Take a fresh look at your lifestyle.

ರಸ್ತೆ ಬದಿ ವ್ಯಾಪಾರಿಗಳು ಒಗ್ಗೂಡಿ ತಮ್ಮ ಹಕ್ಕುಗಳನ್ನು ಸಾಧಿಸಿಕೊಳ್ಳಬೇಕು : ಶಿವಶಂಕರ್

ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಅಖಿಲ ಕರ್ನಾಟಕ ರಸ್ತೆ ಬದಿ ವ್ಯಾಪಾರಿಗಳ ಜಾಗೃತಿ ಒಕ್ಕೂಟದ ನೇತೃತ್ವದಲ್ಲಿ ಗುರುತಿನ ಚೀಟಿ, ಮಾರಾಟ ಪ್ರಮಾಣ ಪತ್ರಗಳನ್ನು ನೂರಾರು ವ್ಯಾಪಾರಿಗಳು ವಿತರಿಸಲಾಯಿತು.

0
post ad

ಬೆಂಗಳೂರು : ರಸ್ತೆ ಬದಿ ವ್ಯಾಪಾರಿಗಳ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ರಸ್ತೆ ಬದಿ ವ್ಯಾಪಾರಿಗಳ ಕರ್ನಾಟಕ ನಿಯಮ 2019 ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಕಾಯ್ದೆಯ ಉದ್ದೇಶ ಈಡೇರುತ್ತದೆ ಎಂದು ಕಾರ್ಮಿಕ ಮುಖಂಡ ಜಿ ಆರ್ ಶಿವಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ವ್ಯಾಪಾರಿಗಳಲ್ಲಿ ಸಂಘಟನೆಯ ಮನೋಭಾವ ಬೆಳೆಯಬೇಕು, ಎಲ್ಲರೂ ಒಗ್ಗಟ್ಟಾಗಿ ನಿಂತು ಹೋರಾಟಕ್ಕೆ ಸಿದ್ದರಿರಬೇಕು ಆಗ ಮಾತ್ರ ತಮ್ಮ ಹಕ್ಕೊತ್ತಾಯಗಳನ್ನು ಪಡೆದುಕೊಳ್ಳಲು ಸಾಧ್ಯವೆಂದು ಅವರು ಹೇಳಿದರು.
ಬೆಂಗಳೂರಿನ ಗೊಟ್ಟಿಗೆರೆಯಲ್ಲಿ  ಅಖಿಲ ಕರ್ನಾಟಕ ರಸ್ತೆ ಬದಿ ವ್ಯಾಪಾರಿಗಳ ಜಾಗೃತಿ ಒಕ್ಕೂಟ ಏರ್ಪಡಿಸಿದ್ದ ಗುರುತಿನ ಚೀಟಿ, ಮಾರಾಟ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ದಿನೇಶಣ್ಣ, ಜಂಟಿ ಆಯುಕ್ತ ರಾಮಕೃಷ್ಣ, ವೆಂಕಟರವಣಪ್ಪ, ಮಹದೇವಣ್ಣ, ಜಾಗೃತಿ ಒಕ್ಕೂಟದ ರಾಜ್ಯ ಸಂಚಾಲಕರಾದ ಆನಂದ್, ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಲಯದ ನೂರಾರು ರಸ್ತೆ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಮಾರಾಟ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ರಸ್ತೆ ಬದಿ ವ್ಯಾಪಾರಿಗಳಲ್ಲಿ ಕಾನೂನು ಅರಿವು ಮೂಡಿಸಲು, ಅವರ ಹಕ್ಕುಗಳ ರಕ್ಷಿಸಲು, ಅವರಲ್ಲಿ ಸಂಘಟನಾ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಅಖಿಲ ಕರ್ನಾಟಕ ರಸ್ತೆ ಬದಿ ವ್ಯಾಪಾರಿಗಳ ಜಾಗೃತಿ ಒಕ್ಕೂಟವು ಅಸ್ಥಿತ್ವ ಬಂದಿದೆ. ಇನ್ನು, ಒಕ್ಕೂಟವು ಅಸ್ಥಿತ್ವಕ್ಕೆ ಬರಲು ಕಾರಣಗಳನ್ನು ಪದಾಧಿಕಾರಿಗಳು ಉದ್ದೇಶಗಳನ್ನು ವಾಯ್ಸ್ ಆಫ್ ವರ್ಕರ್ಸ್ ಜೊತೆ ಹಂಚಿಕೊಂಡರು.


