Take a fresh look at your lifestyle.

ಟಿಕೆಎಂ ಕಾರ್ಮಿಕರಿಂದ ವಿನೂತನ ಛತ್ರಿ ಚಳವಳಿ

ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಸಂಸ್ಥೆಯಲ್ಲಿನ ಕಾರ್ಮಿಕರ ಮತ್ತು ಆಡಳಿತ ಮಂಡಳಿಯ ನಡುವಿನ ಬಿಕ್ಕಟ್ಟು ಶಮನವಾಗುವ ಬದಲು, ದಿನೇ ದಿನೇ ಮತ್ತಷ್ಟು ಜಠಿಲವಾಗತೊಡಗಿದೆ

0
post ad

ಬೆಂಗಳೂರು : ಟಿಕೆಎಂ ಕಂಪೆನಿಯ ಆಡಳಿತ ಮಂಡಳಿ, ಕಂಪೆನಿಯ ಗೇಟ್ ಮುಂಭಾಗ ಖಾಲಿ ಪ್ರದೇಶದಲ್ಲಿ ಹಾಕಿದ್ದ ಪೆಂಡಾಲ್ಅನ್ನು ತೆರವುಗೊಳಿಸಲು ಯಶಸ್ವಿಯಾದ ಬೆನ್ನಲ್ಲೇ ಕಾರ್ಮಿಕ ಸಂಘದ ಸದಸ್ಯರು ವಿನೂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಅದು ಪೆಂಡಾಲ್ ಗೆ ಪರ್ಯಾಯವಾಗಿ ಬಿಸಿಲು, ಮಳೆಯಿಂದ ರಕ್ಷಣೆ ನೀಡುವ ಛತ್ರಿಗಳನ್ನು ಬಳಸಿ ವಿನೂತನವಾದ “ಛತ್ರಿ ಚಳವಳಿ” ಆರಂಭಿಸಿದ್ದಾರೆ.


ಆಡಳಿತ ಮಂಡಳಿ ಶೀಘ್ರದಲ್ಲಿ 60 ಜನರ ಅಮಾನತ್ತು ರದ್ದು ಮಾಡಿ ಕಾರ್ಮಿಕರ ಬೇಡಿಕೆ ಈಡೇರಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ಹೋರಾಟದ ರೂಪರೇಷೆಗಳನ್ನು ಇನ್ನಷ್ಟು ಚುರುಕು ಮಾಡಲಾಗುವುದು ಎಂದು ಕಾರ್ಮಿಕ ಸಂಘ ತಿಳಿಸಿದೆ.
ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ತಮ್ಮ ಧೋರಣೆಗಳನ್ನು ಅನುಸರಿಸುತ್ತಿರುವುದರಿಂದ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಸಂಸ್ಥೆಯಲ್ಲಿನ ಕಾರ್ಮಿಕರ ಮತ್ತು ಆಡಳಿತ ಮಂಡಳಿಯ ನಡುವಿನ ಬಿಕ್ಕಟ್ಟು ಶಮನವಾಗುವ ಬದಲು, ದಿನೇ ದಿನೇ ಮತ್ತಷ್ಟು ಜಠಿಲವಾಗತೊಡಗಿದೆ.
ಇನ್ನು, ಕಳೆದ ಎರಡು ದಿನಗಳಿಂದ ಟಿಕೆಎಂ ಕಾರ್ಮಿಕರು, ರೈತ-ಕಾರ್ಮಿಕ-ದಲಿತಗಳ ಐಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ವಿಧಾನ ಸೌದ ಮುತ್ತಿಗೆ ಹಾಗೂ ರಾಜಭವನ ಮುತ್ತಿಗೆ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು. ಅತ್ತ, ಹೋರಾಟ ಹಮ್ಮಿಕೊಂಡಿದ್ದ ಸ್ಥಳದಲ್ಲಿ ಸತ್ಯಾಗ್ರಹಕ್ಕೆ ಅವಕಾಶವಿಲ್ಲವೆಂದು ಜಾಗದ ಮಾಲೀಕರಿಗೆ KIADB ನೋಟೀಸ್ ನೀಡಿತ್ತು. ಮಂಜೂರಾದ ಸ್ಥಳವು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಮಾಲೀಕರಿಗೆ ಸೂಚನೆ ನೀಡಿ, ಮಂಜೂರಾತಿಯನ್ನು ರದ್ದುಪಡಿಸುತ್ತೇವೆ ಎಂದು ತಿಳಿಸಿತ್ತು. ಇದರಿಂದ ಸ್ಥಳದ ಮಾಲೀಕರು ಒತ್ತಡದಿಂದ ಪೆಂಡಾಲ್ಅನ್ನು ತೆಗೆಸಿದ್ದರು. ಈ ಬೆಳವಣಿಗೆಯಿಂದ ಕೆರಳಿರುವ ಟಿಕೆಎಂಇಯು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.