Take a fresh look at your lifestyle.

ಸೌಲಭ್ಯಗಳ ದುರುಪಯೋಗ ತಡೆಗೆ ವೆಬ್ ಸೈಟ್: ಕಾರ್ಮಿಕ ಸಚಿವ

ಅಸಂಘಟಿತ ಕಾರ್ಮಿಕರ 41 ವಿಭಾಗಗಳ ಪೈಕಿ 13 ಮಾತ್ರ ಅಧಿಕೃತವಾಗಿದ್ದು ಇನ್ನು, ಉಳಿದವುಗಳನ್ನು ಇಲಾಖೆಯಡಿ ತರಲು ಸಿದ್ಧತೆ

0
post ad

ಕಾರವಾರ: ಕಾರ್ಮಿಕ ಇಲಾಖೆಯಲ್ಲಿನ ಮಂಡಳಿಗಳು ಕಾರ್ಮಿಕರಗೆಂದು ರೂಪಿಸಿರುವ ಸೌಲಭ್ಯಗಳು ದುರುಪಯೋಗವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.  ಈ ದುರುಪಯೋಗವನ್ನು  ತಡೆಯಲು ರಾಜ್ಯದಲ್ಲಿ ಪ್ರತ್ಯೇಕ ವೆಬ್‌ಸೈಟ್ ರೂಪಿಸಲಾಗುತ್ತಿದ್ದು, ಮುಂದಿನ ಎರಡು ತಿಂಗಳೊಳಗೆ ಆರಂಭವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಸಚಿವರು ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯದ ದುರುಪಯೋಗ ವಿಚಾರ ಸರಕಾರದ ಗಮನಕ್ಕೆ ಬಂದಿದ್ದು, ಹೊಸ ಗುರುತಿನ ( ಕಾರ್ಮಿಕ ಕಾರ್ಡ್ ) ಚೀಟಿಗಳ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಷರತ್ತುಬದ್ಧವಾಗಿ ವಿತರಣೆ ಆರಂಭಿಸಲಾಗುವುದು ಎಂದರು.

ಅಸಂಘಟಿತ ಕಾರ್ಮಿಕರ 41 ವಿಭಾಗಗಳ ಪೈಕಿ 13 ಅನ್ನು ಮಾತ್ರ ಸರಕಾರ ಅಧಿಕೃತವೆಂದು ಗುರುತಿಸಿದೆ. ಉಳಿದವುಗಳನ್ನು ಇಲಾಖೆಯಡಿ ತರಲು ಸಿದ್ಧತೆ ನಡೆದಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ನೀಡಿದರು.