Take a fresh look at your lifestyle.

ಡಿಸಿ ಬೆದರಿಕೆಯನ್ನು ಲೆಕ್ಕಿಸದೇ ಮುಷ್ಕರ ಆರಂಭಿಸಿದ ಸಾರಿಗೆ ನೌಕರರು

ಡಿಸಿ ಮಾತನ್ನು ಲೆಕ್ಕಿಸದ ಪ್ರತಿಭಟನೆಕಾರರು ಅವರ ಬೆದರಿಕೆಗೆ ಜಗ್ಗದೆ ಫೋಟೋ ತೆಗೆದುಕೊಳ್ಳಿ ಅಂತ ನೌಕರರೇ ಮುಂದೆ ಬಂದು ನಿಂತುಕೊಂಡಿದ್ದಾರೆ

0
post ad

ಹಾವೇರಿ : ಸಾರಿಗೆ ನೌಕರರು ಇಂದು ತಮ್ಮ ಹೋರಾಟವನ್ನು ತೀವ್ರಗೊಳಿಸಿ ಸರ್ಕಾರದ ಗಮನ ಸೆಳೆಯುವಲ್ಲಿ  ಸಫಲರಾಗಿದ್ದರೆ, ಹಾವೇರಿಯಲ್ಲಿ ಸಾರಿಗೆ ಸಿಬ್ಬಂದಿ ಡಿಸಿಗೆ ಬಿಸಿ ಮುಟ್ಟಿಸಿ ಪ್ರತಿಭಟನೆಗೆ ಇಳಿದಿದ್ದಾರೆ.
ವಾಯುವ್ಯ ಸಾರಿಗೆ ನಿಗಮದ ಹಾವೇರಿ ಡಿಸಿ ಆದೇಶವನ್ನು ಲೆಕ್ಕಿಸದೇ ಮುಷ್ಕರವನ್ನು ಆರಂಭಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗುವುದಿಲ್ಲವೆಂದು ಬಸ್ ಗಳನ್ನು ಬಂದ್ ಮಾಡಿ  ನೌಕರರು ಪ್ರತಿಭಟನೆ ಮುಂದುವರೆಸಿದ್ದಾರೆ.
ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಸಿಬ್ಬಂದಿಗೆ ಡ್ಯೂಟಿ ಮಾಡಿ ಇಲ್ಲ ಮನೆಗೆ ಹೋಗಿ, ನಿಮ್ಮ ಮೇಲೆ ಕಂಪ್ಲೆಂಟ್ ಕೊಡ್ತೀನಿ ಎಂದು  ನೌಕರರಿಗೆ ಅವಾಜ್ ಹಾಕಿ ಹೆದರಿಸುವ ಪ್ರಯತ್ನ ಮಾಡಿದ್ದಾರೆ.  ಬಸ್ ಆರಂಭ ಮಾಡೋದಿಲ್ಲ ಎಂದ ಸಿಬ್ಬಂದಿಯ ಫೋಟೋ, ವಿಡಿಯೋ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ.
ಡಿಸಿ ಮಾತನ್ನು ಲೆಕ್ಕಿಸದ ಪ್ರತಿಭಟನೆಕಾರರು ಅವರ ಬೆದರಿಕೆಗೆ ಜಗ್ಗದೆ ಫೋಟೋ ತೆಗೆದುಕೊಳ್ಳಿ ಅಂತ ನೌಕರರೇ ಮುಂದೆ ಬಂದು ನಿಂತುಕೊಂಡಿದ್ದಾರೆ.
ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ, ವೇತನ ಹೆಚ್ಚಳ ಮಾಡಿ ಅಂತಾ ಆಗ್ರಹಿಸಿ ಬಸ್ ಗಳನ್ನು ನಿಲ್ಲಿಸಿಕೊಂಡು ಅವುಗಳ ಮುಂದೆ ನೌಕರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.