Take a fresh look at your lifestyle.

ಆರ್ ವಿ ಕಾಲೇಜಿನ ಕಾನೂನು ಬಾಹಿರ ಪಿಹೆಚ್ ಡಿ ಬೋಧಕರ ವಿರುದ್ಧ ಕ್ರಮಕ್ಕೆ ಒತ್ತಾಯ

ಕಾಲೇಜಿನ ಪ್ರಾಂಶುಪಾಲರಾಗಿರುವ ಕೆ.ಎನ್‌.ಸುಬ್ರಮಣ್ಯರವರೇ ಯುಜಿಸಿ ನಿಯಮಾಗಳಿಗಳನ್ನು ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ.

0
post ad

ಬೆಂಗಳೂರು : ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ ಪಿಎಚ್‌ಡಿ ಪದವಿಯನ್ನು ಪಡೆದು ಆರ್‌.ವಿ. ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ನಲ್ಲಿ ಬೋಧಕರಾಗಿ ಸೇವೆ ಸಲ್ಲಿಸುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಲು  ಕಾರ್ಮಿಕ ಮುಖಂಡ  ಜಿ ಆರ್ ಶಿವಶಂಕರ್ ರವರು ಒತ್ತಾಯಿಸಿದರು.
ಆ ಕಾಲೇಜಿನ ಪ್ರಾಂಶುಪಾಲರಾಗಿರುವ  ಕೆ.ಎನ್‌.ಸುಬ್ರಮಣ್ಯರವರೇ ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕೊಯಮತ್ತೂರಿನ ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್‌.ಡಿ ಪಡೆದಿರುವುದು ಕಾನೂನುಬಾಹಿರವಾಗಿದ್ದು, ಇವರ ವಿರುದ್ಧ ಕಾನೂನು ಕ್ರಮಕ್ಕೆ ಆರ್‌.ವಿ. ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಬೋಧಕೇತರ ಸಿಬ್ಬಂದಿ ಸಂಘದ ಅಧ್ಯಕ್ಷರಾಗಿರುವ ಶಿವಶಂಕರ್ ಆಗ್ರಹಿಸಿದರು.

