Take a fresh look at your lifestyle.

16ನೇ ದಿನಕ್ಕೆ ಕಾಲಿಟ್ಟ ಟಿಕೆಎಂ ಕಾರ್ಮಿಕರ ಹೋರಾಟ : ಸಿಐಟಿಯು ಸೇರಿದಂತೆ ಸಂಘಟನೆಗಳ ಬೆಂಬಲ

ಸರ್ಕಾರದ ಆದೇಶವನ್ನು ಆಡಳಿತ ಮಂಡಳಿ ಪಾಲಿಸುತ್ತಿಲ್ಲವೆಂದು ಆರೋಪಿಸುತ್ತಾ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಾರ್ಮಿಕರು ಹೋರಾಟ ಮುಂದುವರೆಸಿದ್ದು, ಕಾರ್ಮಿಕರಿಗೆ ಹಲವು ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ.

0
post ad

ಬೆಂಗಳೂರು/ರಾಮನಗರ : ಸರ್ಕಾರದ ಆದೇಶ ಪಾಲನೆಗೆ ಆಡಳಿತ ಮಂಡಳಿ ಬದ್ಧವಾಗಿಲ್ಲ ಎಂದು ಆರೋಪಿಸಿ ನಾಲ್ಕನೇ ದಿನವೂ ಟೊಯೋಟ ಕಿರ್ಲೋಸ್ಕರ್ ಮೋಟರ್ಸ್ ಕಾರ್ಮಿಕರು ಹೋರಾಟ ಮುಂದುವರೆಸಿದ್ದಾರೆ. ಕಾರ್ಮಿಕ ಸಂಘ ಕೆಲಸ ನಿರ್ವಹಿಸಲು ನಿರ್ಧರಿಸಿದ್ದರೂ ಟೊಯೋಟ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿಯು ಕಾರ್ಖಾನೆಯ ಒಳಗೆ ಕಾರ್ಮಿಕರನ್ನು ಪ್ರವೇಶ ಮಾಡಲು ಅನುಮತಿ ನೀಡಲು ನಿರಾಕರಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಸರ್ಕಾರ ಲಾಕ್ ಔಟ್ ನಿಷೇಧಿಸಿ ಐದು ದಿನ ಕಳೆದರೂ, ಕರ್ತವ್ಯಕ್ಕೆ ಹಾಜರಾಗಲು ನೌಕರರು ಕಂಪನಿ ಬಳಿ ಬಂದಾಗ ಒಳಗೆ ಪ್ರವೇಶಿಸಲು ಆಡಳಿತ ವರ್ಗ ಮುಖ್ಯದ್ವಾರದಲ್ಲಿಯೇ ತಡೆದು ಒಳ ಪ್ರವೇಶವನ್ನು ನಿರಾಕರಿಸುತ್ತಿದೆಯಂತೆ.
ಆಡಳಿತ ಮಂಡಳಿಯ ಈ ನಡೆಯನ್ನು ಖಂಡಿಸುತ್ತಾ ಕಾರ್ಮಿಕರು ಮುಂದುವರೆಸಿರುವ ಹೋರಾಟಕ್ಕೆ ಹಲವು ಕಾರ್ಮಿಕ ಒಕ್ಕೂಟಗಳು ಬೆಂಬಲವನ್ನು ಘೋಷಿಸಿವೆ. ಇದರ ಭಾಗವಾಗಿ ಸಿಐಟಿಯು ರಾಜ್ಯಾಧ್ಯಕ್ಷರಾದ ಶ್ರೀಮತಿ ವರಲಕ್ಷ್ಮಿ ಕಾರ್ಮಿಕರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರಿಗೆ ಬೆಂಬಲ ಘೋಷಿಸಿದರು.

