Take a fresh look at your lifestyle.

ರೈತ ಹೋರಾಟ ಬೆಂಬಲಿತ ಜೆಸಿಟಿಯು ಪ್ರತಿಭಟನೆಗೆ ಟಿಯುಸಿಸಿ ಬೆಂಬಲ

21ನೇ ಶತಮಾನದಲ್ಲೇ ಅತ್ಯಂತ ಪರಿಣಾಮಕಾರಿ ರೈತ ಹೋರಾಟವೆಂದು ಬಣ್ಣಿಸಿದ ಶಿವಶಂಕರ್.. ಜೆಸಿಟಿಯು ಮುಂದಿನ ದಿನಗಳಲ್ಲಿ ರೈತ ಹೋರಾಟಕ್ಕೆ ಬೆಂಬಲ ನೀಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು...

0
post ad

ಬೆಂಗಳೂರು : ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ‌ ಬೆಂಬಲ ಸೂಚಿಸಿ ಜೆಸಿಟಿಯು ಬೆಂಗಳೂರಿನಲ್ಲಿ ಕರೆ ನೀಡಿರುವ ಪ್ರತಿಭಟನಾ ಧರಣಿಗೆ ಟಿಯುಸಿಸಿ ಕಾರ್ಮಿಕ ಒಕ್ಕೂಟ ಬೆಂಬಲ ಸೂಚಿಸಿದೆ.
ನಾಳೆ ನಗರದ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆಯ ಮುಂಭಾಗ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕಾರ್ಮಿಕ ವರ್ಗ ರೈತರಿಗೆ ಬೆಂಬಲವನ್ನು ತಿಳಿಸುತ್ತಾ ಮತ್ತಷ್ಟು ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯಕ್ಕೆ ಮುಂದಾಗಿದೆ.

   ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ರೈತರು ಹಮ್ಮಿಕೊಂಡಿರುವ ಐತಿಹಾಸಿಕ ದೆಹಲಿ ರೈತ ಹೋರಾಟವನ್ನು ಬೆಂಬಲಿಸುತ್ತಾ,  ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಡಿಸೆಂಬರ್ 25ರಂದು ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದ್ದು, ಟಿಯುಸಿಸಿ ಕರ್ನಾಟಕ ಮತ್ತದರ ಸಮ್ಮಿಳಿತ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ಟಿಯುಸಿಸಿ ರಾಜ್ಯಾಧ್ಯಕ್ಷ ಜಿ.ಆರ್ ಶಿವಶಂಕರ್ ತಿಳಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ದಿನೇ ದಿನೇ ಉಷ್ಣಾಂಶ ಕುಸಿತಗೊಳ್ಳುತ್ತಿದ್ದರೂ ಮೈ ಕೊರೆಯುವ ಚಳಿಯಲ್ಲೂ ರೈತರು ಹೋರಾಟವನ್ನು ಮುಂದುವರೆಸಿದ್ದಾರೆ.  

ಕೇಂದ್ರ ಸರ್ಕಾರ ನೂತನ ಕೃಷಿ ನೀತಿಯನ್ನು ಕೈ ಬಿಡುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲವೆಂದು ದಿಟ್ಟತನದಿಂದ ಮುಂದುವರೆಯುತ್ತಿರುವ ರೈತ ಹೋರಾಟವು 21ನೇ ಶತಮಾನದಲ್ಲೇ ಅತ್ಯಂತ ಪರಿಣಾಮಕಾರಿ ರೈತ ಹೋರಾಟವೆಂದು ಬಣ್ಣಿಸಿದ ಶಿವಶಂಕರ್ ಸಿಂಘೂ, ಘಾಜಿಪುರ್ ಮತ್ತು ಟಿಕ್ರಿ ಗಡಿಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಪ್ರಸ್ತುತ ಪರಿಸ್ಥಿತಿಗಳಲ್ಲಿ ದೇಶದ ಬೆನ್ನೆಲುಬಾದ ರೈತರ ಹೋರಾಟಕ್ಕೆ ಕಾರ್ಮಿಕ ಬೆಂಬಲ ಅತ್ಯಗತ್ಯವಾಗಿದೆ. ಈ ಕಾರಣಕ್ಕಾಗಿ ರೈತ ಹೋರಾಟಕ್ಕೆ ಬೆಂಬಲ ಘೋಷಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದೆ. ಈ ಪ್ರತಿಭಟನೆಗೆ ಟಿಯುಸಿಸಿ ಸಂಪೂರ್ಣ ಬೆಂಬಲವನ್ನು ಘೋಷಿಸುತ್ತದೆ ಎಂದು ಶಿವಶಂಕರ್ ವಾಯ್ಸ್ ಆಫ್ ವರ್ಕರ್ಸ್’ಗೆ ತಿಳಿಸಿದರು.