ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಟೊಯೋಟಾ ಕಾರ್ಮಿಕರ ನಿರ್ಧಾರ
ಕೆಲಸಕ್ಕೆ ಹಾಜರಾಗಿದ್ದ ಕಾರ್ಮಿಕರು ಲಾಕ್ ಔಟ್ ನಂತರದ ಒಳಗಡೆ ನೀಡುತ್ತಿರುವ ಶೋಷಣೆ ತಡೆಯಲಾಗದೆ ಕಾರ್ಮಿಕ ಸಂಘದಲ್ಲಿ ಕ್ಷಮೆ ಕೇಳಿ ಮತ್ತೆ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ


ರಾಮನಗರ : ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಾರ್ಮಿಕರು ಆಡಳಿತ ಮಂಡಳಿಯ ಕಾರ್ಮಿಕ ಅನುಚಿತ ನೀತಿಯನ್ನು ಖಂಡಿಸಿ ನಡೆಸುತ್ತಿರುವ ಹೋರಾಟ ಮುಂದುವರೆದಿದೆ.
ಪ್ರತಿಭಟನೆಯ ಜಾಗ ಸೇರಿದಂತೆ ಮೂಲ ಸೌಲಭ್ಯ ಕೊರತೆಗಳ ಹೊರತಾಗಿರುವ ಟಿಕೆಎಂ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 37 ನೇ ದಿನಕ್ಕೆ ಕಾಲಿಟ್ಟಿದೆ.
ಮೇಲಧಿಕಾರಿಗಳ ಒತ್ತಡಕ್ಕೆ ಒಳಗಾಗಿ ವಿಧಿಯಿಲ್ಲದೆ ಕೆಲಸಕ್ಕೆ ಹಾಜರಾಗಿದ್ದ ಕಾರ್ಮಿಕರು ಲಾಕ್ ಔಟ್ ನಂತರದ ಒಳಗಡೆ ನೀಡುತ್ತಿರುವ ಶೋಷಣೆ ತಡೆಯಲಾಗದೆ ಕಾರ್ಮಿಕ ಸಂಘದಲ್ಲಿ ಕ್ಷಮೆ ಕೇಳಿ ಮತ್ತೆ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ಇದು ಕಾರ್ಖಾನೆಯ ಒಳಗೆ ಕಾರ್ಮಿಕರು ಅನುಭವಿಸುತ್ತಿರುವ ಕಷ್ಟಗಳಿಗೆ ತಾಜಾ ಉದಾಹರಣೆ ಎಂದು ಕಾರ್ಮಿಕರು ಹೇಳಿದ್ದಾರೆ.
ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಗಮನಹರಿಸದಿದ್ದರೆ ಮುಂದೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾ ನಿರತ ಕಾರ್ಮಿಕರು ಹೇಳಿಕೆ ನೀಡಿದ್ದಾರೆ.
ಇನ್ನು, ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಪ್ರತಿಭಟನಾನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಶುಕ್ರವಾರ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಪ್ರಕಟಿಸಿದರು.