Take a fresh look at your lifestyle.

ಪ್ರಧಾನಿ ಬಳಿಗೆ ಟೊಯೋಟಾ ಬಿಕ್ಕಟ್ಟು

ಕಾರ್ಮಿಕ ಇಲಾಖೆ ಅಧಿಕಾರಿಗಳು ಕಂಪನಿಯ ಆಡಳಿತ ಮಂಡಳಿಯ ವಿಧೇಯಕರಾಗಿ, ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದನ್ನು ಫೆಡರೇಷನ್ ಗಂಭೀರವಾಗಿ ಪರಿಗಣಿಸಿದೆ

0
post ad

ರಾಮನಗರ: ಟೊಯೋಟಾ  ಆಡಳಿತ ವರ್ಗ ಮತ್ತು ಕಾರ್ಮಿಕ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನು ಕಾರ್ಮಿಕ ಇಲಾಖೆಯಂತೂ ಆಡಳಿತ ಮಂಡಳಿಯ ಆಜ್ಞೆಯನ್ನು ಚಾಚುತಪ್ಪದೇ ಪಾಲನೆ ಮಾಡಿ ವಸ್ತುಸ್ಥಿತಿ ಅರಿಯಲು ಕಾರ್ಖಾನೆಯಲ್ಲಿ ಈವರೆಗೂ ಪರಿಶೀಲನೆ ಮಾಡಲು ಧೈರ್ಯ ತೋರಿಲ್ಲ. ಇಲಾಖೆಯು, ಕಂಪನಿಯ ಆಡಳಿತ ಮಂಡಳಿಯ ವಿಧೇಯವಾಗಿ,  ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಭಾರತ ಕಾರು ತಯಾರಿಕಾ ಕಂಪೆನಿಗಳ ಕಾರ್ಮಿಕ ಸಂಘಗಳ ಒಕ್ಕೂಟ ಅನ್ಯ ಮಾರ್ಗವಿಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.

ಟಿಕೆಎಂ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ದಕ್ಷಿಣ ಭಾರತ ಕಾರು ತಯಾರಿಕಾ ಕಂಪೆನಿಗಳ ಯೂನಿಯನ್‌ ಗಳ ಒಕ್ಕೂಟ ಟಿಕೆಎಂ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಟಿಕೆಎಂಇಯು ಪರವಾಗಿ ತಮಿಳುನಾಡಿನಲ್ಲಿರುವ ಆಟೋಮೋಬೈಲ್ ಕಂಪನಿಗಳು ಒಟ್ಟಾಗಿ ಚೆನ್ನೈ ನಗರದಲ್ಲಿ ಒಂದು ದಿನ ಸಾಂಕೇತಿಕ ಪ್ರತಿಭಟನೆ ಮಾಡಲು ಯೋಜನೆ ರೂಪಿಸಾಗಿದೆ.
ಒಕ್ಕೂಟವು ಕೇಂದ್ರ ಸರ್ಕಾರದ ಬಳಿಗೆ ಈ ಸಮಸ್ಯೆಯನ್ನು ಕೊಂಡೊಯ್ಯಲು ನಿರ್ಧರಿಸಿದ್ದು, ನವದೆಹಲಿಗೆ ನಿಯೋಗವನ್ನು ಕಳುಹಿಸಿಕೊಡಲು  ಯೋಜನೆ ರೂಪಿಸಿದೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಾರ್ಖಾನೆ ಮುಂಭಾಗ ನಡು ರಸ್ತೆಯಲ್ಲಿ ಸಂಸ್ಥೆಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸುತ್ತಾ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟಿಕೆಎಂ ಕಾರ್ಮಿಕರು ನಡೆಸುತ್ತಿರುವ ಸ್ವಾಭಿಮಾನಿ ಹೋರಾಟ 42ನೇ ದಿನಕ್ಕೆ ಕಾಲಿಟ್ಟಿದೆ.
ದಕ್ಷಿಣ ಭಾರತದ ಕಾರು ತಯಾರಿಕೆ ಪ್ರತಿಷ್ಠಿತ ಕಂಪೆನಿಗಳಾದ ಬಿಎಂಡಬ್ಲ್ಯೂ, ಫೋರ್ಡ್‌, ನಿಸ್ಸಾನ್‌, ಹುಂಡಾಯ್‌ , ವೋಲ್ವೋ, ಕಂಪೆನಿಗಳ ಕಾರ್ಮಿಕ ಸಂಘಗಳು ನೆನ್ನೆ ಟಿಕೆಎಂ ಹೋರಾಟದಲ್ಲಿ ಭಾಗವಹಿಸಿ ಮುಕ್ತ ಬೆಂಬಲವನ್ನು  ವ್ಯಕ್ತಪಡಿಸಿದ್ದವು.
ಇನ್ನು, ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್‌ ಚಕ್ಕೆರೆ ಮಾತನಾಡುತ್ತಾ, ಟಿಕೆಎಂ ಕಾರ್ಮಿಕರು ಬೀದಿಗೆ ಬಿದ್ದು ಹೋರಾಟ ಮಾಡಿತ್ತಿದ್ದು, ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಇದೀಗ ದಕ್ಷಿಣ ಭಾರತದ ಕಾರು ತಯಾರಿಕಾ ಕಂಪೆನಿಗಳ ಯೂನಿಯನ್‌ ಫೆಡರೇಷನ್‌ ನಮ್ಮ ಹೋರಾಟಕ್ಕೆ ಸಾಥ್‌ ನೀಡಿವೆ. ಪ್ರಮುಖ ಕಾರು ಕಂಪೆನಿಗಳ ಯೂನಿಯನ್‌ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಟೊಯೋಟಾ ಕಿಲೋಸ್ಕರ್‌ ಮೋಟಾರ್‌ ಕಂಪೆನಿ ಆಡಳಿತ ವರ್ಗ ನಡೆಸುತ್ತಿರುವ ಕಾರ್ಮಿಕರ ಮೇಲಿನ ಶೋಷಣೆ ಮತ್ತು ದಬ್ಬಾಳಿಕೆ ಮಾಡು ಇಲ್ಲವೇ ಮಡಿ ಎಂಬ ದುಸ್ಥಿತಿ ತಂದೊಡ್ಡಿದೆ. ಟಿಕೆಎಂ ರೂಪಿಸಿರುವ ಹೊಸ ವ್ಯವಸ್ಥೆಯನ್ನು ದಕ್ಷಿಣ ಭಾರತದ ಎಲ್ಲಾ ಪ್ರತಿಷ್ಠಿತ ಕಾರು ಕಂಪೆನಿಗಳು ಅನುಕರಣೆ ಮಾಡಲು ಹೊರಟ್ಟಿದ್ದು ಕಾರ್ಮಿಕರನ್ನು ಶೋಷಣೆ ಮಾಡಲು ಮುಂದಾಗಿವೆ. ಹೀಗಾಗಿ ಶೀಘ್ರವೇ ಕೇಂದ್ರ ಸರಕಾರದ ಕಾರ್ಮಿಕ ಸಚಿವರು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸುವುದು ಸೂಕ್ತ ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.