Take a fresh look at your lifestyle.

ಮಳೆಯಲ್ಲೂ ಮುಂದುವರಿದ ಟೊಯೋಟಾ ಕಾರ್ಮಿಕರ ಹೋರಾಟ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕ ಸಂಘದ 59ನೇ ದಿನದ ಹೋರಾಟಕ್ಕೆ ಕೆ.ಆರ್.ಎಸ್ ಪಕ್ಷದ ಬೆಂಬಲ ಸೂಚಿಸಿದೆ

0
post ad

ಬಿಡದಿ : ಭಾರಿ ಮಳೆಯ ನಡುವೆಯೂ ಕೂಡ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕರು ಸ್ವಾಭಿಮಾನಿ ಹೋರಾಟ ಮುಂದುವರೆಸಿದರು.
ಟಿಕೆಎಂ ಕಾರ್ಮಿಕರ ಹೋರಾಟ 59ನೇ ದಿನಕ್ಕೆ ಕಾಲಿಟ್ಟಿದ್ದು, ಮಳೆಯಲ್ಲಿ ನೆನೆದುಕೊಂಡೇ ಆಡಳಿತ ವರ್ಗ ಹಾಗೂ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.


ಕಾರ್ಮಿಕರ ಹೋರಾಟಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ಬೆಂಬಲವನ್ನು ಘೋಷಿಸಿದರು.
ಈ ವೇಳೆ ಮಾತನಾಡಿದ, ಅವರು ಕರ್ನಾಟಕ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಸ್ಥಿಕೆ ವಹಿಸಿ ಶೀಘ್ರವಾಗಿ ಸಮಸ್ಯೆ ಬಗೆಹರಿಸಬೇಕಿದೆ ಎಂದರು.
ಇದು ಕೇವಲ ಟೊಯೋಟಾ ಕಾರ್ಮಿಕರ ಸಮಸ್ಯೆ ಅಲ್ಲ ಇದು ಇಡೀ ದೇಶದ ಕಾರ್ಮಿಕರ ಸಮಸ್ಯೆ.
ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಈ ಧೋರಣೆಯನ್ನು ತಡೆಯಲು ಸೂಕ್ತ ಕಾನೂನನ್ನು ಜಾರಿಗೊಳಿಸಲು ಆಗ್ರಹಿಸಿದರು.
ರಾಜಕರಣಿಗಳು ಹಾಗೂ ಸರ್ಕಾರದ ಮುಖ್ಯಮಂತ್ರಿ ,ಕಾರ್ಮಿಕ ಸಚಿವರು ಕಂಪನಿ ಮಾಲೀಕರಿಗೆ ಬುದ್ದಿ ಹೇಳಿ ಸಮಸ್ಯೆ ಬಗೆಹರಿಸಬೇಕಿದೆ. ನಮ್ಮ ಸಂಪೂರ್ಣ ಬೆಂಬಲ ಈ ಹೋರಾಟಕ್ಕೆ ಇದೆ ಎಂದು ತಿಳಿಸಿದರೂ.
ಕೆ ಆರ್ ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಉಪಸ್ಥಿತರಿದ್ದರು.
ಭಾರಿ ಮಳೆಯನ್ನೂ ಲೆಕ್ಕಿಸದೆ ಕಾರ್ಮಿಕರು ಹೋರಾಟ ಮುಂದುವರೆಸಿದ್ದು ಕಾರ್ಮಿಕ ಆಕ್ರೋಶವನ್ನು ತೋರ್ಪಡಿಸುತಿತ್ತು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 71 ಕಾರ್ಮಿಕರ ಅಮಾನತ್ತು, 59 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.