Take a fresh look at your lifestyle.

ಶ್ಮೆಟ್ಸ್ ಸೂಜಿ ಕಂಪನಿ ಲಾಕ್ ಔಟ್, ಕಾರ್ಮಿಕರು ಅತಂತ್ರ

ಕಂಪನಿ ಲಾಭದಲ್ಲಿ ನಡೆಯುತ್ತಿದ್ದರೂ ಕಾರ್ಮಿಕರು ಶಾಸನಾತ್ಮಕ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸುತ್ತಿರುವುದರಿಂದಲೇ ಲಾಕ್ ಔಟ್ ನಿರ್ಧಾರಕ್ಕೆ ಕಂಪನಿ ಬಂದಿದೆ ಎಂಬ ಆರೋಪ ಕೇಳಿ ಬರುತ್ತಿದೆ

0
post ad

ಬೆಂಗಳೂರು : ಜರ್ಮನ್ ಮೂಲದ ಸೂಜಿ ತಯಾರಿಕೆಯ ಕಂಪೆನಿಯಾದ ಶ್ಮೆಟ್ಸ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ತನ್ನ ಬೆಂಗಳೂರು ಘಟಕಕ್ಕೆ ಬೀಗಮುದ್ರೆಯನ್ನು ಘೋಷಿಸಿದೆ.
ಕುಂಬಳಗೋಡಿನಲ್ಲಿರುವ ಈ ಸೂಜಿ ಕಂಪನಿ ಮಂಗಳವಾರದಿಂದ ಲಾಕ್‌ಔಟ್‌ ಸೂಚನೆಯನ್ನು ಹೊರಡಿಸಿದ್ದು, ಕಾರ್ಮಿಕರು ಅತಂತ್ರರಾಗಿದ್ದಾರೆ. 2015 ರಿಂದಲೂ ಕಾರ್ಮಿಕರು, ಇನ್ ಕ್ರಿಮೆಂಟ್ ಮತ್ತು ವೇತನ ಹೆಚ್ಚಳದ ಬಗೆಗೆ
ಕಾರ್ಮಿಕರು ಆಡಳಿತ ಮಂಡಳಿಯ ಬಳಿ ಹಲವು ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇದೀಗ ಕಂಪೆನಿ ಏಕಾಏಕಿ ಮುಚ್ಚುವ ನಿರ್ಧಾರಕ್ಕೆ ಬಂದಿರುವುದರಿಂದ ಕಾರ್ಮಿಕರು ಅತಂತ್ರರಾಗಿದ್ದಾರೆ. ಕಾರ್ಮಿಕರು ಕಾರ್ಮಿಕ ಇಲಾಖೆಯ ಬಾಗಿಲು ತಟ್ಟಲು ನಿರ್ಧರಿಸಿದ್ದಾರೆ.
ಇನ್ನು ಕಂಪೆನಿಯು ಟರ್ಮಿನೇಷನ್ ಪರಿಹಾರವನ್ನು ನೀಡಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಅದು ಅಲ್ಪ ಪ್ರಮಾಣದಲ್ಲಿದೆ ಎಂದು ಕಾರ್ಮಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.
ದಿಡೀರ್ ಬೀಗಮುದ್ರೆ ನಿರ್ಧಾರವನ್ನು ಖಂಡಿಸಿ ಮಹಿಳಾ ಕಾರ್ಮಿಕರು ಸೇರಿದಂತೆ ನೂರಾರು ಕಾರ್ಮಿಕರು ಕಂಪನಿಯ ಎದುರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಕಂಪೆನಿಯು ನಷ್ಟದಲ್ಲಿ ಇದೆ ಎಂಬ ನೆಪ ಹೇಳಿ ಲಾಕ್‌ಔಟ್ ಅನ್ನು ಘೋಷಿಸಿರುವುದರ ವಿರುದ್ಧ ಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ. ಗುಜರಾತ್‌ನಲ್ಲಿರುವ ಘಟಕದಲ್ಲಿ 400 ರಷ್ಟು ಕಾರ್ಮಿಕರು ಇನ್ನೂ ಕೆಲಸ ನಿರ್ವಹಿಸುತ್ತಿದ್ದು ಕಂಪೆನಿಯು ಇಲ್ಲಿ ಮಾತ್ರ ನಷ್ಟ ತೋರಿಸಿ ಲಾಕ್‌ಔಟ್ ಘೋಷಿಸಿದೆ ಎನ್ನುತ್ತಿದ್ದಾರೆ ಕಾರ್ಮಿಕರು.
ಕಂಪೆನಿಯ ಮುಖ್ಯಧ್ವಾರದ ಎದುರು ಮೂರು ದಿನದಿಂದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಾ, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಘೋಷಿಸಿದ್ದಾರೆ.