Take a fresh look at your lifestyle.

ಟೊಯೋಟಾ ಕಾರ್ಮಿಕರಿಂದ ಅಂತಿಮ ಗಡುವಿನ ಎಚ್ಚರಿಕೆ

TKM ಕಾರ್ಮಿಕ ಸಂಘ ಬೈಕ್ ರ್ಯಾಲಿ ಮೂಲಕ ಕಂಪನಿಯ 6 ಮುಖ್ಯದ್ವಾರಗಳಿಗೂ ತಲುಪಿ ಬೀಗ ಮತ್ತು ಚೈನ್ ಪ್ರದರ್ಶಿಸಿ ಅಂತಿಮ ಗಡುವಿನ ಕ್ಷಣಗಣನೆ ಬಗ್ಗೆ ಎಚ್ಚರಿಕೆ ನೀಡಿ ಪ್ರತಿಭಟನೆ ನಡೆಸಿದರು

0
post ad

ಬಿಡದಿ : ಅವೈಜ್ಞಾನಿಕ ಕೆಲಸದ ಮಾದರಿ, ಸರ್ಕಾರದ ಆದೇಶಗಳಿಗೆ ಮನ್ನಣೆ ನೀಡಿದ ಆಡಳಿತ ವರ್ಗ ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು ಗೊಳಿಸಿರುವುದನ್ನು ವಿರೋಧಿಸಿ ಇಂದು ಕಾರ್ಮಿಕರು ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಮುಖ್ಯ ದ್ವಾರಗಳವರೆಗೂ ಬೈಕ್ ಜಾಥಾ ನಡೆಸಿದರು.


ದೇಶದ ಕಾನೂನುಗಳನ್ನು ಗಾಳಿಗೆ ತೂರಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಆಡಳಿತ ವರ್ಗದ ವಿರುದ್ಧ ಸ್ವಾಭಿಮಾನಿ ಕಾರ್ಮಿಕರು ನಡೆಸುತ್ತಿರುವ ಹೋರಾಟವು 82 ನೇ ದಿನಕ್ಕೆ ಕಾಲಿಟ್ಟಿದ್ದು, ದಿನೇ ದಿನೇ ವಿಭಿನ್ನ ಪ್ರತಿಭಟನೆಗಳಿಂದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.


ಟೊಯೋಟಾ ಆಡಳಿತ ಮಂಡಳಿಯ ಮನುಷ್ಯನ ಸಾಮರ್ಥ್ಯಕ್ಕೂ ಮೀರಿದ ಕೆಲಸದ ವಿಧಾನ, ಒತ್ತಡಗಳ ವಿರುದ್ಧ ಸಿಡಿದೆದ್ದ ಕಾರ್ಮಿಕ ಸಂಘದ ಹೋರಾಟದ ಭಾಗವಾಗಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಎಲ್ಲಾ ಗೇಟ್ ಗಳ ಮುಂದೆ ಕಾರ್ಮಿಕರು ಬೀಗ ಮತ್ತು ಚೈನ್ ಗಳನ್ನು ಪ್ರದರ್ಶಿಸುತ್ತಾ ಬೀಗ ಹಾಕುವ ಸಂಕೇತವನ್ನು ಬಿಂಬಿಸುತ್ತಾ ಅಂತಿಮ ಗಡುವಿನ ಎಚ್ಚರಿಕೆಯನ್ನು ನೀಡಿದರು.


ಈ ನಡುವೆ, AISA( all India students association) ಪದಾಧಿಕಾರಿಗಳು ಆಗಮಿಸಿ ಟೊಯೋಟಾ ಕಾರ್ಮಿಕರ ಸಮಸ್ಯೆಗಳನ್ನು ಆಧ್ಯಯನ ಮಾಡಿ ಒಂದು ಸವಿಸ್ತಾರವಾದ ವರದಿಯನ್ನು ಕಾರ್ಮಿಕ ಸಂಘಕ್ಕೆ ತಲುಪಿಸಿದರು.
ಮುಂದಿನ ವಾರ ಈ ವರದಿಯನ್ನು ಕಾರ್ಮಿಕ ಇಲಾಖೆ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ತಲುಪಿಸುವುದಾಗಿ ಅಖಿಲ ಭಾರತೀಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ತಿಳಿಸಿದರು.
ನೆನ್ನೆ, ಕಾರ್ಮಿಕರ ಪರವಾಗಿ ಬೃಹತ್ ಪಾದಯಾತ್ರೆಯನ್ನು ನಡರಸಿದ್ದ ಸ್ಥಳೀಯ ಜನಪ್ರತಿನಿಧಿಗಳು ಟೊಯೋಟಾ ಆಡಳಿತ ಮಂಡಳಿಗೆ ಬಿಕ್ಕಟ್ಟು ಪರಿಹಾರಕ್ಕೆ ಎಂಟು ದಿನಗಳ ಗಡುವು ನೀಡಿದ್ದರು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 82 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.