Take a fresh look at your lifestyle.

ಶೀಘ್ರದಲ್ಲಿ ಜಾರಿಗೆ ಬರುತ್ತೆ ‘ವೇತನ ಸಂಹಿತೆ-2019’

ವೇತನ ಸಂಹಿತೆ ಜಾರಿಯಾದರೆ ಕನಿಷ್ಠ ವೇತನ, ಸಮಯಕ್ಕೆ ಸರಿಯಾಗಿ ಸಂಬಳ ಪಾವತಿ ಪಕ್ಕಾ, ಕೋವಿಡ್ 19 ವೇತನ ಸಂಹಿತೆ-2019 ಮೇಲೆ ಪರಿಣಾಮ ಬೀರುತ್ತಾ ?

0
post ad

ನವದೆಹಲಿ : ದೇಶದಲ್ಲಿ ಮುಂಬರುವ ಸೆಪ್ಟೆಂಬರ್ ವೇಳೆಗೆ ವೇತನ ಸಂಹಿತೆ – 2019 ಅನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಂತಿಮ ಹೆಜ್ಜೆಯನ್ನಿಟ್ಟಿದೆ. ಕಾರ್ಮಿಕ ಕಾಯ್ದೆಗಳ ಸುಧಾರಣೆಯ ಭಾಗವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೊದಲ ಕಾನೂನು ಇದಾಗಿದೆ. ಈ ಕಾಯ್ದೆಯ ಕರಡು ನಿಬಂಧನೆಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸೃಷ್ಟಿ ಸಚಿವಾಲಯ, ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲು ಮುಂದಾಗಿದೆ. ಕೇಂದ್ರ ಕಾರ್ಮಿಕ ಸಚಿವಾಲಯವು ಕರಡು ನಿಯಮಗಳನ್ನು ಸರ್ಕಾರದ ಗೆಜೆಟ್‌ನಲ್ಲಿ ಇರಿಸಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ, ಸಂಸತ್ತು ಈ ಶಾಸನವನ್ನು ಅಂಗೀಕರಿಸಿತ್ತು. ಇದು ಪ್ರತಿಯೊಬ್ಬ ಕಾರ್ಮಿಕನಿಗೆ ಕನಿಷ್ಠ ವೇತನ ವನ್ನು ಒದಗಿಸಲು ಮತ್ತು ನೌಕರರ ವೇತನ ವಿಳಂಬವಾಗದಂತೆ ಖಾತರಿಪಡಿಸುವ ಪರಿಹಾರಗಳನ್ನು ಒಳಗೊಂಡಿದೆ.
ಆದರೆ ಕರಡು ನಿಯಮಗಳ ಬಗೆಗೆ 45 ದಿನಗಳೊಳಗೆ ಅಭಿಪ್ರಾಯಗಳನ್ನು ಸಾರ್ವಜನಿಕರು ತಿಳಿಸಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ವೇಳೆಗೆ ಕರಡು ನಿಯಮ ಜಾರಿಗೆ ಬರಲಿದೆ ಎಂದು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವೇತನ ಸಂಹಿತೆಯಿಂದ ದೇಶದಲ್ಲಿ ಸುಮಾರು 50 ಕೋಟಿ ಕಾರ್ಮಿಕರಿಗೆ ಅನುಕೂಲವಾಗಲಿದೆ.

ಕನಿಷ್ಠ ವೇತನ ಪಾವತಿ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್‌ ಪಾವತಿ ಕಾಯ್ದೆ 1965 ಮತ್ತು ಸಮಾನ ವೇತನ ಕಾಯ್ದೆ 1976 – ಈ ನಾಲ್ಕು ಕಾರ್ಮಿಕ ಸಂಬಂಧಿ ಕಾನೂನುಗಳು ಈ ಹೊಸ ಸಂಹಿತೆಯಲ್ಲಿ ಅಡಕ ಮಾಡಲಾಗಿದೆ. ನಾಲ್ಕೂ ಹಳೆಯ ಕಾಯ್ದೆಗಳ ಬದಲಿಗೆ ಹೊಸ ವೇತನ ಸಂಹಿತೆಯೇ ಇನ್ನು ಮುಂದೆ ಇರಲಿದೆ. ಈ ಕೋಡ್ ಆನ್ ವೇಜಸ್ 32 ಕೇಂದ್ರ ಕಾರ್ಮಿಕ ನಿಯಮಗಳನ್ನು ಸರಳೀಕರಣಗೊಳಿಸಿದ್ದು, ಉದ್ಯೋಗಿಗಳ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಸೂಕ್ತವಾಗಿದೆ. 2017ರ ಆ.10ರಂದು ಈ ವಿಧೇಯವು ಲೋಕಸಭೆಯಲ್ಲಿ ಮಂಡನೆಯಾಗಿತ್ತು.
ಲೋಕಸಭೆಯಲ್ಲಿ 30 ಜುಲೈ 2019 ರಂದು, ರಾಜ್ಯಸಭೆಯಲ್ಲಿ 2 ಆಗಸ್ಟ್ 2019 ರಂದು ಈ ಮಸೂದೆಯು ಅನುಮೋದನೆಗೊಂಡು, ಆಗಸ್ಟ್ 8 ರಂದು ಸಂಸತ್ತಿನಿಂದ ಒಪ್ಪಿಗೆ ದೊರೆತಿತ್ತು.

