Take a fresh look at your lifestyle.

ಹುಬ್ಬಳ್ಳಿಯಲ್ಲಿ ‘ಭಾರತ ಉಳಿಸಿ’ ಚಳುವಳಿ

ಭಾರತ ರಕ್ಷಿಸಿ ಚಳುವಳಿಗೆ ಬೆಂಬಲ ಸೂಚಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

0
post ad

ಹುಬ್ಬಳ್ಳಿ : ಆಗಸ್ಟ್ 9 ‘ಕ್ವಿಟ್ ಇಂಡಿಯಾ’ ಚಳುವಳಿ ಆಚರಣೆ ದಿನ, ಕ್ವಿಟ್ ಇಂಡಿಯಾ ಆಚರಣೆಯ ಜೊತೆಗೆ ಇಂದು ಟಿಯುಸಿಸಿ ಸಂಘಟನೆ ರಾಜ್ಯಾದ್ಯಂತ ಆಚರಿಸಲು ಕರೆಯನ್ನು ನೀಡಿತ್ತು.
ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಾಳೆ ಹಮ್ಮಿಕೊಂಡಿರುವ ಭಾರತ ರಕ್ಷಿಸಿ ಆಂದೋಲನಕ್ಕೆ ಬೆಂಬಲ ಸೂಚಿಸಿ ಇಂದು ಧಾರವಾಡ ಜಿಲ್ಲೆಯ ಹಲವಾರು ಕಾರ್ಮಿಕರು ಭಾರತ ಉಳಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದ ಎದುರು ಕಾರ್ಮಿಕರು, ಕಾರ್ಮಿಕ ಮುಖಂಡರು, ಪದಾಧಿಕಾರಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ನೀತಿಗಳ ಬಗೆಗೆ ಆಕ್ರೋಶವನ್ನು ಹೊರಹಾಕಿದರು. ಈ ವೇಳೆ ಕಾರ್ಮಿಕ ಮುಖಂಡರಾದ ಅಶೋಕ್ ಬಾರಕಿ, ವೆಂಕಟೇಶ್ ಪ್ಯಾಟಿ, ಕಿರಣ್, ವಿವೇಕ್ ಪಾಟೀಲ್, ಅನಿಲ್ ಗದಗ್, ಸಿರೀಶ್, ದ್ಯಾಮಣ್ಣ ಸವಣೂರು, ಅಶೋಕ್ ಹಿನ್ನಳ್ಳಿ ಮುಂತಾದವರು ಭಾಗವಹಿಸಿದ್ದರು.