Take a fresh look at your lifestyle.

ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಉದಯ ಟಿವಿ ಮತ್ತು ನೌಕರರ ಜಂಟಿ ಸಭೆ

ಸಭೆಗೆ ಗೈರಾದ್ದಲ್ಲಿ ಅವರವರ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ನಡೆಸಿ ಕಾನೂನಿನ ಅನ್ವಯ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಕಾರ್ಮಿಕ ಆಯುಕ್ತರು ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ

0
post ad

ಬೆಂಗಳೂರು : ಸನ್‌ ಟಿವಿ ನೆಟ್‌ವರ್ಕ್‌ ಸಮೂಹ ಸಂಸ್ಥೆಯಾದ ಉದಯ ಟಿವಿಯಲ್ಲಿ ಕಾರ್ಮಿಕ ಅನುಚಿತ ನೀತಿ ಅನುಸರಿಸಿ ಕೆಲಸ ಮಾಡುತ್ತಿರುವ 27ಜನ ನೌಕರರನ್ನು ಏಕಾಏಕಿ ದೇಶದಾದ್ಯಂತ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಜಂಟಿ ಸಭೆಯನ್ನು ಕರೆಯಲಾಗಿದೆ.
ಉದಯ ಟಿವಿ ಎಂಪ್ಲಾಯೀಸ್‌ ಯೂನಿಯನ್‌, ಉದಯ ಟಿವಿ ಆಡಳಿತ ಮಂಡಳಿ ಕಾನೂನುಬಾಹಿರವಾಗಿ ಮಾಡಿದ್ದ ಕಾರ್ಮಿಕರ ವರ್ಗಾವಣೆ ಮತ್ತು ಶಾಸನಾತ್ಮಕ ಸವಲತ್ತುಗಳ ಅಲಭ್ಯತೆ ಬಗೆಗೆ ಕಾರ್ಮಿಕ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ಗಮನಕ್ಕೆ ತಂದು ನ್ಯಾಯ ಒದಗಿಸಲು ಮನವಿ ಮಾಡಿತ್ತು.
ಲೆಬರ್ ಚೀಪ್ ಸೆಕ್ರೆಟರಿ ವಿವಾದವನ್ನು ಕೂಲಂಕುಷವಾಗಿ ಪರಿಶೀಲಿಸಲು ಕಾರ್ಮಿಕ ಆಯುಕ್ತರಿಗೆ ಸೂಚನೆ ನೀಡಿದ್ದರು, ಈ ಹಿನ್ನಲೆಯಲ್ಲಿ ಕಾರ್ಮಿಕ ಆಯುಕ್ತರು ಡಿಸೆಂಬರ್ 21 ರಂದು ಜಂಟಿ ಸಭೆಯನ್ನು ಕರೆದಿದ್ದಾರೆ.
ಸದರಿ ಸಭೆಯ ವಿಚಾರಣೆಗೆ ಹಾಜರಾಗಲು ಉಭಯರಿಗೂ ಸೂಚಿಸಿದ್ದು, ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಮ್ಯಾನೆಜ್‌ಮೆಂಟ್‌ ಮತ್ತು ಉದಯ ಎಂಪ್ಲಾಯಿಸ್ ಯೂನಿಯನ್ ಗೆ ಆಯುಕ್ತರು ತಿಳಿಸಿದ್ದಾರೆ.


ಒಂದು ವೇಳೆ ಸಭೆಗೆ ಗೈರಾದ್ದಲ್ಲಿ ಅವರವರ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ನಡೆಸಿ ಕಾನೂನಿನ ಅನ್ವಯ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಕಾರ್ಮಿಕ ಆಯುಕ್ತರು ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ.
ಕಾನೂನಾತ್ಮಕ ಸವಲತ್ತುಗಳನ್ನು ಕೇಳಿದ್ದಕ್ಕೆ ಪ್ರತೀಕಾರವಾಗಿ ಆಡಳಿತ ಮಂಡಳಿ 27 ಸಿಬ್ಬಂದಿಯನ್ನು ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಿತ್ತು.
ಈ ಬೆಳವಣಿಗೆಯನ್ನು ಖಂಡಿಸುತ್ತಾ ಉದಯ ಟಿವಿ ಸಿಬ್ಬಂದಿ ಬೀದಿ ಬಿದ್ದು, ಹೋರಾಟವನ್ನು ಮುಂದುವರೆಸಿದ್ದರು. ಇತ್ತೀಚೆಗೆ ಮೌರ್ಯ ವೃತ್ತದ ಬಳಿ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಂಡು ರಾಜ್ಯದ ಗಮನ ಸೆಳೆದಿದ್ದರು.