Take a fresh look at your lifestyle.

ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಮಾ.16ರಂದು ವಿಧಾನಸೌಧ ಚಲೋ

ಖಾಸಗೀಕರಣ ವಿರೋಧಿ ವೇದಿಕೆ ಪರವಾಗಿ ವಿಐಎಸ್‌ಎಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್‌‌ ಪತ್ರಿಕಾ ಗೋಷ್ಠಿಯಲ್ಲಿ ನಡೆಸಿದರು.

0
post ad

ಭದ್ರಾವತಿ: 103 ವರ್ಷಗಳ ಐತಿಹಾಸಿಕ
ವಿಐಎಸ್‌ಎಲ್‌ ಸೇರಿದಂತೆ ಸಾರ್ವಜನಿಕ
ಉದ್ದಿಮೆಗಳನ್ನು ನಷ್ಟದ ನೆಪವೊಡ್ಡಿ
ಖಾಸಗೀಕರಣ ಮಾಡಲು ಹೊರಟಿರುವ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ
ಮಾ.16ರಂದು ವಿಧಾನಸೌಧ ಚಲೋ
ಹಮ್ಮಿಕೊಳ್ಳಲಾಗಿದೆ ಎಂದು ವಿಐಎಸ್‌ಎಲ್‌
ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್‌
ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಎಸ್‌ಎಲ್‌ ಸೇರಿದಂತೆ ಕರ್ನಾಟಕ
ಮೂಲದ ಕೇಂದ್ರ ಸಾರ್ವಜನಿಕ ಸಂಸ್ಥೆಗಳಾದ
ಬಿಇಎಂಎಲ್, ಬಿಹೆಚ್ಇಎಲ್, ಹೆಚ್ಎಎಲ್, ಬಿಇಎಲ್, ಬ್ಯಾಂಕ್‌ ಇನ್ಸೂರೆನ್ಸ್‌, ವಿಧ್ಯುತ್‌ ಕ್ಷೇತ್ರದ ಕಾರ್ಮಿಕ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ
ಸಂಘಟನೆಗಳು, ದಲಿತ ಸಂಘರ್ಷ
ಸಮಿತಿಗಳು, ಕರ್ನಾಟಕ ರಕ್ಷಣಾ ವೇದಿಕೆ,
ಕರ್ನಾಟಕ ರಣಧೀರ ಪಡೆ, ಸರ್ವ ಪಕ್ಷಗಳ
ರಾಜಕೀಯ ಮುಖಂಡರುಗಳು, ಸಿನಿಮಾ ರಂಗ
ಹಾಗೂ ಸಾರ್ವಜನಿಕರು ಜಂಟಿಯಾಗಿ
“ಖಾಸಗೀಕರಣ ವಿರೋಧಿ ವೇದಿಕೆ”
ರಚಿಸಲಾಗಿದೆ.
ವೇದಿಕೆ ನೇತೃತ್ವದಲ್ಲಿ ಮಾ. 16ರಂದು
ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಕೇಂದ್ರ
ರೈಲ್ವೆ ನಿಲ್ದಾಣದಿಂದ ವಿಧಾನಸೌಧ ಚಲೋ
ಹಮ್ಮಿಕೊಳ್ಳಲಾಗಿದೆ. ನಂತರ ಫ್ರೀಡಂಪಾರ್ಕ್‌
ಬಳಿಯಿರುವ ಕಾಳಿದಾಸ ರಸ್ತೆಯಲ್ಲಿ ಬೃಹತ್‌
ಸಭೆ ಏರ್ಪಡಿಸಿದ್ದು, ಮಾಜಿ ಪ್ರಧಾನಿ
ದೇವೇಗೌಡ, ಮಾಜಿ ಸಿಎಂ ಹಾಗೂ ವಿರೋಧ
ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ
ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು
ಮುಖಂಡರು, ಪಾಲ್ಗೊಳ್ಳಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕಾರ್ಮಿಕ ಸಂಘದ
ಪದಾಧಿಕಾರಿಗಳು ಹಾಗೂ ಕಾರ್ಯಕಾರಿ
ಸಮಿತಿ ಸದಸ್ಯರು ಉಪಸ್ಥಿತರಿದ್ದರು.