Take a fresh look at your lifestyle.

ಉದಯಟಿವಿ ಕಚೇರಿ ಮುಂದೆ ಸಿಬ್ಬಂದಿಯ ಪ್ರತಿಭಟನೆ

ಕಾನೂನುಬಾಹಿರ ವರ್ಗಾವಣೆ ಖಂಡಿಸಿ, ಅತಂತ್ರವಾಗಿದ್ದ ನೌಕರರು ಮಳೆಯನ್ನು ಲೆಕ್ಕಿಸದೆ ಕಚೇರಿಯ ಮುಂದೆ ಮೌನ ಪ್ರತಿಭಟನೆ ನಡೆಸಿದರು

0
post ad

ಬೆಂಗಳೂರು : ಕಾನೂನು ಬಾಹಿರವಾಗಿ ಕಾರ್ಮಿಕರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಉದಯಟಿವಿ ಸಿಬ್ಬಂದಿ ಮಾರನ್ ಟವರ್ಸ್ ಮುಂದೆ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಇಂದು ರಾಷ್ಟ್ರ ವ್ಯಾಪಿ ಕಾರ್ಮಿಕರು ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸುತ್ತಿರುವ ಹೊತ್ತಿನಲ್ಲಿ ಉದಯ ಟಿವಿ ನೌಕರರು ಮಳೆಯ ನಡುವೆಯೇ ಉದಯ ಟಿವಿ ಕಚೇರಿಯ ಮುಖ್ಯದ್ವಾರದಲ್ಲಿ ಕೂತು ಮೌನ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
ಕಾರ್ಮಿಕರು ಶಾಸನಾತ್ಮಕ ಸವಲತ್ತುಗಳನ್ನು ಕೇಳುವುದೇ ಮಹಾಪರಾಧವಾಗಿ ಪರಿಣಮಿಸಿರುವ ಈ ಸಂಸ್ಥೆಗೆ ಕಾರ್ಮಿಕ ಸಂಘ ಅಸ್ಥಿತ್ವಕ್ಕೆ ಬಂದಿರುವುದನ್ನು ಸಹಿಸಿಕೊಳ್ಳಲಾಗದೇ, ಪ್ರತಿಕಾರವಾಗಿ ಭಾಷೆಯೇ ಗೊತ್ತಿಲ್ಲದ ಸಿಬ್ಬಂದಿಯನ್ನು ಬಂಗಾಲಿ, ಹಿಂದಿ, ಮರಾಠಿ ಭಾಷೆಯ ಪ್ರದೇಶಗಳಿಗೆ ವರ್ಗಾವಣೆ ಮಾಡಿದೆ ಎಂದು ಪ್ರತಿಭಟನಾನಿರತ ಸಿಬ್ಬಂದಿ ವರ್ಗ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಇಪ್ಪತ್ತೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಜನಪ್ರಿಯ ವಾಹಿನಿಯಾದ ಉದಯ ಟಿವಿ ಆಡಳಿತ ಮಂಡಳಿಯು ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಜಾರಿಗೆ ತರದೇ ಇರುವುದೇ ಇಡೀ ಬಿಕ್ಕಟ್ಟಿಗೆ ಮೂಲ ಕಾರಣ ಎನ್ನಲಾಗುತ್ತಿದೆ.
ಬೋನಸ್, ಕನಿಷ್ಠ ವೇತನ, ಇಂಕ್ರೀಮೆಂಟ್, ಟಿಎ, ಡಿಎ, ಇಎಸ್ ಐ, ಪಿಎಫ್ ಗಳಂತಹ ಸಾಮಾನ್ಯ ಕಾರ್ಮಿಕ ಸವಲತ್ತುಗಳನ್ನು ನೀಡದೇ ಕಾರ್ಮಿಕರನ್ನು ಶೋಷಿಸಿತ್ತಿದ್ದ ಆಡಳಿತ ವರ್ಗದ ವಿರುದ್ಧ ಕಾರ್ಮಿಕರು ಧ್ವನಿ ಎತ್ತಿದ್ದೆ ಕಾರ್ಮಿಕರ ವರ್ಗಾವಣೆಗೆ ಕಾರಣವಾಗಿದೆ ಎನ್ನುತ್ತಿದ್ದಾರೆ ಉದಯಟಿವಿ ಎಂಪ್ಲಾಯಿಸ್ ಯೂನಿಯನ್ ನ ಪದಾಧಿಕಾರಿಗಳು.
  ಸನ್ ಟಿವಿ ನೆಟ್‌ವರ್ಕ್ ಬೆಂಗಳೂರು ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ದೂರದ ಕೋಲ್ಕತಾ, ನೋಯ್ಡಾ, ಮುಂಬಯಿ, ಹೈದರಾಬಾದ್, ಚೆನ್ನೈ ನಗರಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಕೋವಿಡ್ ಸಂಕಷ್ಟ ಸಮಯದಲ್ಲಿ ಆಡಳಿತ ವರ್ಗ ಕಾನೂನುಬಾಹಿರವಾಗಿ ವರ್ಗಾವಣೆ ಮಾಡಿದ್ದನ್ನು ಖಂಡಿಸುತ್ತಾ ಸಿಬ್ಬಂದಿ ಕಾರ್ಮಿಕ ಇಲಾಖೆಯನ್ನು ಆಶ್ರಯಿಸಿದ್ದರು. ವರ್ಗಾವಣೆಯನ್ನು ಸ್ವೀಕರಿಸದ ಸಿಬ್ಬಂದಿಗೆ ಸಂಸ್ಥೆ ಕೆಲಸವನ್ನು ನೀಡದೇ ಅವರನ್ನು ಅತಂತ್ರರನ್ನಾಗಿಸಿತ್ತು.