Take a fresh look at your lifestyle.

ಟೊಯೋಟಾ ಕಾರ್ಮಿಕರಿಂದ ನಾಳೆ ಪಾದಯಾತ್ರೆ

ನಾಳೆ ಬೆಳಗ್ಗೆ 8 ಗಂಟೆಗೆ ಬಿಡದಿ ಬಿಜಿಎಸ್ ವೃತ್ತದಿಂದ ಆರಂಭವಾಗುವ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಜೊತೆಗೆ ಜನಪ್ರತಿನಿಧಿಗಳ ಬೆಂಬಲದೊಂದಗಿನ ಟಿಕೆಎಂ ಕಾರ್ಮಿಕರ ಪಾದಯಾತ್ರೆಯು ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯವರೆಗೂ ನಡೆಯಲಿದೆ.

0
post ad

ಬಿಡದಿ : ಟೊಯೋಟಾ ಆಡಳಿತ ಮಂಡಳಿಯ ಸಾಮರ್ಥ್ಯಕ್ಕೂ ಮೀರಿದ, ಅವೈಜ್ಞಾನಿಕ ಕೆಲಸದ ವಿಧಾನ ಮತ್ತು ದೇಶದ ಕಾನೂನುಗಳ ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ಕ್ರಮಗಳ ವಿರುದ್ಧ ನಡೆಸುತ್ತಿರುವ ಸ್ವಾಭಿಮಾನ ಹೋರಾಟದ ಅಂಗವಾಗಿ ಕಾರ್ಮಿಕರಿಗೆ ನಾಳೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಟೊಯೋಟಾ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನ, ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು ಗೊಳಿಸಿರುವುದನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟವು 80ನೇ ದಿನಕ್ಕೆ ಕಾಲಿಟ್ಟಿದೆ.
ನಾಳೆ ಬೆಳಗ್ಗೆ 8 ಗಂಟೆಗೆ ಬಿಡದಿ ಬಿಜಿಎಸ್ ವೃತ್ತದಿಂದ ಆರಂಭವಾಗುವ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಜೊತೆಗೆ ಜನಪ್ರತಿನಿಧಿಗಳ ಬೆಂಬಲದೊಂದಗಿನ ಟಿಕೆಎಂ ಕಾರ್ಮಿಕರ ಪಾದಯಾತ್ರೆಯು ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯವರೆಗೂ ನಡೆಯಲಿದೆ.       ಪಾದಯಾತ್ರೆಯ ನಂತರ ಕಾರ್ಖಾನೆಗೆ ಮುತ್ತಿಗೆ ಹಾಕುವ ಕಾರ್ಯಕ್ರವನ್ನು ಕಾರ್ಮಿಕ ಸಂಘ ರೂಪಿಸಿದೆ. ಪಾದಯಾತ್ರೆಯಲ್ಲಿ ಕಾರ್ಮಿಕರ ಕುಟುಂಬ ಸದಸ್ಯರು ಭಾಗವಹಿಸುತ್ತಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ನಾಳಿನ ಟಿಕೆಎಂಇಯು ಪಾದಯಾತ್ರೆಗೆ ಸ್ಥಳೀಯ ಜನಪ್ರತಿನಿಧಿಗಳು, ಕಾರ್ಮಿಕಪರ, ರೈತ ಪರ ಸಂಘಟನೆಗಳ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲವನ್ನು ಘೋಷಿಸಿದ್ದಾರೆ.
ಸಂಸದ ಡಿಕೆ ಸುರೇಶ್, ಮಾಜಿ ಶಾಸಕ ಎಚ್ ಸಿ ಬಾಲಕೃಷ್ಣ, ಮಾಜಿ ಸಚಿವ ಚೆಲುವರಾಯಸ್ವಾಮಿ, ಸಿಎಂ‌ ಲಿಂಗಪ್ಪ, ಕುಸಮಾ ಹನುಮಂತಯ್ಯ, ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್ ರವರ ರೈತ ಬಣ, ಬಿಎಸ್ ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಪಾದಯಾತ್ರೆಗೆ ಬೆಂಬಲ‌ ಸೂಚಿಸಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇನ್ನು, ಕಾರ್ಮಿಕ, ದಲಿತ, ಕನ್ನಡ ಪರ ಸಂಘಟನೆಗಳ ಸ್ಥಳೀಯ ಪದಾಧಿಕಾರಿಗಳು ನಾಳಿನ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸುತ್ತ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು, ಟಿಕೆಎಂ ಬಿಕ್ಕಟ್ಟು ಬಗೆಹರಿಸಲು ಮಾಗಡಿ ಮಾಜಿ ಶಾಸಕರು ಸೇರಿದಂತೆ ಹಲವು ಸಂಘಟನೆಗಳು ಅಂತಿಮ ಗಡುವು ನೀಡಿದ್ದರು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 80 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿವೆ.