Take a fresh look at your lifestyle.

ಟೊಯೋಟಾ ಬಿಕ್ಕಟ್ಟು ಸದನದಲ್ಲಿ ಪ್ರಸ್ತಾಪ

ಆಡಳಿತ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷದ ನಾಯಕರು ಟಿಕೆಎಂ ಕಾರ್ಮಿಕರ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸಿದ್ದರಿಂದ ಆಡಳಿತ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗತೊಡಗಿವೆ.

0
post ad

ಬೆಂಗಳೂರು /ಬಿಡದಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವಿನ ಬಿಕ್ಕಟ್ಟು ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ.
ಇದರೊಂದಿಗೆ ಟಿಕೆಎಂ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನ, ಸನ್ನಡತೆ ಪತ್ರಕ್ಕೆ ಸಹಿ ಷರತ್ತು ವಿಧಿಸಿ ಲಾಕ್ ಔಟ್ ತೆರವು ಗೊಳಿಸಿರುವುದು ಸೇರಿದಂತೆ ಕಾರ್ಮಿಕರ ಕೂಗಿನ ಕಡೆ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಟೊಯೋಟಾ ಕಾರ್ಮಿಕರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಆಡಳಿತ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷದ ನಾಯಕರು ಟಿಕೆಎಂ ಕಾರ್ಮಿಕರ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸಿದ್ದರಿಂದ ಕಾರ್ಮಿಕ ಇಲಾಖೆ ಮತ್ತು ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗತೊಡಗಿವೆ.
ಇಂದಿನ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಟೊಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಹೋರಾಟ ಮತ್ತು ಬಿಕ್ಕಟ್ಟನ್ನು ಪ್ರಸ್ತಾಪಿಸಿದರು.
ಜೊತೆಗೆ, ವಿಧಾನ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಹರಪ್ಪನಹಳ್ಳಿ ಶಾಸಕ ಕರುಣಾಕರ ರೆಡ್ಡಿಯವರು ಟೊಯೋಟಾ ಬಿಕ್ಕಟ್ಟು ಅನ್ನು ಪ್ರಸ್ತಾಪಿಸಿದರು.
ಆಡಳಿತ ಮಂಡಳಿಯ ಮೇಲೆ ಸರ್ಕಾರದ ಮಟ್ಟದಲ್ಲಿ ಒತ್ತಡಗಳು ಹೆಚ್ಚಾಗುತ್ತಿರುವುದರಿಂದ ಟಿಕೆಎಂ ಕಾರ್ಮಿಕರ ಹೋರಾಟವು ಶೀಘ್ರದಲ್ಲಿ ತಾರ್ಕಿಕ ಅಂತ್ಯ ಕಾಣುವ ಸನ್ನಿವೇಶಗಳು ಭಾಸವಾಗುತ್ತಿವೆ.
ಈ ನಡುವೆ ಇಂದು ಕಾರ್ಖಾನೆಯ ಬಳಿ ಕಾರ್ಮಿಕ ಸಚಿವರ ಸಮ್ಮುಖದಲ್ಲಿ ಕಾರ್ಮಿಕ ಸಂಘ ಮತ್ತು ಆಡಳಿತ ವರ್ಗದ ನಡುವೆ ನಡೆಯಬೇಕಿದ್ದ ಸಭೆಯೂ ರದ್ದಾಗಿದೆ. ನಾಳೆ ಈ ಬಗೆಗೆ ಸಮಾಲೋಚನೆ ನಡೆಸುವ ಸಾಧ್ಯತೆಯ ಸುಳಿವು ದೊರೆತಿದೆ.
ಇನ್ನು, ದೇಶದ ಕಾನೂನುಗಳನ್ನು ಗಾಳಿಗೆ ತೂರಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಆಡಳಿತ ವರ್ಗದ ವಿರುದ್ಧ ಸ್ವಾಭಿಮಾನಿ ಕಾರ್ಮಿಕರು ನಡೆಸುತ್ತಿರುವ ಹೋರಾಟವು 86 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಹೋರಾಟಕ್ಕೆ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆಯಿಂದ ಬೆಂಬಲ ದೊರೆತಿದೆ.
ವೇದಿಕೆಯ ಮುಖಂಡರು ಟಿಕೆಎಂ ಕಾರ್ಮಿಕ ಹೋರಾಟದಲ್ಲಿ ಭಾಗಿಯಾಗಿದ್ದರು, ಮುಂದಿನ ಹೋರಾಟದ ಉದ್ದಕ್ಕೂ ಕಾರ್ಮಿಕರ ಜೊತೆ ನಿಲ್ಲಿವುದಾಗಿ ಹೇಳಿದರು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಲಿ. ಕಂಪನಿಯಲ್ಲಿ ಕಾರ್ಮಿಕ ಸಂಘದ ಒಬ್ಬ ಪದಾಧಿಕಾರಿ ಅಮಾನತ್ತಿನಿಂದ ಆರಂಭವಾದ ಬಿಕ್ಕಟ್ಟು 66 ಕಾರ್ಮಿಕರ ಅಮಾನತ್ತು, 86 ದಿನಗಳ ಪ್ರತಿಭಟನೆಗೆ ಕಾರಣವಾಗಿದೆ.
ರಾಜ್ಯದ ಹಲವು ಕಾರ್ಮಿಕ, ದಲಿತ, ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ಟೊಯೋಟಾ ಕಾರ್ಮಿಕರ ಪರವಾಗಿ ನಿಂತು ಬೆಂಬಲ ಸೂಚಿಸುತ್ತಿದ್ದು, ಈ ವಿಷಯ ಸದನದಲ್ಲೂ ಪ್ರತಿಧ್ವನಿಸಿದೆ.