Take a fresh look at your lifestyle.

ವಿಸ್ಟ್ರಾನ್ ಅನುಮತಿ ಪಡೆದಿರುವುದು 5 ಸಾವಿರ ಕಾರ್ಮಿಕರಿಗೆ ಮಾತ್ರ

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ವಿಸ್ಟ್ರಾನ್ ಕಂಪನಿಯ ದಾಳಿ ಪ್ರಕರಣದಲ್ಲಿ ದಿನ ಕಳೆದಂತೆ ಹಲವು ಗಹನ ವಿಚಾರಗಳು ಹೊರಬೀಳುತ್ತಿವೆ

0
post ad

ಬೆಂಗಳೂರು : ವಿಸ್ಟ್ರಾನ್ ಕಂಪೆನಿಯ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ವಿ ಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ.
ಹೌದು, ಕಾರ್ಮಿಕರ ಪರವಾನಗಿ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆಯ ಮೂಲಗಳು ಸ್ಪಷ್ಟಪಡಿಸುತ್ತಿವೆ.
ವಿಸ್ಟ್ರಾನ್ ಕಂಪೆನಿಯು ಕೋಲಾರದ ಘಟಕದ ತಯಾರಿಕಾ ಕಾರ್ಯಾಚರಣೆಗೆ ಕಾರ್ಮಿಕ ಇಲಾಖೆಯಿಂದ ಐದು ಸಾವಿರ ಕಾರ್ಮಿಕರಿಗೆ ಮಾತ್ರ ಅನುಮತಿಯನ್ನು ಕೋರಿದೆ. ಅದೇ ಪ್ರಮಾಣದ ಕಾರ್ಮಿಕರಿಗೆ ಪರವಾನಗಿಯನ್ನು ಪಡೆದುಕೊಂಡಿದೆ.
ಕಾರ್ಮಿಕ ಇಲಾಖೆಯ ಫ್ಯಾಕ್ಟರೀಸ್ ಅಂಡ್ ಬಾಯ್ಲರ್ ವಿಭಾಗ ಮಾಹಿತಿಗಳು ಐದು ಸಾವಿರ ಕಾರ್ಮಿಕರ ಲೈಸನ್ಸ್ ಅನ್ನು ದೃಡಪಡಿಸಿವೆ.
ಅನುಮತಿ ಪಡೆದ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿಯ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕಾರ್ಮಿಕ ಅಧಿಕಾರಿಗಳು ಮುಂದಾಗುವ ಸಾದ್ಯತೆ ಇದೆ.
ಐದು ಸಾವಿರ ಕಾರ್ಮಿಕರಿಗೆ ಅನುಮತಿ ಪಡೆದು ಅವರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಂಸ್ಥೆ ವಿಫಲವಾಗಿದೆ ಎಂಬ ಮಾಹಿತಿಯು ಕಾರ್ಮಿಕ ಭವನದಲ್ಲಿ ಹರದಾಡುತ್ತಿದೆ.
ಅನುಮತಿಗಿಂತ ಎರಡು ಪಟ್ಟು ಅಂದ್ರೆ ಸುಮಾರು10,000 ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುವುದು ಕಾರ್ಮಿಕ ಇಲಾಖೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ.
ಇನ್ನು, ಕಾರ್ಮಿಕ ಸಹಾಯಕ ಆಯುಕ್ತರು ಎಷ್ಟು ಗುತ್ತಿಗೆ ಕಾರ್ಮಿಕರ ಅನುಮತಿಗೆ ಲೈಸನ್ಸ್ ನೀಡಿದ್ದಾರೆ ಎಂಬುದು ಕಾರ್ಮಿಕ ಅಧಿಕಾರಿಗಳ ಗೊಂದಲಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ.
ಒಟ್ಟಾರೆ, ವೇತನದ ವಿಳಂಬ ಮತ್ತು ವೇತನ ಸ್ಥಗಿತಗಳೇ ಈ ಘರ್ಷಣೆಗೆ ಮೂಲ ಕಾರಣವೆಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ.
ಕಾರ್ಮಿಕ ಸಂಘಟನೆಗಳ ಹೊರತಾಗಿ ಕೆಲ ಸಂಘಟನೆಗಳನ್ನು ಇಲ್ಲಿನ ನೌಕರರು ವೇತನ ಸಂಬಂಧ ಸಂಪರ್ಕಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಪೊಲೀಸರು ಈ ಬಗೆಗೆ ತನಿಖೆಯನ್ನು ನಡೆಸುತ್ತಿದ್ದಾರೆ. ತನಿಖೆಗಳ ನಂತರ ಸತ್ಯಾಸತ್ಯತೆಗಳು ಹೊರಬೀಳಲಿವೆ.