ಶಿವಶಂಕರ್ ರವರು ಆರೋಪಿಸಿರುವ ಆರೋಪಗಳು :
* ಯುಜಿಸಿ ಅನುಮತಿ ಇಲ್ಲದೇ ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆರ್‌.ವಿ.ಕಾಲೇಜಿನ ಪುರುಷ ಪ್ರಾಧ್ಯಾಪಕರು ಪಿಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ. ಈ ವಿಶ್ವವಿದ್ಯಾನಿಲಯದಲ್ಲಿ ಯುಜಿಸಿ ನಿಯಮಾವಳಿ ಪ್ರಕಾರ ಪುರುಷರಿಗೆ ಅವಕಾಶವಿರುವುದಿಲ್ಲ.
* ಆರ್‌.ವಿ. ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಮತ್ತು ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯ, ಕೊಯಮತ್ತೂರು ಒಪ್ಪಂದ ಮಾಡಿಕೊಂಡು ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ಪಿಎಚ್‌ಡಿ ಪದವಿ ಮಾಡಲು ಅವಿನಾಶಿಲಿಂಗಂ ಮಹಿಳಾ
ವಿಶ್ವವಿದ್ಯಾಲಯ ಅನುಮತಿ ನೀಡಿರುತ್ತದೆ.
* ಶ್ರೀಯುತ ಕೆ.ಎನ್‌.ಸುಬ್ರಮಣ್ಯರವರು ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯದಲ್ಲಿ ಯಾವುದೇ ಅಧಿಕೃತ ಪತ್ರವನ್ನು
ಕೊಡದೇ ಅಲ್ಲಿ ವ್ಯಾಸಾಂಗವನ್ನು ಮಾಡಿರುತ್ತಾರೆ. ಇದು ಕಾನೂನುಬಾಹಿರ.
* ಪೂರ್ಣಾವಧಿ ಪಿ.ಎಚ್‌.ಡಿ ವಿದ್ಯಾರ್ಥಿಯಾಗಿ, ಯಾವುದೇ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಬಾರದು ಎಂಬ ನಿಬಂಧನೆ ಇದೆ. ಆದರೆ, ಆರ್‌.ವಿ. ಕಾಲೇಜ್‌ನಲ್ಲಿ ಪ್ರಾಂಶುಪಾಲರು ಮತ್ತು ಇತರೇ ಪುರುಷ ಪ್ರಾಧ್ಯಾಪಕರು ಪೂರ್ಣಾವಧಿ ವಿದ್ಯಾರ್ಥಿಯಾಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಬೋಧನೆ, ಪರೀಕ್ಷೆ ಮೌಲ್ಯಮಾಪನ, ಪರೀಕ್ಷಾ ಸಂಚಾಲಕರಾಗಿ ಕೆಲಸ ಮಾಡಿರುವುದು ಕಾನೂನುಗಳಿಗೆ ವಿರುದ್ಧವಾದುದು.
* ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಪೂರ್ಣಾವಧಿ ಪಿ.ಎಚ್‌.ಡಿ. ಗೆ ಸಂಶೋಧನಾ ಅವಧಿಯು ಪ್ರವೇಶಾತಿ ಪಡೆದ ನಂತರ ಕನಿಷ್ಠ ಮೂರು ವರ್ಷಗಳು ಆಗಿರುತ್ತದೆ. ಆದರೆ ಪ್ರಾಂಶುಪಾಲರಾದ ಸುಬ್ರಮಣ್ಯರವರು ಸಂಶೋಧನಾ ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಎರಡು ವರ್ಷ ಎಂಟು ತಿಂಗಳಲ್ಲಿ ಪಿ.ಎಚ್‌.ಡಿ. ಪದವಿಯನ್ನು ಪಡೆದುಕೊಂಡಿರುತ್ತಾರೆ. ಇದು ಕಾನೂನುಬಾಹಿರ ಪದವಿ ಪಿ.ಎಚ್‌.ಡಿ. ಪ್ರಧಾನವಾಗಿರುತ್ತದೆ.
* ಆರ್‌.ವಿ. ಕಾಲೇಜ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಾವಧಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸುದರ್ಶನ್‌ರವರು ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ ಸಂಶೋಧನಾ ವಿದ್ಯಾರ್ಥಿಯಾಗಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪಿ.ಎಚ್‌.ಡಿ. ಪದವಿಯನ್ನು ಪಡೆದುಕೊಂಡಿರುತ್ತಾರೆ. ಇವರು ಸಹ ಏಕ ಕಾಲದಲ್ಲಿ ಎರಡು ಕಾರ್ಯಗಳನ್ನು ನಿರ್ವಹಿಸಿರುವುದು ಕಾನೂನುಬಾಹಿರವಾಗಿದೆ.
* ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಬೋಧನೆ ಮಾಡುತ್ತಾ ಪಿ.ಎಚ್‌.ಡಿ. ಪೂರ್ಣಾವಧಿಯ ಸಂಶೋಧನೆಯನ್ನು
ಮರೆಮಾಚಿ  ಕಮಿಟಿಗಳಿಂದ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರುವುದು ಕಾನೂನುಬಾಹಿರ.

ಈ ಅಕ್ರಮ ಪಿಹೆಚ್‌ಡಿ ಬೋಧಕರ ಬಗ್ಗೆ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಉನ್ನತ ಶಿಕ್ಷಣ ವಿಭಾಗದ ಮಂತ್ರಿಗಳು, ಉನ್ನತಾಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ, ಅಕ್ರಮವಾಗಿ ಪಡೆದಿರುವ ಪಿ.ಎಚ್‌.ಡಿ. ಪದವಿಗಳ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಶಿಸ್ತಿನ ಕ್ರಮ ಜರಗಿಸಲು ಶಿವಶಂಕರ್ ರವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಟಿಯುಸಿಸಿ ರಾಜ್ಯ ಕಾರ್ಯದರ್ಶಿ ಎಂ.ಜಡ್ ಅಲಿಯವರು ಉಪಸ್ಥಿತರಿದ್ದರು.