Take a fresh look at your lifestyle.

ಕಾರ್ಮಿಕರಿಗಾಗಿ ಸಹಾಯವಾಣಿ ಆರಂಭ

ದಾಳಿ ಪ್ರಕರಣ ಮತ್ತು ಕಾರ್ಮಿಕ ವೇತನಗಳ ಬಗೆಗೆ ಪ್ರಕಟಣೆಯನ್ನು ವಿಸ್ಟ್ರಾನ್ ಮತ್ತು ಆ್ಯಪಲ್ ಸಂಸ್ಥೆಗಳು ಬಿಡುಗಡೆ ಮಾಡಿವೆ

0
post ad

ಕೋಲಾರ: ವಿಸ್ಟ್ರಾನ್ ಕಂಪನಿಯು ಕೋಲಾರ ಘಟಕದಲ್ಲಿ ಕಾರ್ಮಿಕರ ನೆರವಿಗಾಗಿ 24 ಗಂಟೆ ಸಹಾಯವಾಣಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಇದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹಾಟ್​ಲೈನ್ ಸೇವೆ ಇರಲಿದ್ದು, ಕಾರ್ಮಿಕರು ಅಜ್ಞಾತವಾಗಿ ತಮ್ಮ ಸಮಸ್ಯೆಯನ್ನ ತೋಡಿಕೊಳ್ಳಲು ಸಹಾಯ ಮಾಡಿಕೊಡುತ್ತದೆ ಎಂದು ವಿಸ್ಟ್ರಾನ್ ಕಾರ್ಪೊರೇಷನ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವುದಾಗಿ ಆ್ಯಪಲ್ ಸಂಸ್ಥೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಹೆಚ್ಚುವರಿ ಕೆಲಸ ಮಾಡಿಸಿಕೊಂಡಿದ್ದರಿಂದ ವೇತನದಲ್ಲಿ ಏರುಪೇರು ಉಂಟಾಗಿದೆ, ಅಕ್ಟೋಬರ್ ಹಾಗು ನವೆಂಬರ್ ನಲ್ಲಿ ವೇತನ ಸಮಸ್ಯೆ ಆಗಿರೋದು ಕಂಡುಬಂದಿದೆ, ವಿಸ್ಟ್ರಾನ್ ಕಂಪನಿಯಲ್ಲಿನ ಸಮಸ್ಯೆಗಳನ್ನ ಬಗೆಹರಿಸಲು ತಡವಾಗಿದೆ,
ಇದರಿಂದ ಆ್ಯಪಲ್ ಸಂಸ್ಥೆಗೂ ಬೇಸರವಾಗಿದೆ, ವಿಸ್ಟ್ರಾನ್ ಕಂಪನಿಯು ಏಜೆನ್ಸಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಿದೆ,
ಇಂತಹ ಘಟನೆಗಳು ಮರುಕಳಿಸದಂತೆ 24 ಗಂಟೆ ಸಹಾಯವಾಣಿ ತೆರೆದಿದ್ದೇವೆ. ಇಂಗ್ಲೀಷ್ ಸೇರಿದಂತೆ ಸ್ಥಳೀಯ ಭಾಷೆಯಲ್ಲಿ ಸಹಾಯವಾಣಿ ಸೌಲಭ್ಯ ಲಭ್ಯವಾಗಲಿದೆ.
ನಿಗದಿತ ಕ್ರಮ ಜರುಗಿಸುವವರೆಗೂ ಆ್ಯಪಲ್ ಸಂಸ್ಥೆಯಿಂದ ವಿಸ್ಟ್ರಾನ್ ಕಂಪನಿ ಜೊತೆಗಿನ ವ್ಯವಹಾರ ಸ್ಥಗಿತಗೊಳ್ಳಲಿದೆ ಎಂದು ಆಪಲ್ ಕಂಪನಿ ಹೇಳಿದೆ.
