Take a fresh look at your lifestyle.

ಮೂವರು ಬಾಲ ಕಾರ್ಮಿಕರ ರಕ್ಷಣೆ

ಕುರುಗೋಡು ಪಟ್ಟಣದೆಲ್ಲೆಡೆ ಸಂಚಾರಿಸಿದ ಅಧಿಕಾರಿಗಳ ತಂಡದಿಂದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986ರ ಕುರಿತು ಅರಿವು ಮೂಡಿಸಲಾಯಿತು

0
post ad

ಬಳ್ಳಾರಿ: ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಇಂದು
ಅಧಿಕಾರಿಗಳು ಮೂವರು ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಬಾಲ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ದುಡಿಮೆಯಿಂದ ಬಂಧಮುಕ್ತಗೊಳಿಸಿದ್ದಾರೆ.
ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ಜಂಟಿ ಸಹಭಾಗಿತ್ವದ ತಂಡ ಪಟ್ಟಣದ ವಿವಿಧ ಅಂಗಡಿ, ಉದ್ದಿಮೆ, ಹೋಟೆಲ್ ಗಳು, ಗ್ಯಾರೇಜ್, ಟಿಂಕರಿಂಗ್, ವುಡ್ ವರ್ಕ್ಸ್, ಪಂಚರ್ ಶಾಪ್ ಗಳ ಮೇಲೆ ಅನಿರೀಕ್ಷಿತ ದಾಳಿ ಮಾಡಿದೆ.
ಈ ವೇಳೆ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮೂವರು ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಅಧಿಕಾರಿಗಳು ಕೆಲಸದಿಂದ ಬಿಡುಗಡೆಗೊಳಿಸಿದರು.
ಮಾಲೀಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕುರುಗೋಡು ಪೊಲೀಸ ಠಾಣೆಯಲ್ಲಿ ದೂರು ನೀಡಲಾಯಿತು. ಇನ್ನು ಪಟ್ಟಣದೆಲ್ಲೆಡೆ ಸಂಚಾರಿಸಿದ ತಂಡದಿಂದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ 1986ರ ಕುರಿತು ಅರಿವು ಮೂಡಿಸಲಾಯಿತು.