Take a fresh look at your lifestyle.

ರಾಜಭವನ ಚಲೋ ಜಾಥಾದಲ್ಲಿ ಟಿಕೆಎಂ ಕಾರ್ಮಿಕರು ಭಾಗಿ

ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವಂತೆ ರಾಜ್ಯಪಾಲರಿಗೆ ಮನವಿಯನ್ನು ಟಿಕೆಎಂಇಯು ನೀಡಿತು

0
post ad

ಬೆಂಗಳೂರು : ರೈತ -ಕಾರ್ಮಿಕ-ದಲಿತ ಐಕ್ಯ ಸಮಿತಿ ವತಿಯಿಂದ ಇಂದು ರಾಜಭವನ ಚಲೋ ಜಾಥಾದಲ್ಲಿ ಟೊಯೋಟಾ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಶೀಘ್ರವಾಗಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯ ಮಾಡಿದರು.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆಯು ಸ್ವಾತಂತ್ರ್ಯ ಉದ್ಯಾನವನದ ಮಾರ್ಗವಾಗಿ ಸಾಗಿತ್ತು.
ಕುರುಬೂರು ಶಾಂತಕುಮಾರ ರವರ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ , ಮಾಜಿ ಡಿಸಿಎಂ ಪರಮೇಶ್ವರ್, ಮಾಜಿ ಸಚಿವ ಎಂ.ಬಿ.ಪಾಟೀಲ್ , ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ವಿರೋಧ ಪಕ್ಷದ ನಾಯಕರು, ಕಾರ್ಮಿಕ ಮುಖಂಡರು, ದಲಿತ ಪರ, ರೈತ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರ ನೀಡುವುದಾಗಿ ಮುಖಂಡರು ಭರವಸೆ ನೀಡಿದರು.
ಐಕ್ಯ ಹೋರಾಟ ಸಮಿತಿಯ ಸಂಪೂರ್ಣ ಬೆಂಬಲ ಟೊಯೋಟಾ ಕಾರ್ಮಿಕರ ಪರವಾಗಿ ಇದೆ ಎಂದು ಹೋರಾಟಕ್ಕೆ ಬೆಂಬಲ ನೀಡಿರುವ ಸಂಘಟನೆಗಳ ನಾಯಕರು ತಿಳಿಸಿದರು.
ನಂತರ ರಾಜಭವನಕ್ಕೆ ತೆರಳಿದ ಕಾರ್ಮಿಕರು ಅಲ್ಲಿ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಿದರು.
ಟಿಕೆಎಂ ಕಂಪೆನಿಯಲ್ಲಿ ಅಮಾನತ್ತುಗೊಂಡಿರುವ 60 ಕಾರ್ಮಿಕರ ಭವಿಷ್ಯದ ಬಗೆಗೆ ಕೇವಲ ಭರವಸೆಗಳು ಮಾತ್ರ ಹೊರಬೀಳುತ್ತಿದ್ದು, ಕಾರ್ಮಿಕ ಇಲಾಖೆ ಮತ್ತು ಆಡಳಿತ ವರ್ಗದಿಂದ ಯಾವುದೇ ಅಧಿಕೃತ ಆದೇಶಗಳು ಹೊರಬೀಳದ ಕಾರಣ ಕಾರ್ಮಿಕ ಸಂಘ ಕಾದುನೋಡುವ ತಂತ್ರವನ್ನು ಅನುಸರಿಸುತ್ತಿದೆ.
ಇನ್ನು ಆಡಳಿತ ಮಂಡಳಿಯ ಕಾರ್ಮಿಕ ಅನುಚಿತ ನೀತಿ ವಿರೋಧಿಸುತ್ತ 32 ದಿನಗಳ ಹಿಂದೆ ಪ್ರತಿಭಟನಾ ಹೋರಾಟ ಆರಂಭವಾಗಿತ್ತು. ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಆಡಳಿತ ಮಂಡಳಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಬಾರಿ ತಾತ್ಕಾಲಿಕ ಲಾಕೌಟ್ ಅನ್ನು ವಿಧಿಸಿತ್ತು.