Take a fresh look at your lifestyle.

ಕೋವಿಡ್ –19 ನಿಂದ ಸೃಷ್ಠಿಯಾಗಿರುವ ನಿರುದ್ಯೋಗ ಬಿಕ್ಕಟ್ಟು ನಿವಾರಣೆಗಾಗಿ ದೇಶದಲ್ಲಿ 500 ಮಿಲಿಯನ್ ಉದ್ಯೋಗಗಳ ಸೃಷ್ಟಿ

0
post ad

voiceofworkers.in

ನವ ದೆಹಲಿ : ಕೋವಿಡ್ –19 ನಿಂದ ಸೃಷ್ಠಿಯಾಗಿರುವ ನಿರುದ್ಯೋಗ ಬಿಕ್ಕಟ್ಟು ನಿವಾರಣೆಗಾಗಿ ವಲಸೆ ಕಾರ್ಮಿಕರಿಗೆ ಸೇರಿದಂತೆ ದೇಶದಲ್ಲಿ 500 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶಹೊಂದಿರುವ ರಾಷ್ಟ್ರೀಯ ಉದ್ಯೋಗ ನೀತಿ (ಎನ್ ಇಪಿ) ಅನ್ನು ಸರ್ಕಾರ ಶೀಘ್ರಜಾರಿಗೆ ತರಲು ಮುಂದಾಗಿದೆ. ಇತ್ತಿಚಿನ ದಿನಗಳಲ್ಲಿ ಎದುರಾಗಿರುವ ನಿರುದ್ಯೋಗ ಸಮಸ್ಯೆ ನೀಗಿಸಲು ವಲಸೆ ಕಾರ್ಮಿಕರಿಗೆ ಉದ್ಯೋಗ ಮತ್ತು ಸಾಮಾಜಿಕ ಭದ್ರತೆ ಖಾತ್ರಿಪಡಿಸಲು ಸರ್ಕಾರ ಈ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ.

ಕೋವಿಡ್-19 ನಿಂದಾದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಥಾವರ್ ಚಂದ್ ಗೆಹ್ಲೋಟ್ ನೇತೃತ್ವದ ಸಚಿವರ ಗುಂಪಿನ ಶಿಫಾರಸುಗಳನ್ನು
ಆಧರಿಸಿ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ವಲಯವಾರು ಮಾರ್ಗಸೂಚಿಯನ್ನು ಈ ನೀತಿ ರೂಪಿಸಲಿದೆ.
ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ಉದ್ಯೋಗ ನೀತಿಯಲ್ಲಿ ಹೊಸ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಉದ್ಯೋಗ ನೀತಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ನಮ್ಮ ಆದ್ಯತೆಯಾಗಿದ್ದು, ಶೀಘ್ರವೇ ಈ ನೀತಿಯನ್ನು ದೃಢವಾಗಿ ಜಾರಿಗೆ ತರುತ್ತೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾದಿಂದ ಉತ್ಪಾದನಾ ನೆಲೆಗಳನ್ನು ಸ್ಥಳಾಂತರಿಸಲು ಬಯಸುವ ಕಂಪನಿಗಳನ್ನು ಆಕರ್ಷಿಸಲು ಭಾರತ ಸಜ್ಜಾಗುತ್ತಿದ್ದಂತೆ, ಹೊಸ ಉದ್ಯಮಗಳ ಸೃಷ್ಠಿ ಮತ್ತು ಉದ್ಯಮಗಳನ್ನು ಆಕರ್ಷಿಸುವಂತಹ ವಾತಾವರಣವನ್ನು ಸೃಷ್ಟಿಸುವುದು ಎನ್ ಇಪಿ ಉದ್ದೇಶವನ್ನು ಹೊಂದಿದೆ.

ಎನ್ ಇಪಿ ಯನ್ನು ಜಾರಿಗೆ ತರುವ ಪ್ರಸ್ತಾಪವನ್ನು 2008ರಲ್ಲಿ ಯು.ಪಿ.ಎ ಸರಕಾರದ ಆಡಳಿತದ ಅವಧಿಯಲ್ಲಿ ಮೊದಲ ಬಾರಿಗೆ ಮಂಡಿಸಲಾಯಿತು. 2016ರಲ್ಲಿ ಬ್ರಿಕ್ಸ್ ನ ಉದ್ಯೋಗ ಕಾರ್ಯಪಡೆ ಯ ಮೊದಲ ಸಭೆಯಲ್ಲಿ ಈ ವಿಚಾರವು ಸ್ವಲ್ಪ ಮಟ್ಟಿಗೆ ರೂಪುಪಡೆಯಿತು, ನಂತರ ಎನ್ ಡಿಎ ಸರ್ಕಾರ ವು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿತು. ಆದರೆ, ಅದು ಕೂಡ ಹೆಚ್ಚು ಪ್ರಗತಿ ಸಾಧಿಸಲಿಲ್ಲ. ಈಗ ರಾಷ್ಟ್ರೀಯ ಉದ್ಯೋಗ ನೀತಿ (ಎನ್ ಇಪಿ) ಸರ್ಕಾರ ಜಾರಿಗೆ ತರಲು ಮುಂದಾಗಿದೆ.