Take a fresh look at your lifestyle.

ಸೋಮವಾರದಿಂದ ರಾಜ್ಯವ್ಯಾಪಿ ಜನಾಂದೋಲನ : ಐಕ್ಯ ಹೋರಾಟ ಸಮಿತಿ

ಸೋಮವಾರ ಬೆಳಗ್ಗೆ 10 ಗಂಟೆಯಿಂದ ಯಿಂದ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭವಾಗಲಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಉದ್ಘಾಟನೆಯಾಗಲಿದೆ.

0
post ad

ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ, ರೈತ-ಕಾರ್ಮಿಕ-ದಲಿತ-ಗ್ರಾಹಕ ದ್ರೋಹಿ ಕಾಯ್ದೆ/ಸುಗ್ರೀವಾಜ್ಞೆಗಳನ್ನು ಧಿಕ್ಕರಿಸಿ, ಡಿಸೆಂಬರ್ 7ರಿಂದ ರಾಜ್ಯವ್ಯಾಪಿ ಜನಾಂದೋಲನ ನಡೆಸುವುದಾಗಿ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ತಿಳಿಸಿದೆ.
ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ, ಈ ಕುರಿತಂತೆ ಐಕ್ಯ ಹೋರಾಟ ಸಮಿತಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಸೋಮವಾರದಿಂದ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆಯ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಕರ್ನಾಟಕದ ರೈತ-ದಲಿತ-ಕಾರ್ಮಿಕರ ಹಾಗು ಇತರ ಪ್ರಗತಿಪರ ಸಂಘಟನೆಗಳು ಕೈ ಜೋಡಿಸಿ ಐತಿಹಾಸಿಕ ಐಕ್ಯ ಹೋರಾಟವನ್ನು ಹಮ್ಮಿಕೊಂಡು ರಾಜ್ಯ ಸರ್ಕಾರದ ಜನ ವಿರೋಧಿ ಸುಗ್ರೀವಾಜ್ಞೆಗಳನ್ನು ವಿರೋಧಿಸುತ್ತಾ ಬರುತ್ತಿವೆ.
ಕೇಂದ್ರ ಸರ್ಕಾರ ತನ್ನ ಜನ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ಸಿದ್ದಿವಿಲ್ಲ, ಇತ್ತ ರಾಜ್ಯ ಸರ್ಕಾರ ಮತ್ತೆ ತನ್ನ ಜನ ವಿರೋಧಿ ಕಾನೂನು ತಿದ್ದುಪಡಿಗಳನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲು ಹೊರಟಿದೆ. ಎರಡೂ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ತುತ್ತೂರಿಗಳಾಗಿ ಪರಿವರ್ತನೆಯಾಗಿವೆ. ಜನಾಭಿಪ್ರಾಯವನ್ನೂ ಬದಿಗಿಟ್ಟು ಲೋಕಸಭೆ, ವಿಧಾನ ಸಭೆಯಲ್ಲಿ ಪ್ರಜಾತಾಂತ್ರಿಕ ಚರ್ಚೆಗೂ ಒಳಪಡಿಸದೆ ರೈತ-ಕಾರ್ಮಿಕ-ದಲಿತ ಪರ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಜನವಿರೋಧಿ ಕಾಯ್ದೆಗಳನ್ನು ಜನರ ಮೇಲೆ ಹೇರುತ್ತಿವೆ ಎಂದು ಐಕ್ಯ ಹೋರಾಟ ಸಮಿತಿ ಹೇಳಿದೆ.

ನಾಲ್ಕು ಕೋಡ್’ ಹೆಸರಿನಲ್ಲಿ ಕಾರ್ಮಿಕರ ಎಲ್ಲಾ ಹಕ್ಕುಗಳನ್ನೂ ಕಸಿದುಕೊಂಡು ಕಾರ್ಮಿಕರನ್ನು ಕಂಪನಿಗಳು ಜಗಿದು ಉಗಿಯುವ ಕಬ್ಬಿನ ಜಲ್ಲೆಗಳಂತೆ ಬಳಸಿಕೊಳ್ಳಲು ಹೊರಟಿದ್ದಾರೆ. ಯಾವ ಹಕ್ಕು, ಅನುಕೂಲತೆಗಳೂ ಇಲ್ಲದೆ ದುಡಿಯಬೇಕು, ಬೇಡವೆಂದಾಗ ಗಂಟುಮೂಟೆ ಕಟ್ಟಬೇಕು. ಇದಲ್ಲದೆ ಎಲ್ಲಾ ಸಮಾಜ ಕಲ್ಯಾಣ ಕ್ರಮಗಳನ್ನೂ ಕಡಿತಗೊಳಿಸಲಾಗುತ್ತಿದೆ. ಉದಾಹರಣೆಗೆ ದುರ್ಬಲ ಸಮುದಾಯಗಳ ಓದಿಗೆ ಅವಕಾಶ ಮಾಡಿಕೊಡುವ ಸ್ಕಾಲರ್ ಶಿಪ್ಪಿಗೂ ಕತ್ತರಿ ಹಾಕಲಾಗುತ್ತಿದೆ ಮತ್ತು ಶುಲ್ಕಗಳನ್ನು ಹೆಚ್ಚಿಸಿ, ಬಡ ಮಕ್ಕಳ ಕಲಿಯುವ ಅವಕಾಶವನ್ನೇ ಕೊನೆಗೊಳಿಸಲಾಗುತ್ತಿದೆ.
ಇವು ಹೀಗೇ ಜಾರಿಯಾದರೆ ಜನಸಾಮಾನ್ಯರಾದ ನಾವು ಬದುಕುಳಿಯುವುದು ಸಾಧ್ಯವಿಲ್ಲ.ರೈತರು ಮತ್ತು ಕಾರ್ಮಿಕರ ಭವಿಷ್ಯ ಮಾತ್ರವಲ್ಲ, ಎಲ್ಲಾ ಬಡ ಮತ್ತು ಮಧ್ಯಮ ವರ್ಗಗಳ, ದುರ್ಬಲ ಸಮುದಾಯಗಳ ಮತ್ತು ಯುವಜನರ ಭವಿಷ್ಯ ಅಪಾಯದಲ್ಲಿದೆ.
ಹಾಗಾಗಿ ನಾವೆಲ್ಲರು ಜಂಟಿಯಾಗಿ ಹೋರಾಟಕ್ಕೆ ಇಳಿದಿದ್ದೇವೆ. ಡಿಸೆಂಬರ್ 7ರ ಸೋಮವಾರದಿಂದ ರಾಜ್ಯವ್ಯಾಪಿ ಜನಾಂದೋಲನ ಹಮ್ಮಿಕೊಂಡಿದ್ದೇವೆ.
ಸೋಮವಾರ ಬೆಳಗ್ಗೆ 10  ಗಂಟೆಯಿಂದ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಪ್ರಾರಂಭ ಮಾಡುತಿದ್ದೇವೆ ಎಂದು ಐಕ್ಯ ಹೋರಾಟ ಸಮಿತಿ ತಿಳಿಸಿದೆ.