ಈಗಿರುವ ಕಾರ್ಮಿಕ ಕಾನೂನುಗಳಲ್ಲಿ ವೇತನದ ವ್ಯಾಖ್ಯಾನವನ್ನು 12 ಬಗೆಯಲ್ಲಿ ವ್ಯಾಖ್ಯಾನಿಸಲಾಗಿದ್ದು, ಕನಿಷ್ಠ ವೇತನ ಮತ್ತು ಇತರೆ ಪ್ರಯೋಜನಗಳನ್ನು ಜಾರಿಗೊಳಿಸುವುದು ಕಷ್ಟವಾಗಿತ್ತು. ಹೊಸ ಸಂಹಿತೆಯು ವ್ಯಾಖ್ಯಾನವನ್ನು ಸರಳಗೊಳಿಸಿದೆ.

ನೂತನ ಕಾರ್ಮಿಕ ಸಂಹಿತೆಯ ಪ್ರಕಾರ, ಉದ್ಯೋಗಿಗಳು ಮತ್ತು ಉದ್ಯೋಗದಾತರ ಸಂಘಟನೆಗಳು ಮತ್ತು ರಾಜ್ಯ ಸರಕಾರದ ಪ್ರತಿನಿಧಿಗಳನ್ನು ಒಳಗೊಂಡ ತ್ರಿಪಕ್ಷೀಯ ಸಮಿತಿಯು ವೇತನವನ್ನು ನಿಗದಿ ಮಾಡುತ್ತದೆ. ಒಟ್ಟಿನಲ್ಲಿ ”ಕನಿಷ್ಠ ವೇತನ ಎನ್ನುವುದು ಪ್ರತಿಯೊಬ್ಬ ಉದ್ಯೋಗಿಯ ಹಕ್ಕು ಎಂಬುದನ್ನು ಸಂಹಿತೆ ಸ್ಪಷ್ಟವಾಗಿ ವಿವರಿಸುತ್ತದೆ.

ನೂತನ ಸಂಹಿತೆಯಿಂದ ಏನು ಲಾಭ ಅಂತೀರಾ ?

* ತಿಂಗಳು, ವಾರ ಅಥವಾ ದಿನಗಳ ಆಧಾರದಲ್ಲಿ ಏನೇ ಇರಲಿ ವೇತನವನ್ನು ತಡ ಮಾಡುವಂತಿಲ್ಲ. ಇಂಥ ಸಮಸ್ಯೆಗಳನ್ನು ಈ ಸಂಹಿತೆಯು ಇತ್ಯರ್ಥ ಪಡಿಸಲಿದೆ.
* ಕನಿಷ್ಠ ವೇತನವು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಲು ಇದರಲ್ಲಿ ಆದ್ಯತೆ ನೀಡಲಾಗಿದೆ.
* ವೇತನ ನಿಗದಿಯಲ್ಲಿ ಪುರುಷ, ಮಹಿಳೆ, ಮಂಗಳಮುಖಿಯರು ಸೇರಿದಂತೆ ಪಕ್ಷಪಾತ ಮಾಡುವಂತಿಲ್ಲ.
* ವಲಯ, ವೇತನದ ಸ್ಥರಗಳು ಏನೇ ಇದ್ದರೂ, ಎಲ್ಲ ಉದ್ಯೋಗಿಗಳಿಗೂ ಸಕಾಲಕ್ಕೆ ವೇತನ ನೀಡಬೇಕೆಂದು ಕಾರ್ಮಿಕ ವೇತನ ಸಂಹಿತೆ-2019