Take a fresh look at your lifestyle.

ಟೊಯೋಟಾ ಕಿರ್ಲೋಸ್ಕರ್ ತಾತ್ಕಾಲಿಕ ಲಾಕ್​​ ಔಟ್​

ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರಿಂದ ಕಂಪನಿಯು ತಾತ್ಕಾಲಿಕವಾಗಿ ಲಾಕೌಟ್​ ತಂತ್ರ ಹೆಣೆದಿದೆ ಎನ್ನಲಾಗುತ್ತಿದೆ

0
post ad

ರಾಮನಗರ: ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ತಾತ್ಕಾಲಿಕ ಲಾಕೌಟ್ ಘೋಷಿಸಿದೆ. ಕಂಪನಿಯ ಕಾರ್ಮಿಕರು ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯು ಲಾಕೌಟ್ ಆಗಿದ್ದು, ಕಂಪನಿಯ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಘೋಷಣೆ ಮಾಡಿದೆ.


ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಕಾರ್ಮಿಕರು ಕಂಪನಿ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಂಪನಿಯು ತಾತ್ಕಾಲಿಕವಾಗಿ ಲಾಕೌಟ್​ ಮಾಡಲಾಗಿದೆ. ಸುಮಾರು 3500 ಕಾರ್ಮಿಕರು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಕಾರ್ಮಿಕರ ಪ್ರತಿಭಟನೆಯನ್ನು ಹತ್ತಿಕ್ಕಲು ಕಂಪನಿ ತಾತ್ಕಾಲಿಕ ಲಾಕ್ ಔಟ್ ಯೋಜನೆಯನ್ನು ರೂಪಿಸಿದ್ದು, ಮುಂದೆ ಈ ತಂತ್ರ ಯಾವ ಸ್ವರೂಪ ಪಡದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.