Take a fresh look at your lifestyle.

ರಾಜ್ಯದಲ್ಲಿ ವೇತನ ಸಹಿತ ರಜೆ ದಿನಗಳ ಹೆಚ್ಚಳ

ನೆರೆಯ ರಾಜ್ಯಗಳಲ್ಲಿ ಕಾರ್ಮಿಕರ ವಾರ್ಷಿಕ ರಜೆಗಳನ್ನು ನೋಡುವುದಾದರೆ, ಆಂಧ್ರದಲ್ಲಿ 65, ತಮಿಳುನಾಡಿನಲ್ಲಿ 45, ಮಧ್ಯಪ್ರದೇಶದಲ್ಲಿ 90 ದಿನ, ಗುಜರಾತ್‌ನಲ್ಲಿ 67 ದಿನದ ವೇತನ ಸಹಿತ ರಜೆ ಜಾರಿಯಲ್ಲಿವೆ

0
post ad

ಬೆಂಗಳೂರು : ರಾಜ್ಯ ಸರ್ಕಾರವು ಕಾರ್ಮಿಕರಿಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಕಾರ್ಮಿಕರ ವೇತನ ಸಹಿತ ರಜೆ ಸಂಖ್ಯೆಯನ್ನು ಹೆಚ್ಚಿಸಿದೆ.
ವಾರ್ಷಿಕ ಕಾರ್ಮಿಕರ ವೇತನ ಸಹಿತ ರಜೆ ಸಂಖ್ಯೆಯನ್ನು 30 ರಿಂದ 45 ಕ್ಕೆ ಹೆಚ್ಚಿಸುವ 2020 ಸಾಲಿನ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ವಿಧೇಯಕಕ್ಕೆ ಸದನ ಅನುಮೋದನೆ ನೀಡಿದೆ.
ಉದ್ಯಮಗಳಿಗೆ ಅನುಕೂಲ ಮತ್ತು ಕಾರ್ಮಿಕ ಹಿತರಕ್ಷಣೆಗೂ ಸರಕಾರ ಬದ್ಧವಾಗಿದೆ. ಇದುವರೆಗೆ ಒಬ್ಬ ಕಾರ್ಮಿಕ ವರ್ಷಕ್ಕೆ 30 ದಿನ ಸಂಬಳ ಸಹಿತ ರಜೆ ಪಡೆಯಲು ಇದ್ದ ಅವಕಾಶವನ್ನು 45 ದಿನಕ್ಕೆ ಹೆಚ್ಚಳ ಹಾಗೂ ಆ ವರ್ಷದಲ್ಲಿ ಕಾರ್ಮಿಕ ರಜೆ ಬಳಸಿಕೊಳ್ಳದಿದ್ದಲ್ಲಿ ಮುಂದಿನ ವರ್ಷಕ್ಕೂ ಕ್ಯಾರಿಒವರ್‌ (ಮುಂದುವರಿಕೆ) ಆಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ಇನ್ನು, ನೆರೆಯ ರಾಜ್ಯಗಳಲ್ಲಿ ಕಾರ್ಮಿಕರ ವಾರ್ಷಿಕ ರಜೆಗಳನ್ನು ನೋಡುವುದಾದರೆ, ಆಂಧ್ರದಲ್ಲಿ 65, ತಮಿಳುನಾಡಿನಲ್ಲಿ 45, ಮಧ್ಯಪ್ರದೇಶದಲ್ಲಿ 90 ದಿನ, ಗುಜರಾತ್‌ನಲ್ಲಿ 67 ದಿನದ ವೇತನ ಸಹಿತ ರಜೆ ಜಾರಿಯಲ್ಲಿವೆ.