ಜಾಗೃತಿ ಒಕ್ಕೂಟದ ಉದ್ದೇಶಗಳು :

* ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳ ಕಿರುಕುಳ ಹಾಗೂ ದೌರ್ಜನ್ಯದಿಂದ ಮುಕ್ತರಾಗಿಸುವುದು.
* ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳನ್ನು ಸಮೀಕ್ಷೆ ಮಾಡಿಸಿ ಪ್ರಸ್ತುತ ಎಲ್ಲಾ ಬೀದಿ ವ್ಯಾಪಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಳುವಂತೆ ನೋಡಿಕೊಂಡು ಅವರೆಲ್ಲರಿಗೂ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣಪತ್ರ ಸಿಗುವ ಹಾಗೆ ನೋಡಿಕೊಳ್ಳುವುದು.
* ಕರ್ನಾಟಕ ರಾಜ್ಯಾದ್ಯಂತ ರಸ್ತೆ ಬದಿ ವ್ಯಾಪಾರ ಮಾಡುವ ಮಾರುಕಟ್ಟೆಗಳ ಪಟ್ಟಿ ಮಾಡುವುದು ಮತ್ತು ಹೊಸ ವ್ಯಾಪಾರ ವಲಯಗಳನ್ನು ಗುರುತಿಸುವುದು.
* ಕರ್ನಾಟಕ ರಾಜ್ಯಾದ್ಯಂತ ರೂಡಿಗತ ಮಾರುಕಟ್ಟೆಗಳನ್ನು ಗುರುತಿಸುವುದು.
*  ರಾಜ್ಯಾದ್ಯಂತ ರಸ್ತೆ ಬದಿ ವ್ಯಾಪಾರಿಗಳ ಹಿತಾಸಕ್ತಿಯನ್ನು ರಕ್ಷಿಸುವುದು ಮತ್ತು ಎತ್ತಂಗಡಿಗಳನ್ನು ತಡೆಗಟ್ಟುವುದು ಮತ್ತು ಜಾಗೃತಿ ಮೂಡಿಸುವುದು
*  ರಾಜ್ಯಾದ್ಯಂತ ರಸ್ತೆ ಬದಿ ವ್ಯಾಪಾರ ಮಾಡುವ ಮಾರುಕಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು (ಉದಾ: ಶೌಚಾಲಯ, ಕುಡಿಯುವ ನೀರು ಸೌಲಭ್ಯ)
* ರಾಜ್ಯಾದ್ಯಂತ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳ ಸಾಮಾಜಿಕ ಭದ್ರತೆ ಹಾಗೂ ಸೌಲಭ್ಯಗಳನ್ನು ದೊರೆಕಿಸಿಕೊಡುವುದು.
*  ರಾಜ್ಯಾದ್ಯಂತ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲ ಹಾಗೂ ವಿವಿಧ ಯೋಜನೆಗಳನ್ನು ತಲುಪಿಸುವುದು.
* ರಾಜ್ಯಾದ್ಯಂತ ರಸ್ತೆ ಬದಿ ವ್ಯಾಪಾರಿಗಳ ದುಡಿಮೆಯ ಘನತೆಗಾಗಿ ಹೋರಾಡುವುದು
* ರಾಜ್ಯಾದ್ಯಂತ ರಸ್ತೆ ಬದಿ ವ್ಯಾಪಾರಿಗಳ ಹಕ್ಕುಗಳ ಬಗ್ಗೆ ಹೋರಾಡುವುದು
* ರೈತರು ಬೆಳೆದ ಉತ್ಪನ್ನಗಳನ್ನು ರಸ್ತೆ ಬದಿ ವ್ಯಾಪಾರಿಗಳ ಮೂಲಕ ನಿಖರ ಬೆಲೆಗೆ ಗ್ರಾಹಕರಿಗೆ ತಲುಪುವಂತೆ ಮಾಡುವುದು.
*  ರೈತರು ಮತ್ತು ರಸ್ತೆ ಬದಿ ವ್ಯಾಪಾರಿಗಳ ಜೊತೆ ಗೂಡಿ ರಾಜ್ಯಾದ್ಯಂತ ರೈತರ ಸಂತೆಗಳನ್ನು ನಡೆಸಲು ಸರ್ಕಾರವನ್ನು ಒತ್ತಾಯಿಸುವುದು.
* ಅಸಂಘಟಿತ ವರ್ಗಕ್ಕೆ ಸರ್ಕಾರವು ನೀಡುವ ಸವಲತ್ತುಗಳನ್ನು ರಸ್ತೆ ಬದಿ ವ್ಯಾಪಾರಿಗಳಿಗೆ ದೊರಕುವಂತೆ ಮಾಡುವುದು.