Take a fresh look at your lifestyle.

ಅಗಸರು ಹಾಗೂ ಕ್ಷೌರಿಕರಿಗೆ ಒಂದು ಬಾರಿ ರೂ 5000ಗಳ ನೆರವು

0
post ad

ಕೋವಿಡ್-19ರ ತಡೆಗೆ ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕವಾಗಿ ನಷ್ಟವಾಗಿರುವುದರಿಂದ ಸರ್ಕಾರದ ವತಿಯಿಂದ ಹಲವು ವರ್ಗದವರಿಗೆ ಪರಿಹಾರ ಧನವನ್ನು ಘೋಷಿಸಲಾಗಿದೆ. ಅದರಲ್ಲಿ ಅಗಸರು ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಒಂದು ಬಾರಿ ಪರಿಹಾರವಾಗಿ ರೂ.5,000/-ಗಳ ನೆರವನ್ನು ನೀಡಲಾಗುವುದು.

ಸದರಿ ವೃತ್ತಿಯಲ್ಲಿ ತೊಡಗಿರುವ ಅರ್ಹ ಫಲಾನುಭವಿಗಳು https://sevasindhu.karnataka.gov.in/ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಸರ್ಕಾರವು ಅವುಗಳನ್ನು ಪರಿಶೀಲಿಸಿ ಫಲಾನುಭವಿಗಳ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ತಲಾ ರೂ.5000/-ಗಳ ಪರಿಹಾರವನ್ನು ವರ್ಗಾಯಿಸುತ್ತದೆ.

ಷರತ್ತುಗಳು:

ವಯೋಮಿತಿ: 18 ರಿಂದ 65 ವರ್ಷಗಳು
ಕುಟುಂಬದಲ್ಲಿ ಒಬ್ಬರಿಗೆ ಮಾತ್ರ.
ಕರ್ನಾಟಕದಲ್ಲಿ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ವಲಸೆ ಕಾರ್ಮಿಕರು ಸಹ ಅರ್ಹರು. (ಕರ್ನಾಟಕ ರಾಜ್ಯದ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದಲ್ಲಿ).
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ
ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ..
ಅರ್ಜಿದಾರರು ವ್ಯಾಲಿಡ್ ಮೊಬೈಲ್ ಸಂಖ್ಯೆಯನ್ನು ಹೊಂದಿರತಕ್ಕದ್ದು.

ಗ್ರಾಮೀಣ ಭಾಗಗಳಲ್ಲಿದ್ದು, ಆಯಾ ಸಮಾಜಗಳಲ್ಲಿ ನೋಂದಣಿಯಾಗದವರು ಸಹ ಅರ್ಜಿ ಸಲ್ಲಿಸಬಹುದು,
1. ಬಿ.ಬಿ.ಎಂ.ಪಿ ವ್ಯಾಪ್ತಿ:- ವಾರ್ಡ್ ಗಳ ಮಟ್ಟದಲ್ಲಿ ನ ಕಂದಾಯ ಅಧಿಕಾರಿ/ ಕಂದಾಯ
ನಿರೀಕ್ಷಕರು / ಹಿರಿಯ ಆರೋಗ್ಯ ಅಧಿಕಾರಿಗಳು / ಆರೋಗ್ಯ ನಿರೀಕ್ಷಕರು
2. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳು:- ಮಹಾನಗರ ಪಾಲಿಕೆ/ನಗರ
ಸಭೆ/ಪುರಸಭೆ/ಪಟ್ಟ ಣ ಪಂಚಾಯ್ತಿಯ ಕಂದಾಯ ಅಧಿಕಾರಿ/ಕಂದಾಯ ನಿರೀಕ್ಷಕರು
3. ತಾಲ್ಲೂಕು ಮಟ್ಟ:- ಕಂದಾಯ ಇಲಾಖೆಯ ತಹಶೀಲ್ದಾರರು/ ಉಪ ತಹಶೀಲ್ದಾರರು/
ಕಂದಾಯ ನಿರೀಕ್ಷಕರು
4. ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು / ಕಾರ್ಮಿಕ ಅಧಿಕಾರಿಗಳು /
ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರು
5. ಗ್ರಾಮ ಪಂಚಾಯಿತಿ ವ್ಯಾಪ್ತಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿ
ಮೇಲಿನ ಅಧಿಕಾರಿಗಳಿಂದ ದೃಡೀಕರಣ ಪತ್ರ ಪಡೆದು ಆನ್ ಲೈನ್ ಅರ್ಜಿ ಸಲ್ಲಿಸಬಹುದು..

ಪೂರಕ ದಾಖಲೆಗಳು:

ಅಗಸ/ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಕುರಿತು ನಿಗದಿತ ನಮೂನೆಯಲ್ಲಿ ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ.
ನಿಗದಿತ ನಮೂನೆಯಲ್ಲಿ ಸ್ವಯಂ ಘೋಷಣೆ.
ಬಿ.ಪಿ.ಎಲ್ ಕಾರ್ಡ್
ಆಧಾರ್ ಕಾರ್ಡ್
ಜನ್ಮ ದಿನಾಂಕ ದಾಖಲೆ.
ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.

ಸೇವಾ ಸಿಂಧು ಪೊರ್ಟ್‍ಲ್‍ನಲ್ಲಿ ಅರ್ಜಿಯ ಸಂಸ್ಕರಣೆಯ ವಿಧಾನ

ಅರ್ಜಿದಾರರು ಅರ್ಜಿಯನ್ನು ಸೇವಾ ಸಿಂಧು ಪೋರ್ಟ್‍ಲ್ ಮೂಲಕ ಮೇಲ್ಕಂಡ ದಾಖಲೆಗಳೊಂದಿಗೆ ಸಲ್ಲಿಸುವುದು.
ಅರ್ಜಿ ಸಲ್ಲಿಸಿದ ಪ್ರತಿ ಅರ್ಜಿದಾರರಿಗೆ ಅರ್ಜಿ ಸ್ವೀಕೃತಿಯ ಕುರಿತು ವಿಶಿಷ್ಠ ಗುರುತಿನ ಸಂಖ್ಯೆಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲಾಗುವುದು.
ನೋಂದಾಯಿತ ಅರ್ಜಿದಾರರು ಅರ್ಜಿ ಸ್ವೀಕೃತಿಯ ಸಮಯದಲ್ಲಿ ಪಡೆದ ವಿಶಿಷ್ಠ ಗುರುತಿನ ಸಂಖ್ಯೆಯನ್ನು ಬಳಸಿ ಸಲ್ಲಿಸಿದ ಅರ್ಜಿಯ ಸ್ಥಿತಿಯ ಕುರಿತು ಮಾಹಿತಿ ಪಡೆಯಬಹುದು.
ಸಲ್ಲಿಸಿದ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ/ಪರಿಶೀಲನೆಗಾಗಿ ಕಳುಹಿಸಲಾಗುವುದು.
ಸೂಕ್ತ ಪರಿಶೀಲನೆಯ ನಂತರ, ಅರ್ಹ ಫಲಾನುಭವಿಗಳ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ಡಿ.ಬಿ.ಟಿ. ಮೂಲಕ ನೇರ ವರ್ಗಾವಣೆ ಮಾಡಲಾಗುವುದು.