ಇಪಿಎಫ್ ಶೇ. 24 ಏರಿಕೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ
ಶೇ. 24 ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ವಂತಿಗೆ ಮತ್ತೆ 3 ತಿಂಗಳುಗಳ ಕಾಲ ಜೂನ್ ನಿಂದ ಆಗಸ್ಟ್ 2020ರವರೆಗೆ ಪಿಎಂಜಿಕೆವೈ/ಆತ್ಮ ನಿರ್ಭರ ಭಾರತ್ ಅಡಿ ವಿಸ್ತರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟದ ಸಮ್ಮತಿ


ನವದೆಹಲಿ : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜುಲೈ 8 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೋವಿಡ್ 19 ಮಹಾಮಾರಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ/ ಆತ್ಮ ನಿರ್ಭರ ಭಾರತ ಯೋಜನೆಯ ಭಾಗವಾಗಿ ನೌಕರರ ಭವಿಷ್ಯ ನಿಧಿಯ ನೌಕರರ ಶೇ.12 ಮತ್ತು ಮಾಲೀಕರ ಶೇ.12 ವಂತಿಗೆ ಸೇರಿ ಒಟ್ಟು ನೌಕರರ ಭವಿಷ್ಯ ನಿಧಿಯ ಶೇ.24 ವಂತಿಗೆಯನ್ನು ಮುಂದಿನ ಮೂರು ತಿಂಗಳಿಗೆ ಅಂದರೆ ಜೂನ್ ನಿಂದ ಆಗಸ್ಟ್ 2020ರವರೆಗೆ ಸರ್ಕಾರವೇ ಪಾವತಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
ಈ ಅನುಮೋದನೆ 15.04.2020 ರಂದು ಪ್ರಕಟಿಸಿದ ಮಾರ್ಚ್ ನಿಂದ ಮೇ 2020ರ ವೇತನ ತಿಂಗಳುಗಳಿಗೆ ಇರುವ ಯೋಜನೆಗೆ ಹೆಚ್ಚುವರಿಯಾಗಿ ಅನುಮೋದಿಸ ಲಾಗಿದೆ.
ಇದರ ಒಟ್ಟಾರೆ ಅಂದಾಜು ರೂ 4,860 ಕೋಟಿ ಆಗಿದೆ. 3.67 ಲಕ್ಷ ಸ್ಥಾಪನೆಗಳ 72 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇದರ ಪ್ರಯೋಜನೆ ಪಡೆದುಕೊಳ್ಳಲಿದ್ದಾರೆ.
ಮುಖ್ಯಾಂಶಗಳು :
ಪ್ರಸ್ತಾಪದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಜುಲೈ ಮತ್ತು ಆಗಸ್ಟ್ 2020ರ ವೇತನ ಮಾಸದಲ್ಲಿ ಯೋಜನೆಯು 100 ಉದ್ಯೋಗಿಗಳಿಗಿಂತ ಕಡಿಮೆ ಇರುವ ಸ್ಥಾಪನೆಗಳ ಮತ್ತು ಅಲ್ಲಿ ಮಾಸಿಕ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಶೇ90ರಷ್ಟು ಅಂಥ ಉದ್ಯೋಗಳಿಗೆ ಅನುಕೂಲವಾಗಲಿದೆ.
3.67 ಲಕ್ಷ ಸ್ಥಾಪನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 72.22 ಲಕ್ಷ ಕಾರ್ಮಿಕರಿಗೆ ಇದರಿಂದ ಪ್ರಯೋಜನ ವಾಗಲಿದ್ದು, ಅವರು ಅಡ್ಡಿಗಳ ನಡುವೆಯೂ ವೇತನಪಟ್ಟಿಯಲ್ಲಿ ಮುಂದುವರಿಯಲಿದ್ದಾರೆ.
ಸರ್ಕಾರ 4800 ಕೋಟಿ ರೂಪಾಯಿಗಳ ಬಜೆಟ್ ಬೆಂಬಲವನ್ನು 2020-21ನೇ ಸಾಲಿನಲ್ಲಿ ಈ ಉದ್ದೇಶಕ್ಕಾಗಿ ಒದಗಿಸಲಿದೆ.
ಪ್ರಯೋಜನ ಒಂದರ ಮೇಲೊಂದು ಆಗುವುದನ್ನು ತಪ್ಪಿಸಲು ಜೂನ್ ನಿಂದ ಆಗಸ್ಟ್ 2020ರವರೆಗೆ ಶೇ.12ರಷ್ಟು ಮಾಲಿಕರ ವಂತಿಗೆಯನ್ನು ಪ್ರಧಾನಮಂತ್ರಿ ರೋಜ್ಗಾರ್ ಪ್ರೋತ್ಸಾಹನ ಯೋಜನೆ (ಪಿಎಂಆರ್.ಪಿ.ವೈ) ಅಡಿ ಪಡೆಯಲು ಅರ್ಹರಾಗಿರುವ ಫಲಾನುಭವಿಗಳನ್ನು ಹೊರಗಿಡಲಾಗಿದೆ.
ದೀರ್ಘಕಾಲೀನ ಲಾಕ್ ಡೌನ್ ನಿಂದಾಗಿ, ವಾಣಿಜ್ಯೋದ್ಯಮಗಳು ಮರಳಿ ತಮ್ಮ ಕಾರ್ಯದತ್ತ ಮರಳಲು ಹಣಕಾಸು ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಮಾನ್ಯ ಹಣಕಾಸು ಸಚಿವರು 13.05.2020 ರಂದು ಪ್ರಕಟಿಸಿದ ಆತ್ಮ ನಿರ್ಭರ ಭಾರತದಡಿಯ ಇಪಿಎಫ್ ಬೆಂಬಲವನ್ನು ಮತ್ತೆ ಮೂರು ತಿಂಗಳುಗಳಿಗೆ ಅಂದರೆ ವೇತನ ಮಾಸ ಜೂನ್, ಜುಲೈ ಮತ್ತು ಆಗಸ್ಟ್ 2020ಕ್ಕೆ ವಿಸ್ತರಿಸಲಾಗಿದೆ.