Take a fresh look at your lifestyle.

ಟಿಕೆಎಂ ಕಾರ್ಮಿಕರಿಂದ ಯುವ ದಿನಾಚರಣೆ

ಬಿಡದಿ ಇಂಡಸ್ಟ್ರೀಯಲ್ ಏರಿಯಾದ ಇತರೆ ಕಂಪನಿಗಳ ಕಾರ್ಮಿಕರು ಟೊಯೋಟಾ ಕಾರ್ಮಿಕ ಸಂಘದ ಹೋರಾಟಕ್ಕೆ ಬೆಂಬಲವಾಗಿ ನಿಂತು ಹೋರಾಟಕ್ಕೆ ಮತ್ತಷ್ಟು ಶಕ್ತಿಯನ್ನು ನೀಡುತ್ತಿದ್ದಾರೆ

0
post ad

ಬಿಡದಿ: ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪೆನಿಯ  ಆಡಳಿತ ವರ್ಗದ ಅಸಹಜ ಕಾರ್ಮಿಕ ನೀತಿಯನ್ನು ಖಂಡಿಸಿ ನಡೆಸುತ್ತಿರುವ ಹೋರಾಟದ ಭಾಗವಾಗಿ ಕಾರ್ಮಿಕರು ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಿದರು.

ಸ್ವಾಮಿ ವಿವೇಕಾನಂದರ 157ನೇ ಜಯಂತಿ ಅಂಗವಾಗಿ ಕಾರ್ಮಿಕರು ಪ್ರತಿಭಟನಾ ಸ್ಥಳದಲ್ಲಿ ಅವರು ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಯುವ ದಿನಾಚರಣೆಯನ್ನು ಆಚರಿಸಿದರು.


ಇಂದಿಗೆ ಕಾರ್ಮಿಕರ ಸ್ವಾಭಿಮಾನಿ ಹೋರಾಟವು 65 ನೇ ದಿನಕ್ಕೆ ಕಾಲಿಟ್ಟಿದೆ. ಟಿಕೆಎಂ ಕಾರ್ಮಿಕೆರಲ್ಲರೂ ಸ್ವಾಮಿ ವಿವೇಕಾನಂದ ಅವರಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಒಗ್ಗಟು ಪ್ರದರ್ಶಿಸಿದರು.
ಟೊಯೋಟಾ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾತನಾಡಿ ವಿವೇಕಾನಂದ ಅವರ ಆದರ್ಶಗಳೇ ಯುವಕರಿಗೆ ಸ್ಪೂರ್ತಿ ಎಂದು ತಿಳಿಸಿದರು.
ನೆನ್ನೆ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಕಾರ್ಮಿಕ ಸಂಘದೊಂದಿಗೆ ಸಭೆ ಮಾಡಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಜೊತೆಗೆ ಇಂದು  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣವಾದ ಬೆಂಬಲ ನೀಡಿ ಆಡಳಿತವರ್ಗ ಹಾಗೂ ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಅಲ್ಲದೆ,  ಇಂದಿನ ಹೋರಾಟಕ್ಕೆ CITU ನ ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಗೋಪಾಲಗೌಡ, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಸಿಂಹ ಆಗಮಿಸಿ ಬೆಂಬಲ ಸೂಚಿಸಿದರು
ಇಂದಿನಿಂದ ಬಿಡದಿ ಇಂಡಸ್ಟ್ರೀಯಲ್ ಏರಿಯಾದ ಇತರೆ ಉಳಿದ ಕಂಪನಿಯ ಕಾರ್ಮಿಕರು ಟೊಯೋಟಾ ಕಾರ್ಮಿಕ ಸಂಘದ ಹೋರಾಟಕ್ಕೆ ಬೆಂಬಲವಾಗಿ ನಿಂತು ಹೋರಾಟದಲ್ಲಿ ಭಾಗವಹಿಸಿ ಟಿಕೆಎಂ ಕಾರ್ಮಿಕರ ಹೋರಾಟಕ್ಕೆ ಮತ್ತಷ್ಟು ಶಕ್ತಿಯನ್ನು ನೀಡುತ್ತಿದ್ದಾರೆ.