Take a fresh look at your lifestyle.

ಮುಂದುವರೆದ ಉದಯಟಿವಿ ಸಿಬ್ಬಂದಿಯ ಪ್ರತಿಭಟನೆ

ಕಾರ್ಮಿಕ ಸವಲತ್ತುಗಳನ್ನು ನೀಡದೇ ಇರುವುದೇ ಇಡೀ ಬಿಕ್ಕಟ್ಟಿಗೆ ಮೂಲ ಕಾರಣ ಎನ್ನಲಾಗುತ್ತಿದೆ

0
post ad

ಬೆಂಗಳೂರು : ಕಾರ್ಮಿಕರ ಬಗೆಗೆ ಉದಯ ಟಿವಿ ಆಡಳಿತ ಮಂಡಳಿ ಅನುಸರಿಸುತ್ತಿರುವ ಅನುಚಿತ ನೀತಿ ಮತ್ತು ನೌಕರರನ್ನು ಕಾನೂನುಬಾಹಿರ ವರ್ಗಾವಣೆ ಮಾಡಿರುವದನ್ನು ಖಂಡಿಸಿ ಕಚೇರಿಯ ಮುಂದೆ ಸಿಬ್ಬಂದಿ ವರ್ಗ ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಬೆಂಗಳೂರಿನ ಎಂಜಿ ರಸ್ತೆ ಬಳಿಯಿರುವ ಉದಯಟಿವಿ ಕಚೇರಿ ಕಟ್ಟಡವಾದ ಮಾರನ್ ಟವರ್ಸ್ ನ ಮುಖ್ಯದ್ವಾರದಲ್ಲಿ ಕೂತು ಮೌನ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಸಿಬ್ಬಂದಿಯನ್ನು ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಿದೆ ಎಂದು ಆರೋಪಿಸಿರುವ ಪ್ರತಿಭಟನಾನಿರತ ಸಿಬ್ಬಂದಿ ವರ್ಗ ನೆನ್ನೆ ಆಡಳಿತ ಮಂಡಳಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಚರ್ಚೆಗೆ ಆಹ್ವಾನಿಸಿ ನಿರ್ಲಕ್ಷ್ಯ ಧೋರಣೆ ಅನುಸರಿಸಿತ್ತು. ಇಂದು ಸಹ ಚರ್ಚೆಯ ನೆಪ ಹೇಳಿ ಕಾರ್ಮಿಕರ ಪ್ರತಿಭಟನೆಯನ್ನು ನಿಯಂತ್ರಿಸುವ ತಂತ್ರ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಆಡಳಿತ ಮಂಡಳಿಯು ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಜಾರಿಗೆ ತರದೇ, ಬೋನಸ್, ಕನಿಷ್ಠ ವೇತನ, ಇಂಕ್ರೀಮೆಂಟ್, ಟಿಎ, ಡಿಎ, ಇಎಸ್ ಐ, ಪಿಎಫ್ ಗಳಂತಹ ಸಾಮಾನ್ಯ ಕಾರ್ಮಿಕ ಸವಲತ್ತುಗಳನ್ನು ನೀಡದೇ ಇರುವುದೇ ಇಡೀ ಬಿಕ್ಕಟ್ಟಿಗೆ ಮೂಲ ಕಾರಣ ಎನ್ನಲಾಗುತ್ತಿದೆ.
ನ್ಯಾಯ ಸಿಗುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಶಾಸನಬದ್ಧ ಸೌಲಭ್ಯಗಳನ್ನು ಕೇಳಿದ ಮಾತ್ರಕ್ಕೆ ಉತ್ತರ ಭಾರತಕ್ಕೆ ವರ್ಗಾವಣೆ ಮಾಡಿದ್ದಾರೆ. ಕಾರ್ಮಿಕರನ್ನು ಶೋಷಿಸಿತ್ತಿದ್ದ ಆಡಳಿತ ವರ್ಗದ ವಿರುದ್ಧ ಕಾರ್ಮಿಕರು ಧ್ವನಿ ಎತ್ತಿದ್ದೆ ಕಾರ್ಮಿಕರ ವರ್ಗಾವಣೆಗೆ ಕಾರಣವಾಗಿದೆ.
ಅದು ಉದ್ಯೋಗ ಪ್ರಮಾಣಪತ್ರದಲ್ಲಿ ವರ್ಗಾವಣೆ ಪ್ರಸ್ತಾಪವನ್ನು ಮಾಡಿಲ್ಲ, ಆದರೂ ಕಾನೂನುಬಾಹಿರವಾಗಿ ವರ್ಗಾವಣೆ ಮಾಡಿ ಸಿಬ್ಬಂದಿಯನ್ನು ಬೀದಿಪಾಲು ಮಾಡಲಾಗಿದೆ ಎಂದು ಉದಯಟಿವಿ ಎಂಪ್ಲಾಯಿಸ್ ಯೂನಿಯನ್ ನ ಸದಸ್ಯರು ಪ್ರತಿಭಟನೆಯ ಉದ್ದೇಶವನ್ನು ವಿವರಿಸಿದ್ದಾರೆ.

ಇತ್ತಿಚೆಗೆ, ಸನ್ ಟಿವಿ ನೆಟ್‌ವರ್ಕ್ ಬೆಂಗಳೂರು ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ದೂರದ ಕೋಲ್ಕತಾ, ನೋಯ್ಡಾ, ಮುಂಬಯಿ, ಹೈದರಾಬಾದ್, ಚೆನ್ನೈ ನಗರಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಕೋವಿಡ್ ಸಂಕಷ್ಟ ಸಮಯದಲ್ಲಿ ಆಡಳಿತ ವರ್ಗ ಕಾನೂನುಬಾಹಿರವಾಗಿ ವರ್ಗಾವಣೆ ಮಾಡಿದ್ದನ್ನು ಖಂಡಿಸುತ್ತಾ ಸಿಬ್ಬಂದಿ ಕಾರ್ಮಿಕ ಇಲಾಖೆಯನ್ನು ಆಶ್ರಯಿಸಿದ್ದರು. ವರ್ಗಾವಣೆಯನ್ನು ಸ್ವೀಕರಿಸದ ಸಿಬ್ಬಂದಿಗೆ ಸಂಸ್ಥೆ ಕೆಲಸವನ್ನು ನೀಡದೇ ಅವರನ್ನು ಅತಂತ್ರರನ್ನಾಗಿಸಿತ್ತು.