Take a fresh look at your lifestyle.

ವಿಧಾನ ಸೌಧ ಮುತ್ತಿಗೆ ಚಳವಳಿಯಲ್ಲಿ ಟಿಕೆಎಂ ಕಾರ್ಮಿಕರು

ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬಹಿರಂಗ ಪ್ರತಿಭಟನೆಗೆ ಆಗಮಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಮಿಕರಿಂದ ಮನವಿ ಪತ್ರವನ್ನು ಸ್ವೀಕರಿಸಿ, 60 ಜನರ ಅಮಾನತ್ತು ರದ್ದು ಪಡಿಸುವ ಭರವಸೆಯನ್ನು ನೀಡಿದರು

0
post ad

ಬೆಂಗಳೂರು : ರೈತರ ವಿಧಾನ ಸೌಧ ಮುತ್ತಿಗೆ ಚಳವಳಿಗೆ(ಬಾರು ಕೋಲು ಚಳವಳಿ) ಟಿಕೆಎಂಇಯು ಬೆಂಬಲ ನೀಡಿತು. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದ ಮಾರ್ಗವಾಗಿ ವಿಧಾನ ಸೌಧ ಕಡೆಗೆ ಹೊರಟ ಬೃಹತ್ ಮೆರವಣಿಗೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯ ಸಾವಿರಾರು ನೌಕರರು ಭಾಗಿಯಾಗಿದ್ದರು. 

ಆಡಳಿತ ವರ್ಗದ ವಿರುದ್ಧ ಕಾರ್ಮಿಕರು ಆರಂಭಿಸಿರುವ ಪ್ರತಿಭಟನೆ ಮೂವತ್ತೊಂದನೇ ದಿನಕ್ಕೆ ಕಾಲಿಟ್ಟಿದ್ದು, ಈ ಹಿಂದೆ ಕಾರ್ಮಿಕರು ವಿಧಾನ ಸೌಧ ಚಲೋ ಕಾರ್ಯಕ್ರಮದ ಪ್ರತಿಪಾದನೆ ಮಾಡಿ, ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು. ಕರ್ನಾಟಕ ಹಸಿರು ಸೇನೆ ಕರೆ ನೀಡಿದ್ದ ವಿಧಾನ ಸೌಧ ಮುತ್ತಿಗೆ ಹೋರಾಟದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಟಿಕೆಎಂ ಕಾರ್ಮಿಕರು ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದರು. ಇತ್ತೀಚೆಗೆ ಟಿಕೆಎಂಇಯು ಪ್ರತಿಭಟನೆಗೆ ರೈತಪರ ಸಂಘಟನೆಗಳು ಬೆಂಬಲ ಸೂಚಿಸಿದ್ದವು.
ಆಡಳಿತ ಮಂಡಳಿ, ಲಾಕೌಟ್ ಅನ್ನು ಹಿಂಪಡೆದಿದ್ದು ಕಾರ್ಮಿಕರು ಪಾಳಿಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದೆ. ಇತ್ತ ಕಾರ್ಮಿಕರು ಮಾತ್ರ ವಿಧಾನ ಸೌಧ ಚಲೋ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.
ಇನ್ನು, ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬಹಿರಂಗ ಪ್ರತಿಭಟನೆಗೆ ಆಗಮಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಾರ್ಮಿಕರಿಂದ ಮನವಿ ಪತ್ರವನ್ನು ಸ್ವೀಕರಿಸಿದರು.
ಮನವಿ ಸ್ವೀಕರಿಸಿದ ಸುರೇಶ್ ಕುಮಾರ್ ಶೀಘ್ರವಾಗಿ 60 ಜನ ಅಮಾನತ್ತು ರದ್ದು ಪಡಿಸುವ ಭರವಸೆಯನ್ನು ನೀಡಿದರು.
ಟಿಕೆಎಂ ಕಂಪೆನಿಯ ಆಡಳಿತ ವರ್ಗ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟಿನ ಪ್ರಕರಣದಲ್ಲಿ ಸಂಸ್ಥೆಯ ಪರ ಸರ್ಕಾರದ ಮೃದು ಧೋರಣೆ ಹೊರಬಿದ್ದಿದೆ. ಟಿಕೆಎಂ ಬಿಕ್ಕಟ್ಟು ದಿನೇ-ದಿನೇ ಮತ್ತಷ್ಟು ಜಠಿಲವಾಗುತಿದೆ.
ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಯಾವುದೇ ಕ್ರಮವನ್ನು ಕೈಗೊಂಡರು ಅಥವಾ ಯಾವುದೇ ನಿರ್ಧಾರವನ್ನು ಪ್ರಕಟಿಸಿ ಕಚೇರಿಗೆ ಸೀಮಿತವಾದರೆ ಯಾವುದೇ ಆಶಾಜನಕ ಫಲಿತಾಂಶವನ್ನು ಆಶಿಸಲು ಸಾಧ್ಯವಿಲ್ಲ ಎಂಬುದು ಟಿಕೆಎಂ ಹಲವು ಕಾರ್ಮಿಕರ ಮಾತು.
ಮತ್ತಷ್ಟು ಕಾರ್ಮಿಕರ ಅಮಾನತುನಿಂದ ಕಾರ್ಮಿಕರು ಪಟ್ಟು ಬಿಡದೇ ಪ್ರತಿಭಟನೆಯನ್ನು ಮುಂದುವರೆಸಿದ್ದು, ಹೋರಾಟವು 31 ನೇ ದಿನಕ್ಕೆ ಕಾಲಿಟ್ಟಿದೆ.