Take a fresh look at your lifestyle.

ವಿಧಾನ ಸೌಧ ಮುತ್ತಿಗೆ ಜಾಥಾದಲ್ಲಿ ಟಿಕೆಎಂ ಕಾರ್ಮಿಕರು

ಬೃಹತ್ ಮೆರವಣಿಗೆಯಲ್ಲಿ ಟಿಕೆಎಂ ನೌಕರರು ಭಾಗಿಯಾಗಿ ಕಾರ್ಮಿಕರ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದರು

0
post ad

ಬೆಂಗಳೂರು : ಸಾರಿಗೆ ನೌಕರರು, ರೈತಪರ ಸಂಘಟನೆಗಳು, ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ವಿಧಾನ ಸೌಧ ಮುತ್ತಿಗೆ ಜಾಥಾದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ನೌಕರರು ಭಾಗವಹಿಸಿದ್ದರು.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದ ಮಾರ್ಗವಾಗಿ ವಿಧಾನ ಸೌಧ ಕಡೆಗೆ ಹೊರಟ ಬೃಹತ್ ಮೆರವಣಿಗೆಯಲ್ಲಿ ಟಿಕೆಎಂ ನೌಕರರು ಭಾಗಿಯಾಗಿ ಕಾರ್ಮಿಕರ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಟಿಕೆಎಂಇಯು ಬೆಂಬಲಕ್ಕೆ ಕನ್ನಡ ಪರ, ರೈತಪರ, ದಲಿತ ಪರ ಸೇರಿದಂತೆ ಕಾರ್ಮಿಕ ಸಂಘಟನೆಗಳು ನಿಂತಿದ್ದವು. ಸ್ವಾಭಿಮಾನಿ ಹೋರಾಟವನ್ನು ಆರಂಭಿಸಿದ್ದ ಟಿಕೆಎಂ ಕಾರ್ಮಿಕರು ಇಂದು ರೈತರ, ಕಾರ್ಮಿಕರ ಜೊತೆಯಲ್ಲಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು.
ಅತ್ತ, ಆಡಳಿತ ಮಂಡಳಿ, ಲಾಕೌಟ್ ಅನ್ನು ಹಿಂಪಡೆದಿದ್ದು ಕಾರ್ಮಿಕರು ಪಾಳಿಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದೆ. ಇತ್ತ ಕಾರ್ಮಿಕರು ಮಾತ್ರ ವಿಧಾನ ಸೌಧ ಚಲೋ ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.
ಸರ್ಕಾರದಿಂದ ಅಮಾನತ್ತುಗೊಂಡಿರುವ 60 ಕಾರ್ಮಿಕರ ಭವಿಷ್ಯದ ಬಗೆಗೆ ಆಶಾದಾಯಕ ಭರವಸೆಗಳು ಹೊರಬೀಳುತ್ತಿದೆ. ಅದನ್ನು ಕಾರ್ಮಿಕ ಸಂಘ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಆಡಳಿತ ಮಂಡಳಿಯ ಕಾರ್ಮಿಕ ಅನುಚಿತ ನೀತಿ ವಿರೋಧಿಸುತ್ತ 32 ದಿನಗಳ ಹಿಂದೆ ಪ್ರತಿಭಟನಾ ಹೋರಾಟ ಆರಂಭವಾಗಿತ್ತು. ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿಯ ಆಡಳಿತ ಮಂಡಳಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಬಾರಿ ತಾತ್ಕಾಲಿಕ ಲಾಕೌಟ್ ಅನ್ನು ವಿಧಿಸಿತ್ತು.