Take a fresh look at your lifestyle.

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜಿಸ್ ನಿಂದ ಕಾರ್ಮಿಕರಿಗೆ ಶೋಷಣೆ

ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕ ಸಂಘವನ್ನು ರಚಿಸಿಕೊಂಡಿದ್ದೇ ಸಂಸ್ಥೆಯ ಕಾರ್ಮಿಕ ಅನುಚಿತ ನೀತಿಗೆ ಕಾರಣ

0
post ad

ಮೈಸೂರು : ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲಿಸುವ ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜಿಸ್ ‘ಪ್ರೈವೇಟ್ ಲಿಮಿಟೆಡ್ ಕಂಪನಿಯ ಆಡಳಿತ ವರ್ಗದ ಕಾರ್ಮಿಕ ಅನುಚಿತ ನೀತಿಯ ವಿರುದ್ಧ ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯಿಸ್ ಯೂನಿಯನ್‍ನ ಸಲಹೆಗಾರರಾದ ಮುರಳೀಧರ್ ಪೇಶ್ವ ಧ್ವನಿ ಎತ್ತಿದ್ದಾರೆ.
ಪತ್ರಕರ್ತರ ಭವನದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿನ್ಯಾಸ್ ಇನೊವೇಟಿವ್ ಟೆಕೊಲಜಿಸ್ ‘ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸುಮಾರು 800 ಜನಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು, ಆದರೆ ಸಂಸ್ಥೆ ಕಾರ್ಮಿಕರಿಗೆ ಕಾನೂನಾತ್ಮಕ ಸೌಲಭ್ಯಗಳನ್ನು ನೀಡದೆ ಕಿರುಕುಳ ನೀಡಿ, ಇಲ್ಲಸಲ್ಲದ ಕಾರಣ ಕೊಟ್ಟು ಸುಮಾರು 400ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಆಡಳಿತ ವರ್ಗದ ಈ ರೀತಿಯ ಧೋರಣೆಗಳಿಂದ ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕ ಸಂಘವನ್ನು ರಚಿಸಿಕೊಂಡಿದ್ದರು.
ಈ ಕಾರ್ಮಿಕರು ಸಂಘದ ವತಿಯಿಂದ ಆಡಳಿತದವರಿಗೆ ಶಾಸನಾತ್ಮಕ ಸೌಲಭ್ಯಗಳನ್ನು ಕೇಳಿದ್ದನ್ನು ಸಹಿಸದ ಆಡಳಿತವರ್ಗ ಕಾರ್ಮಿಕರಿಗೆ ಮತ್ತಷ್ಟು ಶೋಷಣೆ ಮುಂದುವರಿಸಿ, ಸಂಘದ ಪದಾಧಿಕಾರಿಗಳನ್ನು ಕೆಲಸದಿಂದ ತೆಗೆಯುವ ಪ್ರಯತ್ನಗಳನ್ನು ಪ್ರಾರಂಭಿಸಿದರು. ಕಾರ್ಮಿಕರ ಐಕ್ಯತೆಯನ್ನು ಮುರಿಯುವ ಪ್ರಯತ್ನದ ಭಾಗವಾಗಿ ವೇತನದಲ್ಲಿ ತಾರತಮ್ಯ ಮಾಡಲು ಪ್ರಾರಂಭಿಸಿದರು. ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯಿಸ್ ಯೂನಿಯನ್ ಸಂಘದಲ್ಲಿ ಸಕ್ರಿಯರಾಗಿದ್ದ ಸುಮಾರು 90 ಜನ ಕಾರ್ಮಿಕರನ್ನು 19 ಜನ ಮಹಿಳಾ ಕಾರ್ಮಿಕರನ್ನು ಒಳಗೊಂಡಂತೆ 2018 ರಲ್ಲಿ ಮೈಸೂರಿನಿಂದ ಇನ್ನು ಪ್ರಾರಂಭವೇ ಆಗದಿರುವ ಆಂಧ್ರಪ್ರದೇಶದ ತಿರುಪತಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಕಾರ್ಖಾನೆಗೆ ವರ್ಗಾವಣೆ ಮಾಡಿ ತೊಂದರೆ ನೀಡಿರುತ್ತಾರೆ ಎಂದು ಮರಳೀಧರ್ ಆರೋಪಿಸಿದರು.

ಈ ಅನ್ಯಾಯವಾದ ವರ್ಗಾವಣೆಯನ್ನು ಖಂಡಿಸಿದ ಕಾರ್ಮಿಕರಿಗೆ ಮೂರು ತಿಂಗಳವರೆಗೆ ವೇತನವನ್ನು ಸಹ ಪಾವತಿಸಿಲ್ಲವಂತೆ.
ಆಂಧ್ರಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ 90 ಕಾರ್ಮಿಕರು ಕೆಲಸಕ್ಕೆ ವರದಿ ಮಾಡಿಕೊಂಡಿದ್ದರೂ ಮೂಲಭೂತ ಸೌಕರ್ಯ ಮತ್ತು ಕೆಲಸ ನೀಡದೆ ಶೋಷಣೆಗೆ ಒಳಪಡಿಸಿದೆಯಂತೆ.
ಅನ್ಯಾಯಕ್ಕೆ ಒಳಗಾದ ಕಾರ್ಮಿಕರು ನವೆಂಬರ್ 17 ರಿಂದ ಕಾರ್ಖಾನೆ ಎದುರು ನಿರಂತರ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.
ಸಂಸ್ಥೆಯ ಆಡಳಿತ ಮಂಡಳಿ ಬಿಕ್ಕಟ್ಟನ್ನು ಶೀಘ್ರದಲ್ಲಿ ಬಗೆಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಮುರಳೀಧರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಶಶಿಕುಮಾರ್, ಈಶ್ವರ್, ಚಂದ್ರಕಲಾ ಉಪಸ್ಥಿತರಿದ್ದರು.