ಸಿಐಟಿಯು ಬಿಡದಿ ಘಟಕದ ರಾಘವೇಂದ್ರ ಮತ್ತು ಡೆನ್ಸ್ಕೋ ಕಿರ್ಲೋಸ್ಕರ್ ಅಧ್ಯಕ್ಷರಾದ ತಿರುಮಲಾಚಾರ್ ಸೇರಿದಂತೆ, ರೈತ ಕಾರ್ಮಿಕ ಸಂಘಟನೆಯ ಹೆಚ್.ಪಿ. ಶಿವಪ್ರಕಾಶ್ ಮತ್ತು ಎಐಯುಟಿಯುಸಿ ಜಿ. ಹನುಮೇಶ್ , ಹೋರಟಗಾರರಿಗೆ ನೈತಿಕ ಬೆಂಬಲ ಸೂಚಿಸಿದರು.
ಇತ್ತೀಚೆಗೆ ಟಿಯುಸಿಸಿ ಮತ್ತದರ ಸಮ್ಮಿಳಿತ ಸಂಘಟನೆಗಳು ಟಿಕೆಎಂಇಯುಗೆ ಬೆಂಬಲ ಸೂಚಿಸಿದ್ದರು.
ಇತ್ತೀಚೆಗೆ ಕಾರ್ಮಿಕ ಇಲಾಖೆ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿ ಹೇರಿದ್ದ ತಾತ್ಕಾಲಿಕ ಲಾಕ್ ಔಟ್ ಮತ್ತು ಕಾರ್ಮಿಕರ ಪ್ರತಿಭಟನೆಗಳೆರೆಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಬಿಕ್ಕಟ್ಟನ್ನು ಸಮಂಜಸವಾಗಿ ಬಗೆಹರೆಸದ ಕಾರ್ಮಿಕ ಇಲಾಖೆಯ ನಡೆಯ ಬಗೆಗೆ ಎಲ್ಲೆಡೆ ಖಂಡನೆ ಕೇಳಿಬರುತ್ತಿದೆ.

ಈ ನಡುವೆ, ಸರ್ಕಾ​ರದ ಸೂಚ​ನೆ​ಯಂತೆ ಕಂಪನಿ ಪುನಾ​ರಂಭ​ಗೊಂಡ ನಾಲ್ಕು ದಿನ​ಗ​ಳಲ್ಲಿ ಮೊದ​ಲ ಪಾಳಿ​ಯಲ್ಲಿ 1399 ಕಾರ್ಮಿ​ಕರ ಪೈಕಿ 20ರಿಂದ 28 ಮಂದಿ, ಎರ​ಡನೇ ಪಾಳಿ​ಯಲ್ಲಿ 1538 ಪೈಕಿ 12ರಿಂದ 64 ಮಂದಿ ಹಾಜ​ರಾ​ದರೆ, ಜನ​ರಲ್‌ ಶಿಫ್ಟ್‌ನಲ್ಲಿ 440 ಕಾರ್ಮಿ​ಕರ ಪೈಕಿ 17ರಿಂದ 219 ಮಂದಿ ಮಾತ್ರ ಹಾಜ​ರಾ​ಗಿ​ದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಕಂಪನಿಯಲ್ಲಿ ಉತ್ಪಾ​ದನಾ ಚಟು​ವ​ಟಿಕೆ ನಡೆ​ಯ​ಬೇ​ಕಾ​ದರೆ ಕನಿಷ್ಠ ಶೇಕಡ 90ರಷ್ಟುಕಾರ್ಮಿ​ಕರು ಕೆಲ​ಸ​ದಲ್ಲಿ ತೊಡ​ಗ​ಬೇಕು. ಆದರೆ, ಕಾರ್ಮಿ​ಕರು ಕೆಲ​ಸಕ್ಕೆ ಹಾಜ​ರಾ​ಗದೆ ಅಕ್ರ​ಮ​ವಾಗಿ ಮುಷ್ಕ​ರ​ದಲ್ಲಿ ತೊಡ​ಗಿ​ರುವ ಕಾರಣ ಕಂಪೆ​ನಿಯ ಕಾನೂನು ಹಾಗೂ ಸೇವಾ ನಿಯ​ಮ​ಗ​ಳಿಗೆ ಬದ್ಧ​ರಾ​ಗಿ​ರು​ವು​ದಾಗಿ ಅಂಡರ್‌ ಟೇಕಿಂಗ್‌ ಒಪ್ಪಿ ಬರು​ವ​ವ​ರನ್ನು ಕೆಲ​ಸಕ್ಕೆ ತೆಗೆದುಕೊ​ಳ್ಳಲಿದೆ ಎಂದು ಕಂಪೆನಿ ಆಡ​ಳಿತ ಮಂಡಳಿ ತಿಳಿ​ಸಿ​ದೆ.