ಕಳೆದ ವಾರ ವಿಸ್ಟ್ರಾನ್ ಕಂಪನಿಯ ಕೋಲಾರ ಘಟಕದಲ್ಲಿ ನಡೆದ ಕಾರ್ಮಿಕರ ದಾಳಿ ಪ್ರಕರಣ ಇದೀಗ ಆ ಕಂಪನಿಗೆ ಉಸಿರುಗಟ್ಟಿಸುತ್ತಿದೆ. ಕಂಪನಿಯಲ್ಲಿ ಕಾರ್ಮಿಕರಿಗೆ ಅನ್ಯಾಯ ಆಗಿದೆ ಎಂಬ ಆರೋಪವನ್ನು ವಿಸ್ಟ್ರಾನ್ ಒಪ್ಪಿಕೊಂಡಿದ್ದು, ಕಾರ್ಮಿಕರಿಗೆ ಕ್ಷಮೆ ಕೂಡ ಕೋರಿದೆ.
ಕಂಪನಿಯ ಭಾರತೀಯ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನ ವಜಾಗೊಳಿಸಿದೆ.
ಇವುಗಳ ನಡುವೆ, ಆ್ಯಪಲ್ ಸಂಸ್ಥೆ ಕೂಡ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಘಟಕವನ್ನು ಪರೀಕ್ಷಣೆಯಲ್ಲಿರಿಸಿದೆ.
ಈ ದಾಳಿ ಪ್ರಕರಣ ಮತ್ತು ಕಾರ್ಮಿಕ ವೇತನಗಳ ಬಗೆಗೆ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಅದರ ‌ಸಾರಾಂಶವನ್ನು ನೋಡುವುದಾದರೆ,  ಇದು ಹೊಸ ಘಟಕವಾಗಿದ್ದು ನಾವು ವಿಸ್ತರಣೆ ಮಾಡುವಾಗ ತಪ್ಪುಗಳಾಗಿವೆ. ಲೇಬರ್ ಏಜೆನ್ಸಿಗಳು ಹಾಗೂ ಪೇಮೆಂಟ್ ವಿಚಾರದಲ್ಲಿ ನಮ್ಮ ವ್ಯವಸ್ಥೆ ಇನ್ನೂ ಸಮರ್ಪಕವಾಗಬೇಕಿದೆ. ಈಗ ಆಗಿರುವ ತಪ್ಪನ್ನು ಸರಿಪಡಿಸಲು ಶಿಸ್ತು ಕ್ರಮ ಒಳಗೊಂಡಂತೆ ತತ್​ಕ್ಷಣದ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದೇವೆ” ಎಂದು ವಿಸ್ಟ್ರಾನ್ ಕಾರ್ಪೊರೇಷನ್ ಸಂಸ್ಥೆ ಹೇಳಿಕೆ ನೀಡಿದೆ. ಅದರಂತೆ, ಕಂಪನಿಯ ಭಾರತದ ಕಾರ್ಯಾಚರಣೆಗಳನ್ನ ನಿಭಾಯಿಸುತ್ತಿದ್ದ ಉಪಾಧ್ಯಕ್ಷ ವಿನ್ಸೆಂಟ್ ಲೀ ಅವರನ್ನ ವಜಾಗೊಳಿಸಲು ನಿರ್ಧರಿಸಿದೆ.
ನಮ್ಮ ಕಂಪನಿಯ ಭಾರತದ ವ್ಯವಹಾರಗಳನ್ನ ನೋಡಿಕೊಳ್ಳುವ ಉಪಾಧ್ಯಕ್ಷರನ್ನ ಕಿತ್ತುಹಾಕುತ್ತಿದ್ದೇವೆ. ಇಂಥ ಸಮಸ್ಯೆಗಳು ಮತ್ತೊಮ್ಮೆ ತಲೆದೋರದಂತೆ ನಮ್ಮ ವ್ಯವಸ್ಥೆಯನ್ನ ಬಲಪಡಿಸುತ್ತಿದ್ದೇವೆ. ನಮ್ಮ ತಂಡಗಳ ಪುನಾರಚನೆ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.