Take a fresh look at your lifestyle.

ಕಾರ್ಮಿಕರಿಗೆ ಪೊಲೀಸ್ ಎನ್ಒಸಿ ಕಡ್ಡಾಯಗೊಳಿಸಿ ವಿಸ್ಟ್ರಾನ್ ಕಾರ್ಯಾರಂಭ

ಪೊಲೀಸರು ಪ್ರತಿಯೊಬ್ಬ ಅಭ್ಯರ್ಥಿಯ ಅಪರಾಧ ಹಿನ್ನೆಲೆಯನ್ನು ತನಿಖೆ ನಡೆಸಿದ ನಂತರ ಆಧಾರ್, ಪಾನ್ ಕಾರ್ಡ್ ತದಿತರ ಪತ್ರಗಳ ಪರಿಶೀಲನೆ ಮಾಡಿ ನಂತರ ನಿರಪೇಕ್ಷಣಾ ಪತ್ರವನ್ನು ನೀಡಿದ್ದಾರೆ.

0
post ad

ಕೋಲಾರ: ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್‌ ಕಂಪನಿಯು ಕಾರ್ಮಿಕರಿಗೆ ಷರತ್ತನ್ನು ವಿಧಿಸಿ ಪುನರ್ ಕಾರ್ಯಾರಂಭ ಮಾಡಿದೆ.
ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ವೇಮಗಲ್ ನಲ್ಲಿರುವ ವಿಸ್ಟ್ರಾನ್ ಕಂಪನಿಯು ಕಾರ್ಮಿಕರನ್ನು ಸೇರಿಸಿಕೊಳ್ಳಲು ಪೊಲೀಸ್ ಇಲಾಖೆಯ ಎನ್ ಒಸಿಯನ್ನು ಕಡ್ಡಾಯಗೊಳಿಸಿದ್ದಾರೆ. ಎನ್ ಒಸಿ ಸಲ್ಲಿಸಿದ ನಂತರವಷ್ಟೇ ಸಂಸ್ಥೆ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ.
ಈ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಯುವ ಜನಾಂಗ ಉತ್ಸುಕತೆ ತೋರುತ್ತಿದ್ದು ಪೊಲೀಸ್ ಠಾಣೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆಯಲು ಮುಗಿಬಿದ್ದಿದ್ದಾರೆ.
ಪೊಲೀಸರು ಪ್ರತಿಯೊಬ್ಬರ ಅಪರಾಧ ಹಿನ್ನೆಲೆಯನ್ನು ತನಿಖೆ ನಡೆಸಿದ ನಂತರ ಆಧಾರ್, ಪಾನ್ ಕಾರ್ಡ್ ತದಿತರ ಪತ್ರಗಳ ಪರಿಶೀಲನೆ ಮಾಡಿ ನಂತರ ನಿರಪೇಕ್ಷಣಾ ಪತ್ರವನ್ನು ನೀಡಿದ್ದಾರೆ.
ಕಳೆದ ತಿಂಗಳು 12ರಂದು ವಿಸ್ಟ್ರಾನ್ ಘಟಕದಲ್ಲಿ ಆಡಳಿತ ವರ್ಗ ಅದರಲ್ಲೂ ಗುತ್ತಿಗೆದಾರರು ವೇತನ ವಿಳಂಬ ಮತ್ತು ವೇತನ ತಾರತಮ್ಯವನ್ನು ವಿರೋಧಿಸಿ ಕಾರ್ಮಿಕರು ನಡೆಸಿದ ಘರ್ಷಣೆಯು ಅಂತರ್ ರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಘರ್ಷಣೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ನೂತನ ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕ ವೇತನ ಮತ್ತು ಅವಧಿಗಳ ನಿಯಮಗಳಲ್ಲಿ ಬದಲಾವಣೆ ತರುವ ಮುನ್ಸೂಚನೆಯನ್ನು ನೀಡಿದೆ.