Take a fresh look at your lifestyle.

ಮುಂದುವರೆದ ಟಿಕೆಎಂ ಕಾರ್ಮಿಕರ ಹೋರಾಟ, ನಾಳೆಯ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ

ಕಂಪೆನಿಯ ಆಡಳಿತ ಮಂಡಳಿ ಎರಡನೇ ಬಾರಿಗೆ ತಾತ್ಕಾಲಿಕ ಲಾಕ್ಔಟ್ ಅನ್ನು ಘೋಷಿಸಿದ ಬೆನ್ನಲೇ ಆಡಳಿತ ವರ್ಗದ ಒಡೆದು ಆಳುವ ನೀತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾರ್ಮಿಕರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ

0
post ad

ರಾಮನಗರ/ಬೆಂಗಳೂರು : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಕಾರ್ಮಿಕರ ಹೋರಾಟವು ಹದಿನೇಳನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆಯ ರಾಷ್ಟ್ರೀಯ ಮುಷ್ಕರದಲ್ಲಿ ಭಾಗವಹಿಸಲು ಕಾರ್ಮಿಕರು ನಿರ್ಧರಿಸಿದ್ದಾರೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಿಕೆಎಂ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ತಲೆದೋರಿದ ಹಲವು ದಿನಗಳ ನಂತರ ಕಾರ್ಮಿಕ ಇಲಾಖೆ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ವಿಪರ್ಯಾಸವೆಂದರೆ ಈ ಆದೇಶ ಜಾರಿಗೆ ಬಾರದೇ ಇರುವುದು.
ಸರ್ಕಾರದ ಆದೇಶವನ್ನು ಕಂಪೆನಿ ಅನುಸರಿಸದೆ ಕಾರ್ಮಿಕರನ್ನು ಕರ್ತವ್ಯಕ್ಕೆ ಹಾಜರಾಗಲು ಅನುಮತಿಯನ್ನು ಕೊಡುತ್ತಿಲ್ಲವೆಂದು ಆರೋಪಿಸಿ ಕಾರ್ಮಿಕರು ಹೋರಾಟವನ್ನು ಮುಂದುವರೆಸಿದ್ದರು.
ಕಾರ್ಮಿಕರ ಪಾಲಿಗೆ ಪೂರ್ಣಪ್ರಮಾಣದಲ್ಲಿ ಹಾಜರಾಗುತ್ತಿಲ್ಲವೆಂದು ಕಂಪೆನಿಯ ಆಡಳಿತ ಮಂಡಳಿ ಎರಡನೇ ಬಾರಿ ತಾತ್ಕಾಲಿಕ ಲಾಕ್ಔಟ್ ಅನ್ನು ಘೋಷಿಸಿದೆ. ಇನ್ನು, ಆಡಳಿತ ವರ್ಗದ ಒಡೆದು ಆಳುವ ನೀತಿಯನ್ನು ಪರಿಣಾಮಕಾರಿಯಾಗಿ ಎದುರಿಸಿದ ಕಾರ್ಮಿಕರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಈ ಬಗೆಗೆ ಪತ್ರಿಕಾ ಗೋಷ್ಠಿ ನಡೆಸಿದ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷ (ಟಿಕೆಎಂಇಯು) ಪ್ರಸನ್ನ ಕುಮಾರ್‌ ಸಿ.ಎಸ್‌.ಚಕ್ಕೆರೆ ಕಾರ್ಮಿಕರ ಬೇಡಿಕೆಗಳನ್ನು ಪುನರುಚ್ಚರಿಸಿದರು.
ನಂತರ ಕಾರ್ಮಿಕ ಸಂಘದ ಕಾನೂನು ಸಲಹೆಗಾರ ವಕೀಲ ಮುರಳೀಧರ್ ಕಾರ್ಮಿಕರಿಗೆ ಕಾನೂನು ಸಲಹೆಗಳನ್ನು ನೀಡಿ ನೈತಿಕ ಬೆಂಬಲ ನೀಡಿದರು.
ಇನ್ನು, ನಾಳೆ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜೆಸಿಟಿಯು ಕರೆ ನೀಡಿರುವ ಸಾರ್ವತ್ರಿಕ ರಾಷ್ಟ್ರೀಯ ಮುಷ್ಕರದಲ್ಲಿ ಪಾಲ್ಗೊಳ್ಳಲು ಕಾರ್ಮಿಕ ಸಂಘ ನಿರ್ಧರಿಸಿತು. ಬೃಹತ್ ರಾಲಿಯ ಮೂಲಕ ಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲು ಕಾರ್ಮಿಕರು ತೀರ್ಮಾನಿದ್ದಾರೆ.
ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಸುಮಾರು 3500 ಕಾರ್ಮಿಕರು ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.