Take a fresh look at your lifestyle.

ಟೊಯೋಟಾ ಕಿರ್ಲೋಸ್ಕರ್ ಲಾಕ್ ಔಟ್ ಬಿಕ್ಕಟ್ಟು ಶೀಘ್ರದಲ್ಲಿ ಶಮನ ಸಿಎಂ

ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.

0
post ad

ಬೆಂಗಳೂರು/ರಾಮನಗರ : ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಕಾರ್ಮಿಕರ ಪ್ರತಿಭಟನೆ ಮತ್ತು ಕಂಪನಿ ತಾತ್ಕಾಲಿಕವಾಗಿ ಲಾಕೌಟ್​ ಬಿಕ್ಕಟ್ಟು ಶೀಘ್ರದಲ್ಲೆ ಬಗೆಹರಿಸಲಾಗುವುದೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಕಂಪನಿಯ ಕಾರ್ಮಿಕರು ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ತಾತ್ಕಾಲಿಕ ಲಾಕೌಟ್ ಘೋಷಿಸಿತ್ತು.
ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಮತ್ತು ಕಾರ್ಮಿಕರ ಪ್ರತಿಭಟನೆಯ ಬಿಕ್ಕಟ್ಟು ಕಳೆದ ಒಂಬತ್ತು ದಿನಗಳಿಂದ ಮುಂದುವರೆದಿದ್ದವು.
ಟೊಯೋಟಾ ಕಿರ್ಲೋಸ್ಕರ್​ ಮೋಟಾರ್​ ಕಂಪನಿಯ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಸುಮಾರು 3500 ಕಾರ್ಮಿಕರು ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರಕರಣ ನನ್ನ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಸಚಿವರಿಗೆ ಶೀಘ್ರದಲ್ಲಿ ಬಿಕ್ಕಟ್ಟು ಶಮನ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮೂಲಕ ತಿಳಿಸಿದ್ದಾರೆ.


ಇನ್ನು, ಈ ಬಗೆಗೆ ನೆನ್ನೆ ಪ್ರತಿಕ್ರಿಯೆ ನೀಡಿದ್ದ ಕಾರ್ಮಿಕ ಸಚಿವರು, ಡಿಸಿಎಂ ಅಶ್ವತ್ಥ ನಾರಾಯಣ ಜೊತೆ ಇಂದು ವಿಕಾಸ ಸೌಧದಲ್ಲಿ ಸಂಧಾನ ಸಭೆ ನಡೆಸಿ ಬಿಕ್ಕಟ್ಟು ಶಮನಗೊಳಿಸುವುದಾಗಿ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದರು.