Take a fresh look at your lifestyle.

ಬಿಇಎಂಎಲ್ ದ್ವಾರಸಭೆಯಲ್ಲಿ ಕಾರ್ಮಿಕ ಅಧ್ಯಕ್ಷರ ಭರವಸೆ

ಇಂದಿನ ದ್ವಾರ ಸಭೆಯಲ್ಲಿ ಬೆಮೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಶ್ರಿನಿವಾಸ ರೆಡ್ಡಿ, ಕಾರ್ಯದರ್ಶಿ ಮಹೇಶ್ ರವರು beml ಖಾಸಗೀಕರಣದ ವಿರುದ್ಧ ಧ್ವನಿ ಎತ್ತಿದರು.

0
post ad

ಬೆಂಗಳೂರು : ಖಾಸಗೀಕರಣವನ್ನು ವಿರೋಧಿಸಿದರೆ, ಏನಾಗುತ್ತದೆಯೋ ? ಏನೋ ? ಎಂದು ನೌಕರರು ಭವಿಷ್ಯದ ಪರಿಣಾಮಗಳ ಬಗೆಗೆ ಹೆದರಿಕೊಳ್ಳುವ ಅಗತ್ಯವಿಲ್ಲ, ನೌಕರರ ಎಲ್ಲಾ ಸಮಸ್ಯೆಗಳಿಗೂ ಕಾರ್ಮಿಕ ಸಂಘ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ ಎಂದು  ಬೆಮೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಶ್ರಿನಿವಾಸ ರೆಡ್ಡಿ ಭರವಸೆ ಮೂಡಿಸಿ, ಧೈರ್ಯ ತುಂಬಿದರು.

ಲಾಭದಾಯಕ ಸಂಸ್ಥೆಯಾಗಿರುವ ಬಿಇಎಂಎಲ್ ಉದ್ಯಮವನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗೆಗೆ, ನೌಕರರು ಮುಂದೆ ಅನುಸರಿಸಬಹುದಾದ ಹಾದಿಗಳ ಬಗೆಗೆ ಸಂಘದ ಅಧ್ಯಕ್ಷ್ಯ ದೊಮ್ಮಲೂರು ಶ್ರೀನಿವಾಸ ರೆಡ್ಡಿ ನೌಕರರ ಜೊತೆ ಮಾಹಿತಿ ಹಂಚಿಕೊಂಡರು.
ಜೊತೆಗೆ, ದ್ವಾರ ಸಭೆಯ ವೇದಿಕೆ ಮೇಲೆ ಕಾರ್ಮಿಕ ಸಂಘದ ಇತರೆ ಪದಾಧಿಕಾರಿಗಳು ಭಾಷಣವನ್ನು ಮುಂದುವರೆಸಿದರು.
ಬಿಇಎಂಎಲ್ ನ ತಿಪ್ಪಸಂದ್ರ ಸಂಕೀರ್ಣದಲ್ಲಿ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಆಯೋಜಿಸಿರುವ ದ್ವಾರ ಸಭೆಗೆ ನೌಕರರು ಏಳು ಗಂಟೆಗೆ ಹಾಜರಿದ್ದರು.
ತಿಪ್ಪಸಂದ್ರದ ಬೆಮೆಲ್ ಕಾಂಪ್ಲೆಕ್ಸ್ ನ ಬಳಿ ಪ್ರತಿನಿತ್ಯ 7 ಗಂಟೆಯಿಂದ 8 ಗಂಟೆಯವರೆಗೂ ನಡೆಯುವ ದ್ವಾರ ಸಭೆಯು ನಡೆಯಿತುಮ. ಈ ಸಭೆಯಲ್ಲಿ ನೂರಾರು ಬಿಇಎಂಎಲ್ ಕಾರ್ಮಿಕರು ಭಾಗವಹಿಸಿ, ಸಂಸ್ಥೆಯ ಖಾಸಗೀಕರಣ ಕ್ರಮದ ವಿರುದ್ಧ ಅಸಮಾಧಾನವನ್ನು ಹೊರಹಾಕಿ, ‘ಸೇವ್ ಬೆಮೆಲ್, ಸೇವ್ ಕಂಟ್ರಿ’ ಘೋಷಣೆಗಳನ್ನು ಕೂಗಿದರು.
ಲಾಭದಾಯಕ ಸಾರ್ವಜನಿಕ ಉದ್ಯಮವಾದ ಬೆಮೆಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಿದರೆ ನೌಕರರ ಮೇಲೆ ಪ್ರಭಾವ ಬೀರುವ ಅಭದ್ರತೆಯ ಆತಂಕದಲ್ಲಿ ಪ್ರತಿನಿತ್ಯದ ದ್ವಾರ ಸಭೆಯಲ್ಲಿ ನೌಕರರು ಪಾಲ್ಗೊಳ್ಳುತ್ತಿದ್ದಾರೆ.
ಸಾರ್ವಜನಿಕ ಉದ್ಯಮ ಬಿಇಎಂಎಲ್ ಸಂಸ್ಥೆಯ ಶೇಕಡ 26ರಷ್ಟು ಷೇರುಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಟ್ಟ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಪ್ರತಿನಿತ್ಯ ದ್ವಾರ ಸಭೆಯ ಪ್ರತಿಭಟನೆಗೆ ಕನ್ನಡ ಪರ, ದಲಿತ ಪರ, ಕಾರ್ಮಿಕ ಪರ ಸಂಘಟನೆಗಳು ಬೆಂಬಲವನ್ನು ಘೋಷಿಸುತ್ತಿದ್ದು, ಸಂಘಟನೆಗಳ ಪದಾಧಿಕಾರಿಗಳು ದ್ವಾರ ಸಭೆಗೆ ಹಾಜರಾಗಿ ನೌಕರರನ್ನು ಉದ್ದೇಶಿಸಿ ಭಾಷಣಗಳನ್ನು ಮಾಡುತ್ತಿದ್ದಾರೆ.
ಸುಮಾರು 8500 ಖಾಯಂ ಉದ್ಯೋಗಿಗಳು ಹಾಗೂ ಸುಮಾರು 4500 ಗುತ್ತಿಗೆ ಕಾರ್ಮಿಕರು ಬಿಎಎಂಎಲ್ ಒಂಬತ್ತು ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.