Take a fresh look at your lifestyle.

ಭ್ರಷ್ಟಾಚಾರದ ಕೇಂದ್ರವಾಗಿ ಕಾರ್ಮಿಕ ಭವನ ಪರಿವರ್ತನೆ : ಶಿವಶಂಕರ್

ಇಲ್ಲಿ ಪ್ರತಿನಿತ್ಯ ಲಂಚದ ವ್ಯವಹಾರದ ಪ್ರಮಾಣವನ್ನು ಅಂದಾಜಿಸಲು ಒಂದು ಸಮಿತಿಯನ್ನೇ ರಚಿಸ ಬೇಕಾಗುವಷ್ಟರ ಮಟ್ಟಿಗೆ ನಡೆಯುತ್ತದೆ

0
post ad

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯು ನಾಮಕಾವಸ್ಥೆಗೆ ಮಾತ್ರ ಅಸ್ತಿತ್ವದಲ್ಲಿದ್ದು, ಜಡತ್ವದಿಂದ ಕಾರ್ಯನಿರ್ವಹಿಸುತ್ತಾ ಧನಿಕರ  ಶಾಖೆಯಾಗಿ, ಮಾಲೀಕರ ಇಲಾಖೆಯಾಗಿ ಬದಲಾಗುತ್ತಿದೆ.  ಇಲಾಖೆಯಿಂದ, ಕಾರ್ಮಿಕ ಭವನದಿಂದ ಇತ್ತೀಚಿನ ದಿನಗಳಲ್ಲಿ ಒಬ್ಬೇ ಒಬ್ಬ ಕಾರ್ಮಿಕನಿಗೆ ನ್ಯಾಯ ಸಿಕ್ಕಿದ್ದು ನಾನರಿಯೇ. ಕಾರ್ಮಿಕ ಇಲಾಖೆಯು ಕಾರ್ಯದಕ್ಷತೆಯಲ್ಲಿ ದುರ್ಬಲಗೊಂಡಿದ್ದರೂ ಅಧಿಕಾರಿಗಳು ಮಾತ್ರ ಆರ್ಥಿಕವಾಗಿ ಪ್ರಬಲರಾಗುತ್ತಿದ್ದಾರೆ ಎಂದು ಕಾರ್ಮಿಕ ಇಲಾಖೆಯ ಇತ್ತೀಚಿನ ಬೆಳವಣಿಗೆಗಳ ಬಗೆಗೆ ಟಿಯುಸಿಸಿ ರಾಜ್ಯಾಧ್ಯಕ್ಷ, ಕಾರ್ಮಿಕ ಮುಖಂಡ ಜಿ.ಆರ್ ಶಿವಶಂಕರ್ ಧ್ವನಿ ಎತ್ತಿದ್ದಾರೆ.

ಇತ್ತೀಚೆಗೆ ಲಂಚ ಸ್ವೀಕರಿಸುತ್ತಾ ಎಸಿಬಿ ಬಲೆಗೆ ಬಿದ್ದ ಸಹಾಯಕ ಕಾರ್ಮಿಕ ಆಯುಕ್ತರ ಪ್ರಕರಣದ ಬಗೆಗೆ ‘ವಾಯ್ಸ್ ಆಫ್ ವರ್ಕರ್ಸ್’ ಪ್ರತಿಕ್ರಿಯೆಯನ್ನು ನೀಡುತ್ತಾ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.
ಕಾರ್ಮಿಕ ಇಲಾಖೆ, ಕಾರ್ಮಿಕ ನೇಮಕ ಪರವಾನಗಿಯನ್ನು ನೀಡುವ ಪ್ರಕ್ರಿಯೆಯನ್ನು ಇಡಿ ಇಡಿಯಾಗಿ ಬಿಡಿಸಿದ ಶಿವಶಂಕರ್, ಲೇಬರ್ ಲೈಸನ್ಸ್, ಕಾಂಟ್ರಾಕ್ಟ್ ಲೇಬರ್ ಲೈಸನ್ಸ್ ಕೊಡುವ ಕ್ರಮದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿದರು. ಒಂದು ಲೇಬರ್ ಲೈಸನ್ಸ್ ನೀಡುವುದಕ್ಕೆ ಬರೋಬ್ಬರಿ 2 ಲಕ್ಷ ಬೇಡಿಕೆಯನ್ನು ಇಟ್ಟಂತಹ ಅಧಿಕಾರಿ ಸುಮಾರು 8,000 ಲೈಸನ್ಸ್ ನೀಡಿರುವ  ಮಾಹಿತಿಯನ್ನು ಹಂಚಿಕೊಂಡು ದಿಗ್ಭ್ರಮೆಯನ್ನು ವ್ಯಕ್ತಪಡಿಸಿದರು. ಒಂದು ಲೈಸನ್ಸ್ ಗೆ ಎರಡು ಲಕ್ಷ ಲಂಚ ಪಡೆದುಕೊಂಡರೆ ಅಧಿಕಾರಿಗಳು ಎಷ್ಟು ಅಕ್ರಮ ಹಣವನ್ನು ಮಾಡಿರಬಹುದು ನೀವೇ ಊಹಿಸಿಕೊಳ್ಳಿ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಶಿವಶಂಕರ್ ರವರು ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿವರಿಸಿದ್ದಾರೆ..

ಶಿವಶಂಕರ್ ರವರು ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿವರಿಸಿದ್ದಾರೆ.. ಅವರ ಸಂದರ್ಶನವನ್ನು https://youtu.be/_MecjGsvCeM ಲಿಂಕ್ ಅನ್ನು ಒತ್ತಿ ವೀಕ್ಷಿಸಬಹುದು. ಅಥವಾ ವಾಯ್ಸ್ ಆಫ್ ವರ್ಕರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.