Take a fresh look at your lifestyle.

ಸರ್ಕಾರದ ಆದೇಶವನ್ನು ಎರಡನೇ ದಿನವೂ ದಿಕ್ಕರಿಸಿದ ಟೊಯೋಟಾ ಕಂಪನಿ

ಕಾರ್ಮಿಕರ ಮತ್ತು ಆಡಳಿತ ವರ್ಗಕ್ಕೆ ಸ್ಪಷ್ಟ ನಿರ್ದೇಶನಗಳನ್ನು ಜಾರಿಗೊಳಿಸಲು ಕಾರ್ಮಿಕ ಇಲಾಖೆ ವಿಫಲವಾಗಿರುವುದೇ ಬಿಕ್ಕಟ್ಟು ಜೀವಂತವಾಗಿರುವುದಕ್ಕೆ ಕಾರಣವಾಗಿದೆ. ಸರ್ಕಾರದ ಆದೇಶವನ್ನು ಆಡಳಿತ ಮಂಡಳಿ ಪಾಲಿಸದಿರುವುದನ್ನು ಖಂಡಿಸುತ್ತ ಕಾರ್ಮಿಕರು ಹೋರಾಟ ಮುಂದುವರೆಸಿದ್ದಾರೆ.

0
post ad

ಬೆಂಗಳೂರು/ರಾಮನಗರ : ಕಾರ್ಮಿಕ ಇಲಾಖೆ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪೆನಿ ಹೇರಿದ್ದ ತಾತ್ಕಾಲಿಕ ಲಾಕ್ ಔಟ್ ಮತ್ತು ಕಾರ್ಮಿಕರ ಪ್ರತಿಭಟನೆಗಳೆರೆಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಪಾಲನೆ ಮಾಡಲು ಕಾರ್ಮಿಕ ಸಂಘ ತಯಾರಿದ್ದರೂ ಸಹ ಟೊಯೋಟ ಆಡಳಿತ ಮಂಡಳಿಯು ಕಾರ್ಖಾನೆಯ ಮುಖ್ಯದ್ವಾರದ ಒಳಗೆ ಕಾರ್ಮಿಕರು ಪ್ರವೇಶಿಸಲು ಅನುಮತಿಯನ್ನು ನಿರಾಕರಿಸುತ್ತಿದೆ.
ಸರ್ಕಾರದ ಲಾಕ್ ಔಟ್ ನಿಷೇಧದ ನಂತರ ಕಂಪನಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ರಜೆಗಳನ್ನು ನೀಡುತ್ತಿಲ್ಲ.
ಜೊತೆಗೆ ಕಾರ್ಮಿಕರು ಕಂಪೆನಿಯ ಆವರಣದಲ್ಲಿ ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಜೊತೆಗೆ ಕಾರ್ಮಿಕರು ಎಲ್ಲರನ್ನು ಮುಖ್ಯದ್ವಾರದ ಒಳಗೆ ಪ್ರವೇಶದ ನಿಷೇಧವನ್ನು ಹೇರಿದೆ.
ಲಾಕ್‌ಡೌನ್‌’ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕಾರ್ಮಿಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದೆ ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘಿಸುತ್ತುರುವುದರ ಜೊತೆಗೆ ಇನ್ನು ಹಲವು ಕಾರ್ಮಿಕರನ್ನು ಕೆಲಸದಿಂದ ಅಮಾನತು ಮಾಡಲು ತಯಾರಿ ನಡೆಸಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷ (ಟಿಕೆಎಂಇಯು) ಪ್ರಸನ್ನ ಕುಮಾರ್‌ ಸಿ.ಎಸ್‌.ಚಕ್ಕೆರೆ ಆರೋಪಿಸಿದ್ದಾರೆ.
ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದರು.

  ಇನ್ನು, ಹೋರಾಟದಲ್ಲಿ ಮಗ್ನವಾಗಿರುವ ಕಾರ್ಮಿಕರಿಗೆ ಹಲವು ಕಾರ್ಮಿಕ ಸಂಘಟನೆಗಳು, ಒಕ್ಕೂಟಗಳು ಬೆಂಬಲವನ್ನು ಸೂಚಿಸುತ್ತಿದ್ದು, ಟಿಯುಸಿಸಿ ಅಧ್ಯಕ್ಷರಾದ ಜಿಆರ್ ಶಿವಶಂಕರ್ ಪ್ರತಭಟನಾ ಸ್ಥಳಕ್ಕೆ ಬೇಟಿ ನೀಡಿ ಕಾರ್ಮಿಕರಿಗೆ ಬೆಂಬಲ ಸೂಚಿಸಿದರು.

ಬಿಕ್ಕಟ್ಟನ್ನು ಸಮಂಜಸವಾಗಿ ಬಗೆಹರೆಸದ ಕಾರ್ಮಿಕ ಇಲಾಖೆಯ ನಡೆಯನ್ನು ಖಂಡಿಸಿದರು, ಮುಂದಿನ ಹೋರಾಟಕ್ಕೆ ಎಲ್ಲಾ ಕಾರ್ಮಿಕ ಒಕ್ಕೂಟಗಳು ಬೆಂಬಲವನ್ನು ನೀಡುವ ಭರವಸೆಯನ್ನು ಶಿವಶಂಕರ್ ನೀಡಿದರು.

ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ತಲೆದೋರಿದ ಹಲವಿ ದಿನಗಳ ನಂತರ ಕಾರ್ಮಿಕ ಇಲಾಖೆ ಕೊನೆಗೆ ಇತ್ತ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಸುಮಾರು 3500 ಕಾರ್ಮಿಕರು ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ತಾತ್ಕಾಲಿಕ ಉಪಶಮನ ಎಂಬಂತೆ ಲಾಕ್ ಔಟ್ ಮತ್ತು ಪ್ರತಭಟನೆಗಳನ್ನು ಮಾತ್ರ ಸರ್ಕಾರ ನಿಷೇಧಿಸಿದ್ದು, ಕಾರ್ಮಿಕರ ಮತ್ತು ಆಡಳಿತ ವರ್ಗಕ್ಕೆ ಸ್ಪಷ್ಟ ನಿರ್ದೇಶನಗಳನ್ನು ಜಾರಿಗೊಳಿಸಲು ಕಾರ್ಮಿಕ ಇಲಾಖೆ ವಿಫಲವಾಗಿರುವುದೇ ಮತ್ತೆ ಈ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ.