Take a fresh look at your lifestyle.

300 ವಿಸ್ಟ್ರಾನ್ ಕಾರ್ಮಿಕರ ಬಂಧನ

15 ಸಾವಿರಕ್ಕೂ ಅಧಿಕ ಆ್ಯಪಲ್ ಫೋನ್ ಹಾಗೂ ಕಂಪನಿಯಲ್ಲಿ ಕೆಲಸ ಮಾಡಲು ಅಳವಡಿಸಿದ್ದ 3 ಸಾವಿರಕ್ಕೂ ಹೆಚ್ಚು ಲ್ಯಾಪ್ ಟಾಪ್ ಗಳು ಕಳುವಾಗಿರುವ ಮಾಹಿತಿ ಹೊರಬಿದ್ದಿದೆ. ದಾಂದಲೆಗೆ ಎಲ್ಲೆಡೆ ಆಕ್ರೋಶ

0
post ad

ಕೋಲಾರ: ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಇದುವರೆಗೂ 300 ಕ್ಕೂ ಹೆಚ್ಚು ಕಾರ್ಮಿಕರನ್ನ ಬಂಧಿಸಿದ್ದಾರೆ.
ನೆನ್ನೆ ಇಂದು ವಿವಿಧೆಡೆ ಬಂಧಿಸಿದ ಕಾರ್ಮಿಕರನ್ನ ಪೊಲೀಸರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ರು, ಬಂಧಿತ ಕಾರ್ಮಿಕರನ್ನ ಚಿತ್ರದುರ್ಗ, ಕೆಜಿಎಪ್ ಹಾಗು ಚಿಂತಾಮಣಿ ತಾಲೂಕಿನ ಕಾರಾಗೃಹಕ್ಕೆ ಖಾಸಗಿ ವಾಹನಗಳ ಮೂಲಕ ಪೊಲೀಸ್ ಭದ್ರತೆಯಲ್ಲಿ ಕಳಿಸಲಾಯಿತು.
ಇನ್ನು ಬಂಧನವಾಗಿ ಎಪ್ ಐ ಆರ್ ದಾಖಲಾಗಿರುವ 150 ಕ್ಕೂ ಹೆಚ್ಚು ಕಾರ್ಮಿಕರನ್ನ ಎಸ್ಪಿ ಕಚೇರಿಯ ಹಿಂಭಾಗದ ಕೊಠಡಿಯಲ್ಲಿ ಇರಿಸಲಾಗಿತ್ತು.
ತಮ್ಮ‌ ಮಕ್ಕಳ ಬಂಧನದ ವಿಚಾರ ತಿಳಿದ ಪೋಷಕರು ಎಸ್ಪಿ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೋಷಕರು, ನಿರಪರಾಧಿಗಳನ್ನೂ ಸಹ ಕರೆದುಕೊಂಡು ಬಂದಿದ್ದಾರೆ ಎಂದು ಎಸ್ ಪಿ ಕಛೇರಿ ಬಳಿ ದೂರಿದರು.
ನೆನ್ನೆ ರಾತ್ರಿ ಮನೆಯಲ್ಲಿದ್ದವರನ್ನು ಮತ್ತು ಅಮಾಯಕ ಕಾರ್ಮಿಕರನ್ನು ಪೊಲೀಸರು ಬಂಧಿಸುವುದು ಸರಿಯಲ್ಲ ಎಂಬುದು ಪೋಷಕರ‌ ಆಳಲಾಗಿದೆ.
ಇನ್ನು ಕಂಪನಿಯಲ್ಲಿ ಕಾರ್ಮಿಕರ ದಾಂದಲೆಯಿಂದ ಸುಮಾರು 50 ಕೋಟಿಗೂ ಅಧಿಕ ಬೆಲೆಬಾಳುವ ವಸ್ತುಗಳು ನಾಶವಾಗಿದ್ದು, 15 ಸಾವಿರಕ್ಕೂ ಅಧಿಕ ಆ್ಯಪಲ್ ಫೋನ್ ಹಾಗೂ ಕಂಪನಿಯಲ್ಲಿ ಕೆಲಸ ಮಾಡಲು ಅಳವಡಿಸಿದ್ದ 3 ಸಾವಿರಕ್ಕೂ ಹೆಚ್ಚು ಲ್ಯಾಪ್ ಟಾಪ್ ಗಳು ಕಳುವಾಗಿದೆ ಎಂದು‌ ತಿಳಿದುಬಂದಿದೆ.
ತಮ್ಮ ಮಕ್ಕಳನ್ನ ರಾತ್ರೋ ರಾತ್ರಿ ಬಂಧಿಸಿ ಕರೆತಂದಿರುವ ಬಗ್ಗೆ ಕಿಡಿಕಾರಿದ ಪೋಷಕರು, ರಾತ್ರಿ ಪಾಳಯದಲ್ಲಿ ಕೆಲಸ ಮಾಡದೆ ಇದ್ದವರನ್ನು ಬಂಧಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದು, ಕೃತ್ಯದಲ್ಲಿ ಭಾಗಿಯಾಗದವರನ್ನ ಬಂದಿಸಿದ್ದಾರೆಂದು ಈ ಮೂಲಕ ಪೊಲೀಸರು ದೌರ್ಜನ್ಯ ಮಾಡ್ತಿದ್ದಾರೆಂದು ಆರೋಪಿಸಿದ್ದಾರೆ.
ಇನ್ನು, ಕಾನೂನು ಅನ್ನು ಕೈಗೆ ತೆಗೆದುಕೊಂಡ ನೌಕರರ ಬಗೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಪ್ರಕರಣಗಳಿಂದ ಜಿಲ್ಲೆ, ರಾಜ್ಯ, ದೇಶಕ್ಕೆ ಮುಜುಗರವೆಂಬ ಮಾತುಗಳು ಕೇಳಿಬರುತ್ತಿವೆ.