Take a fresh look at your lifestyle.

ಏಳನೇ ದಿನಕ್ಕೆ ಕಾಲಿಟ್ಟ ಉದಯಟಿವಿ ಸಿಬ್ಬಂದಿಯ ಪ್ರತಿಭಟನೆ

ಸುಡು ಬಿಸಿಲಿನಲ್ಲೇ ಪ್ರತಿಭಟನೆಯಲ್ಲಿ ತೊಡಗಿರುವ ಉದಯ ಟಿವಿ ಸಿಬ್ಬಂದಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಸುಳಿವು ನೀಡಿದ್ದಾರೆ...

0
post ad

ಬೆಂಗಳೂರು : ಉದಯ ಟಿವಿ ಆಡಳಿತ ಮಂಡಳಿಯ ಕಾರ್ಮಿಕ ಅನುಚಿತ ನೀತಿ, ಕಾನೂನುಬಾಹಿರ ವರ್ಗಾವಣೆಯನ್ನು ಖಂಡಿಸಿ ಏಳನೇಯ ದಿನ ಕಚೇರಿಯ ಮುಂದೆ ಸಿಬ್ಬಂದಿ ವರ್ಗ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಉದಯಟಿವಿ ಬೆಂಗಳೂರು ಕಚೇರಿ ಕಟ್ಟಡವಾದ ಮಾರನ್ ಟವರ್ಸ್ ನ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ಸುಡು ಬಿಸಿಲಿನಲ್ಲಿ ಮೌನ ಪ್ರತಿಭಟನೆಯನ್ನು ಮುಂದುವರೆಸಿರುವ ಸಿಬ್ಬಂದಿ ವರ್ಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಸುಳಿವು ನೀಡಿದ್ದಾರೆ.
ಸಿಬ್ಬಂದಿಯನ್ನು ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಿ ಅತಂತ್ರರನ್ನಾಗಿಸಿರುವ ಆಡಳಿತ ಮಂಡಳಿಯು ಕಾರ್ಮಿಕ ಜೀವನವನ್ನೇ ಬಲಿ ಪಡೆದಿದೆ. ಕೆಲಸ ನಿರಾಕರಣೆ ಮಾಡಿದ್ದು ಮೂರು ತಿಂಗಳಿಂದ ವೇತನವಿಲ್ಲದೇ ನಮ್ಮ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ನಮಗೆ ಗೊತ್ತಿಲ್ಲ ಭಾಷೆ ಪ್ರದೇಶದಲ್ಲಿ, ಅದು ಹತ್ತು ಸಾವಿರ ಸಂಬಳದಲ್ಲಿ ಕೋಲ್ಕತ್ತಾ ಹೋಗಿ ಹೇಗೆ ಕೆಲಸ ಮಾಡಬೇಕು, ಮಾನವೀಯತೆ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಆಡಳಿತ ಮಂಡಳಿ ನಡೆದುಕೊಳ್ಳುತ್ತಿದೆ ಎಂದು ಅತಂತ್ರರಾಗಿರುವ ನೌಕರ ರಾಜೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆಡಳಿತ ಮಂಡಳಿಯು ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಜಾರಿಗೆ ತರದೇ, ಬೋನಸ್, ಕನಿಷ್ಠ ವೇತನ, ಇಂಕ್ರೀಮೆಂಟ್, ಟಿಎ, ಡಿಎ, ಇಎಸ್ ಐ, ಪಿಎಫ್ ಗಳಂತಹ ಸಾಮಾನ್ಯ ಕಾರ್ಮಿಕ ಸವಲತ್ತುಗಳನ್ನು ನೀಡದೇ ಇರುವುದನ್ನು ಪ್ರಶ್ನಿಸಿದಕ್ಕೆ ವರ್ಗಾವಣೆ ಅಸ್ತ್ರವನ್ನು ಆಡಳಿತ ಮಂಡಳಿ ಬಳಸಿರುವುದೇ ಇಡೀ ಬಿಕ್ಕಟ್ಟಿಗೆ ಮೂಲ ಕಾರಣ ಎನ್ನಲಾಗುತ್ತಿದೆ.
ಇಪ್ಪತ್ತು ವರ್ಷಗಳ ಹಿಂದೆ ಕೆಲಸಕ್ಕೆ ಸೇರಿಕೊಳ್ಳಬೇಕಾದರೆ ಉದ್ಯೋಗ ಪ್ರಮಾಣಪತ್ರದಲ್ಲಿ ವರ್ಗಾವಣೆ ಪ್ರಸ್ತಾಪವನ್ನು ಮಾಡಿಲ್ಲ, ಕಾರ್ಮಿಕ ಇಲಾಖೆಯಲ್ಲಿ ಆನ್ ಪ್ರೊಟೆಸ್ಟ್ ಹೆಸರಿನಲ್ಲಿ ಕೆಲ ಪ್ರತಗಳಿಗೆ ಸಹಿ ಹಾಕಿಸಿಕೊಂಡು ಈಗ ವರ್ಗಾವಣೆ ಅಸ್ತ್ರವನ್ನು ಬಳಸಿ ನೌಕರರನ್ನು ಬೀದಿಪಾಲು ಮಾಡಲಾಗಿದೆ ಎಂದು ಉದಯಟಿವಿ ಎಂಪ್ಲಾಯಿಸ್ ಯೂನಿಯನ್ ಆರೋಪಿಸುತ್ತಿದೆ.
ಇತ್ತಿಚೆಗೆ, ಸನ್ ಟಿವಿ ನೆಟ್‌ವರ್ಕ್ ಬೆಂಗಳೂರು ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ದೂರದ ಕೋಲ್ಕತಾ, ನೋಯ್ಡಾ, ಮುಂಬಯಿ, ಹೈದರಾಬಾದ್, ಚೆನ್ನೈ ನಗರಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.