Take a fresh look at your lifestyle.

ಸರ್ಕಾರಿ ಆದೇಶದ ದಿಕ್ಕರಣೆ, ಮುಂದುವರೆದ ಕಾರ್ಮಿಕರ ಹೋರಾಟ

ಸರ್ಕಾರದ ಆದೇಶವನ್ನು ಆಡಳಿತ ಮಂಡಳಿಯ ಪಾಲಿಸದೆ ಇರುವುದನ್ನು ನೋಡಿದರೆ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಸರ್ಕಾರಾತೀತಾನಾ ? ಅಥವಾ ಸರ್ಕಾರದ ಅಸಹಾಯಕತೆಯಾ ? ಎಂಬ ಸಂದೇಹ ವ್ಯಕ್ತವಾಗುತ್ತಿದೆ

0
post ad

ಬೆಂಗಳೂರು/ರಾಮನಗರ : ಮೂರನೇ ದಿನವೂ ಕೂಡ ಸರ್ಕಾರದ ಆದೇಶ ಪಾಲನೆಗೆ ಬದ್ಧವಾಗಿ ಕಾರ್ಮಿಕ ಸಂಘ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದ್ದರೂ ಟೊಯೋಟ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿಯು ಕಾರ್ಖಾನೆಯ ಒಳಗೆ ಕಾರ್ಮಿಕರನ್ನು ಪ್ರವೇಶ ಮಾಡಲು ಅನುಮತಿ ನೀಡಲು ನಿರಾಕರಿಸಿದೆ.
ಸರ್ಕಾರ ಲಾಕ್ ಔಟ್ ನಿಷೇಧಿಸಿ ನಾಲ್ಕು ದಿನ ಕಳೆದರೂ, ನೆನ್ನೆ ಭಾನುವಾರ ರಜೆ ಇದ್ದರಿಂದ ಇಂದು ಕರ್ತವ್ಯಕ್ಕೆ ಹಾಜರಾಗಲು ನೌಕರರು ಕಂಪನಿ ಬಳಿ ಬಂದಾಗ ಒಳಗೆ ಪ್ರವೇಶಿಸಲು ಆಡಳಿತ ವರ್ಗ ಮುಖ್ಯದ್ವಾರದಲ್ಲಿಯೇ ತಡೆದು ಒಳ ಪ್ರವೇಶವನ್ನು ನಿರಾಕರಿಸುತ್ತಿದೆ.

ಸರ್ಕಾರದ ಆದೇಶವನ್ನು ಧಿಕ್ಕರಿಸಿ, ಸರ್ಕಾರದ ಬಗೆಗೆ ಅಗೌರವ ಸೂಚಿಸುತ್ತಿರುವ ಆಡಳಿತ ಮಂಡಳಿಯ ನಡೆಯನ್ನು ಖಂಡಿಸುತ್ತಾ ಕಾರ್ಮಿಕರು ಇಂದೂ ಸಹ ಹೋರಾಟವನ್ನು ಮುಂದುವರೆಸಿದ್ದಾರೆ.
ಆಡಳಿತ ವರ್ಗ ನಿಷೇಧದ ಆದೇಶವನ್ನು ದಿಕ್ಕರಿಸಿವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ, ಸ್ಪಷ್ಟ ಸೂಚನೆ ಅಥವಾ ಸಂದೇಶವನ್ನು ರವಾಣಿಸಲು ಕಾರ್ಮಿಕ ಇಲಾಖೆ ವಿಫಲವಾಗಿರುವುದೇ ಬಿಕ್ಕಟ್ಟು ಜೀವಂತವಾಗಿರುವುದಕ್ಕೆ ಕಾರಣವಾಗಿದೆ. ಆಡಳಿತ ಮಂಡಳಿಯ ನಡೆಯು ಸರ್ಕಾರಾತೀತವಾಗಿ ಪರಿಣಮಿಸಿದ್ದು ಮೃದು ಧೋರಣೆಯಿಂದ ಕಾರ್ಮಿಕ ಇಲಾಖೆ ನಡೆದುಕೊಳ್ಳುತ್ತಿರುವುದೇ ಬಿಕ್ಕಟ್ಟು ಉಪಶಮನಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಹಲವು ಕಾರ್ಮಿಕ ಒಕ್ಕೂಟಗಳು ಆಪಾದಿಸುತ್ತಿದ್ದು, ಇಂದು ಟಿಕೆಎಂಇಯು ಹೋರಾಟಕ್ಕೆ ಹಲವು ಕಾರ್ಮಿಕ ಸಂಘಟನೆಗಳು ಬೆಂಬಲ ನೀಡುವ ಭರವಸೆಗಳನ್ನು ಪ್ರಕಟಿಸಿವೆ.
ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿಯ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ತಲೆದೋರಿದ ಹಲವು ದಿನಗಳ ನಂತರ ಕಾರ್ಮಿಕ ಇಲಾಖೆ ಕೊನೆಗೆ ಇತ್ತ ಲಾಕ್ ಔಟ್ ಮತ್ತು ಪ್ರತಿಭಟನೆಗಳೆರಡನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಸುಮಾರು 3500 ಕಾರ್ಮಿಕರು ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.