚಂದಾದಾರರನ್ನು ಹೊಂದಿದ್ದು, 91,444.07 ಕೋಟಿ ನಿಧಿಯನ್ನು ಹೊಂದಿದೆ. ಇದರಲ್ಲಿ 23,151.77 ಕೋಟಿಯನ್ನು ಮೀಸಲು ನಿಧಿಯಾಗಿ ಮೀಸಲಿಡಲಾಗಿದೆ.