Take a fresh look at your lifestyle.

ಮೌನ ಪ್ರತಿಭಟನೆ ಆರಂಭಿಸಿದ ಉದಯ ಟಿವಿ ಸಿಬ್ಬಂದಿ

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾನೂನುಬಾಹಿರವಾಗಿ ನೌಕರರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸುತ್ತಾ ಉದಯ ಟಿವಿ ನೌಕರರು ಇಂದು ಕಚೇರಿಯ ಒಳಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಧರಣಿ ಮುಷ್ಕರವನ್ನು ನಡೆಸಿದರು

0
post ad

ಬೆಂಗಳೂರು : ಸನ್ ನೆಟ್‌ವರ್ಕ್ ಸಂಸ್ಥೆ ಕರ್ನಾಟಕದಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದು ನೌಕರರನ್ನು ದೂರದ ಪ್ರದೇಶಗಳಿಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಉದಯ ಟಿವಿ ಸಿಬ್ಬಂದಿ ಮೌನ ಪ್ರತಭಟನೆಯನ್ನು ನಡೆಸಿದರು.
ಸುಮಾರು ಇಪ್ಪತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ನೌಕರರನ್ನು ಬೀದಿ ತಳ್ಳಿ, ಇವರ ಜಾಗಕ್ಕೆ ಆಡಳಿತ ಮಂಡಳಿಯು ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದೆ. ಕೋವಿಡ್ ವಿಪತ್ತಿನ ನಡುವೆ ಜೀವನ ನಡೆಸಲು ಕಷ್ಟಸಾಧ್ಯವಾಗಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸದಿಂದಲೇ ನೌಕರರನ್ನು ವಜಾಗೊಳಿಸಿರುವುದರಿಂದ ಐವತ್ತಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ನೂರಾರು ಕೋಟಿ ಲಾಭಗೊಳಿಸುತ್ತಿರುವ ಉದಯ ವಾಹಿನಿ ಮಾತೃ ಸಂಸ್ಥೆ ತನ್ನ ನೌಕರರಿಗೆ ಶಾಸನಾತ್ಮಕ ಸವಲತ್ತುಗಳಾದ ಬೋನಸ್, ತುಟ್ಟಿಭತ್ಯೆಗಳನ್ನು ನೀಡದೆ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಕೆಲ ಕಾರ್ಮಿಕರಿಗೆ ಇಎಸ್ಐ – ಪಿಎಫ್ ಸೌಲಭ್ಯ ಒದಗಿಸುತ್ತಿಲ್ಲ.
ಆಡಳಿತ ವರ್ಗದ ಕಾರ್ಮಿಕ ಅನುಚಿತ ನೀತಿಗಳ ವಿರುದ್ಧ ಹಲವು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ ಜೊತೆಗೆ ಕಾರ್ಮಿಕ ನ್ಯಾಯಾಲಯ, ನ್ಯಾಯಾಧಿಕರಣಗಳಲ್ಲಿ ಹಲವು ಪ್ರಕರಣಗಳು ಬಾಕಿ ಉಳಿದಿವೆ. ನೌಕರರನ್ನು ದೂರದ ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ನಗರಳಿಗೆ ವರ್ಗಾವಣೆ ಮಾಲಡಿ ಪರೋಕ್ಷ ಶಿಕ್ಷೆಯನ್ನು ನೀಡುತ್ತಿರುವುದನ್ನು ಪ್ರತಿಭಟಿಸುತ್ತಾ, ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾನೂನುಬಾಹಿರವಾಗಿ ನೌಕರರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸುತ್ತಾ ಉದಯ ಟಿವಿ ನೌಕರರು ಇಂದು ಕಚೇರಿಯ ಒಳಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಧರಣಿ ಮುಷ್ಕರವನ್ನು ನಡೆಸಿದರು.