Take a fresh look at your lifestyle.

ಟಿಯುಸಿಸಿ ವತಿಯಿಂದ ಭಾರತ ಉಳಿಸಿ ಚಳುವಳಿ

ಭಾರತ ರಕ್ಷಿಸಿ ಆಂದೋಳನಕ್ಕೆ ಬೆಂಬಲ ಸೂಚಿಸಿ ಕಾರ್ಯಕ್ರಮದ ಆಯೋಜನೆ

0
post ad

ಬೆಂಗಳೂರು : ಆಗಸ್ಟ್ 9 ‘ಕ್ವಿಟ್ ಇಂಡಿಯಾ’ ಚಳುವಳಿ ಆಚರಣೆ ದಿನ, ಕ್ವಿಟ್ ಇಂಡಿಯಾ ಆಚರಣೆಯ ಜೊತೆಗೆ ಇಂದು ಟಿಯುಸಿಸಿ ಸಂಘಟನೆ ಭಾರತ ಉಳಿಸಿ ಚಳುವಳಿಯನ್ನು ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿತ್ತು.
ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಾಳೆ ಹಮ್ಮಿಕೊಂಡಿರುವ ಭಾರತ ರಕ್ಷಿಸಿ ಆಂದೋಲನಕ್ಕೆ ಬೆಂಬಲ ಸೂಚಿಸಿ ಟಿಯುಸಿಸಿ ವತಿಯಿಂದ ಭಾರತ ಉಳಿಸಿ ಚಳುವಳಿಯನ್ನು ಇಂದು ರಾಜ್ಯಾದ್ಯಂತ ಕೈಗೊಳ್ಳಲಾಗಿತ್ತು. ಬಸವೇಶ್ವರ ನಗರದಲ್ಲಿರುವ ಕಚೇರಿಯ ಮುಂದೆ ಕಾರ್ಮಿಕರು, ಕಾರ್ಮಿಕ ಮುಖಂಡರು, ಪದಾಧಿಕಾರಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ನೀತಿಗಳ ಬಗೆಗೆ ಆಕ್ರೋಶವನ್ನು ಹೊರಹಾಕಿದರು. ಬೆಳಗ್ಗೆ ಹತ್ತು ಗಂಟೆಗೆ ಟಿಯುಸಿಸಿ ಅಧ್ಯಕ್ಷ ಜಿ ಆರ್ ಶಿವಶಂಕರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂರಾರು ಕಾರ್ಖಾನೆಗಳ ಕಾರ್ಮಿಕರು, ಯುನಿಯನ್ ಗಳ ಪದಾಧಿಕಾರಿಗಳು ಬಿತ್ತಿ ಪತ್ರಗಳನ್ನು, ಪ್ಲೆಕ್ಸ್ ಗಳನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ಜಿ ಆರ್ ಶಿವಶಂಕರ್ ನಾಳೆ ದೇಶಾದ್ಯಂತ ಭಾರತ ರಕ್ಷಿಸಿ ಆಂದೋಳನವನ್ನು ಫ್ರಿಡಂಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಇದಕ್ಕೆ ಬೆಂಬಲವನ್ನು ಸೂಚಿಸುತ್ತ ಇಂದು ಭಾರತ ಉಳಿಸಿ ಚಳುವಳಿಯನ್ನು ಕ್ವಿಟ್ ಇಂಡಿಯಾ ಚಳುವಳಿ
ದಿನದಂದು ಹಮ್ಮಿಕೊಳ್ಳಲಾಗಿರುವುದು ಸಂತಸದ ವಿಷಯ. ಇಂದು ಕೇಂದ್ರ, ರಾಜ್ಯ ಸರ್ಕಾರಗಳು ಸಾರ್ವಜನಿಕರ ಉದ್ದಿಮೆಗಳ ಸಂಪೂರ್ಣ ನಿರ್ಣಾಮಕ್ಕೆ ಪ್ರಯತ್ನಿಸುತ್ತಿವೆ. ರೈಲ್ವೆ ಇಲಾಖೆಯನ್ನೆ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿದೆ, ಇದು ಆತಂಕದ ಮತ್ತು ಭವಿಷ್ಯದ ನಿರ್ನಾಮದ ಕ್ರಮವೆಂದರು. ಇದಕ್ಕಾಗಿಯೇ ಕ್ವಿಟ್ ಇಂಡಿಯಾ ರೀತಿಯಲ್ಲಿ ದೇಶದಲ್ಲಿ ಹೊಸ ಹೋರಾಟ ಆರಂಭವಾಗಬೇಕಿದೆ ಎಂದರು. ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಸಾರ್ವಜನಿಕ ಉದ್ದಿಮೆಗಳ ಕೇಂದ್ರ ಬಿಂದುವಾಗಿದ್ದ ಬೆಂಗಳೂರಿನಲ್ಲಿ ಹಲವಾರು ಕಾರ್ಖಾನೆಗಳು ಬಾಗಿಲು ಮುಚ್ಚಿವೆ, ಕೆಲವು ಖಾಸಗೀಕರಣದ ಸನಿಹದಲ್ಲಿವೆ. ಇಂದಿನ ಸಂದರ್ಭದಲ್ಲಿ ನೇತಾಜಿ ವಾದವು ಜಾರಿಗೆ ತರಬೇಕಾಗಿದೆ ಎಂದರು.