Take a fresh look at your lifestyle.

ಫ್ರೀಡಂ ಪಾರ್ಕ್ ನಲ್ಲಿ ‘ಭಾರತ ರಕ್ಷಿಸಿ’ ಆಂದೋಲನ

ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಹೋರಾಟಕ್ಕೆ ಕೆಪಿಸಿಸಿ ಬೆಂಬಲ ಸೂಚಿಸಿ ಕಾರ್ಯಕ್ರಮದಲ್ಲಿ ಭಾಗಿ

0
post ad

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸುತ್ತ  ಕಾರ್ಮಿಕ ಸಂಘಟನೆಗಳು ಇಂದು ‘ಭಾರತ ರಕ್ಷಿಸಿ ಆಂದೋಲನವನ್ನು  ಆರಂಭಿಸಿದವು.
ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾನೂನು ರದ್ದು ಮಾಡಿರುವ ಕೇಂದ್ರ ಸರ್ಕಾರ ಕೃಷಿ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಸುಮಾರು 200ಕ್ಕೂ ಹೆಚ್ಚು  ಸಂಘಟನೆಗಳು ಇಂದು ಚಳುವಳಿಯನ್ನು ಆರಂಭಿಸಿದವು.
ಇಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಟ್ರೇಡ್ ಯೂನಿಯನ್ ಗಳ ಮುಖಂಡರು, ಪದಾಧಿಕಾರಿಗಳು, ಕಾರ್ಮಿಕರು ಪಾಲ್ಗೊಂಡಿದ್ದರು. ಎಐಟಿಯುಸಿನ  ಅನಂತ ಸುಬ್ಬರಾವ್, ಟಿಯುಸಿಸಿ ನ ಜಿಆರ್ ಶಿವಶಂಕರ್ ಸೇರಿದಂತೆ ಐಎನ್ ಟಿಯುಸಿ, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಐಸಿಸಿಟಿಯು, ಎಚ್ಎಂಕೆಪಿ, ಜಿಎಟಿಡಬ್ಲ್ಯುಯು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್,ಕಾರ್ಮಿಕ ವಿಭಾಗದ ಮುಖಂಡ ಎಸ್‌.ಎಸ್.ಪ್ರಕಾಶಂ ಪ್ರತಿಭಟನೆಯಲ್ಲಿ ಪಾಲ್ಗೊಂಡು ‘ಭಾರತ ರಕ್ಷಿಸಿ’ ಚಳುವಳಿಗೆ ಬೆಂಬಲ ವ್ಯಕ್ತ ಪಡಿಸಿದರು.

ಅಖಿಲ ಭಾರತ ಕಿಸಾನ್ ಮಹಾಸಭಾ,  ಸೇರಿದಂತೆ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಚಳವಳಿಯಲ್ಲಿ ಭಾಗವಹಿಸಿದ್ದವು. ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ  ಪ್ರತಿಭಟನೆ ನಡೆಸಲಾಗಿದ್ದು, ಹಲವೆಡೆ  ಬೈಕ್ ರಾಲಿ, ಪ್ರತಿಭಟನಾ ಮೆರವಣಿಗೆ, ಧರಣಿಯ ಮೂಲಕ ವಿವಿಧ ಸಂಘಟನೆಗಳು ಚಳವಳಿ ನಡೆಸಿದವು.