Take a fresh look at your lifestyle.

ಎರಡನೇ ದಿನಕ್ಕೆ ಕಾಲಿಟ್ಟ ಉದಯಟಿವಿ ಸಿಬ್ಬಂದಿಯ ಪ್ರತಿಭಟನೆ, ಪೊಲೀಸರ ಆಗಮನ – ಚರ್ಚೆಗೆ ಆಹ್ವಾನ

ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಜಾರಿಗೆ ತರದೇ, ಬೋನಸ್, ಕನಿಷ್ಠ ವೇತನ, ಇಂಕ್ರೀಮೆಂಟ್, ಟಿಎ, ಡಿಎ, ಇಎಸ್ ಐ, ಪಿಎಫ್ ಗಳಂತಹ ಸಾಮಾನ್ಯ ಕಾರ್ಮಿಕ ಸವಲತ್ತುಗಳನ್ನು ಆಡಳಿತ ವರ್ಗ ನೀಡದೇ ಇರುವುದೇ ಇಡೀ ಬಿಕ್ಕಟ್ಟಿಗೆ ಮೂಲ ಕಾರಣ ಎನ್ನಲಾಗುತ್ತಿದೆ

0
post ad

ಬೆಂಗಳೂರು : ಉದಯ ಟಿವಿ ಆಡಳಿತ ಮಂಡಳಿ ಕಾರ್ಮಿಕರ ಬಗೆಗೆ ದಮನಕಾರಿ ನೀತಿಯನ್ನು ಅನುಸರಿಸುತ್ತಾ ನೌಕರರನ್ನು ಕಾನೂನುಬಾಹಿರ ವರ್ಗಾವಣೆ ಮಾಡಿರುವದನ್ನು ಖಂಡಿಸಿ ಅತಂತ್ರವಾಗಿದ್ದ ಸಿಬ್ಬಂದಿ ಕಚೇರಿಯ ಮುಂದೆ ಎರಡನೇ ದಿನವೂ ಮೌನ ಪ್ರತಿಭಟನೆಯನ್ನು ಮುಂದುವರೆಸಿದರು.
ಬೆಂಗಳೂರಿನ ಎಂಜಿ ರಸ್ತೆ ಬಳಿಯಿರುವ ಉದಯಟಿವಿ ಕಚೇರಿ ಮಾರನ್ ಟವರ್ಸ್ ನ ಮುಖ್ಯದ್ವಾರದಲ್ಲಿ ಕೂತು ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಈ ವೇಳೆ ನೌಕರರು ಸಾಮಾಜಿಕ ಅಂತರವನ್ನು ಪಾಲಿಸಿ ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಪ್ರತಭಟನೆಯನ್ನು ಮುಂದುವರೆಸಿದ್ದಾರೆ.

ಕಾರ್ಮಿಕರು ಶಾಸನಾತ್ಮಕ ಸವಲತ್ತುಗಳನ್ನು ಕೇಳಿದ್ದಕ್ಕೆ ಪ್ರತಿಕಾರವಾಗಿ ಭಾಷೆಯೇ ಗೊತ್ತಿಲ್ಲದ ಸಿಬ್ಬಂದಿಯನ್ನು ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಿದೆ ಎಂದು ಪ್ರತಿಭಟನಾನಿರತ ಸಿಬ್ಬಂದಿ ವರ್ಗ ಆರೋಪಿಸಿದ್ದಾರೆ. ಆಡಳಿತ ಮಂಡಳಿಯು ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಜಾರಿಗೆ ತರದೇ, ಬೋನಸ್, ಕನಿಷ್ಠ ವೇತನ, ಇಂಕ್ರೀಮೆಂಟ್, ಟಿಎ, ಡಿಎ, ಇಎಸ್ ಐ, ಪಿಎಫ್ ಗಳಂತಹ ಸಾಮಾನ್ಯ ಕಾರ್ಮಿಕ ಸವಲತ್ತುಗಳನ್ನು ನೀಡದೇ ಇರುವುದೇ ಇಡೀ ಬಿಕ್ಕಟ್ಟಿಗೆ ಮೂಲ ಕಾರಣ ಎನ್ನಲಾಗುತ್ತಿದೆ.
ನ್ಯಾಯ ಸಿಗುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಶಾಸನಬದ್ಧ ಸೌಲಭ್ಯಗಳನ್ನು ಕೇಳಿದ ಮಾತ್ರಕ್ಕೆ ಉತ್ತರ ಭಾರತಕ್ಕೆ ವರ್ಗಾವಣೆ ಮಾಡಿದ್ದಾರೆ. ಅದು ಉದ್ಯೋಗ ಪ್ರಮಾಣಪತ್ರದಲ್ಲಿ ವರ್ಗಾವಣೆ ಪ್ರಸ್ತಾಪವನ್ನು ಮಾಡಿಲ್ಲ, ಆದರೂ ಕಾನೂನುಬಾಹಿರವಾಗಿ ವರ್ಗಾವಣೆ ಮಾಡಿ ಸಿಬ್ಬಂದಿಯನ್ನು ಬೀದಿಪಾಲು ಮಾಡಲಾಗಿದೆ ಎಂದು ಉದಯಟಿವಿ ಎಂಪ್ಲಾಯಿಸ್ ಯೂನಿಯನ್ ನ ಕಾರ್ಯದರ್ಶಿ ವೇಣುಗೋಪಾಲ್ ಪ್ರತಿಭಟನೆಯ ಉದ್ದೇಶವನ್ನು ವಿವರಿಸಿದರು.
ಕಾರ್ಮಿಕರನ್ನು ಶೋಷಿಸಿತ್ತಿದ್ದ ಆಡಳಿತ ವರ್ಗದ ವಿರುದ್ಧ ಕಾರ್ಮಿಕರು ಧ್ವನಿ ಎತ್ತಿದ್ದೆ ಕಾರ್ಮಿಕರ ವರ್ಗಾವಣೆಗೆ ಕಾರಣವಾಗಿದೆ ಎನ್ನುತ್ತಿದ್ದಾರೆ ಉದಯಟಿವಿ ಎಂಪ್ಲಾಯಿಸ್ ಯೂನಿಯನ್ ನ ಇತರೇ ಪದಾಧಿಕಾರಿಗಳು.
ಏತನ್ಮಧ್ಯೆ, ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆಡಳಿತಮಂಡಳಿ ಮತ್ತು ಪ್ರತಿಭಟನಾಕಾರರು ಚರ್ಚೆಗೆ ಆಹ್ವಾನಿಸುವ ಮೂಲಕ ಪ್ರತಿಭಟನಾಕಾರರ ಮನವೊಲಿಸಿದರು. ನವಂಬರ್ 30 ರಂದು ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ಚರ್ಚೆ ನಡೆಯಲಿದ್ದು, ಸಿಬ್ಬಂದಿ ವರ್ಗ ಪ್ರತಭಟನೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದರು.